spot_img
Wednesday, April 1, 2026
spot_img

ಕೋಟ ಶ್ರೀದೇವಿ ಜ್ಯುವೆಲರ್ಸ್‌ನಲ್ಲಿ 39ನೇ ವರ್ಷದ ಅಕ್ಷಯ ತೃತೀಯಾ ವಿಶೇಷ ಕೊಡುಗೆ


ಕೋಟ ಶ್ರೀ ದೇವಿ ಜ್ಯುವೆಲರ್ಸ್‌ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಮಾರಾಟವು ಆರಂಭಗೊಂಡಿತು. ಈ ಸಂಸ್ಥೆ 39 ವರ್ಷಗಳಿಂದ ಚಿನ್ನಾಭರಣ ಮಾರಾಟದಲ್ಲಿ ವಿಶಾಸಾರ್ಹ ಸಂಸ್ಥೆಯಾಗಿ ಬೆಳೆದು ಬಂದಿದ್ದು, ಈ ಬಾರಿ 5ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿ ಮಾಡುವ ಗ್ರಾಹಕರಿಗೆ ಬೆಳ್ಳಿ ನಾಣ್ಯ ಕೊಡುಗೆ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಗೀತಾನಂದ ಫೌಂಡೇಶನ್ ಪ್ರವರ್ತಕರಾದ ದಿವ್ಯಾಲಕ್ಷ್ಮೀ ಪ್ರಶಾಂತ್ ಕುಂದರ್ ಮತ್ತು ವೈಷ್ಣವಿ ರಕ್ಷಿತ್ ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕೋಟ ಶ್ರೀ ದೇವಿ ಜುವೆಲರ್ಸ್ ಗ್ರಾಹಕರ ಬೇಡಿಕೆಗೆ ಪೂರಕವಾಗಿ ಚಿನ್ನಾಭರಣಗಳನ್ನು ಕಡಿಮೆ ತೂಕದಲ್ಲಿ ಆಭರಣ ತಯಾರಿಸುವಲ್ಲಿ ಹೆಸರುವಾಸಿಯಾಗಿದೆ. ಸಂಸ್ಥೆಯ ಮುಖ್ಯಸ್ಥ ಸೀತಾರಾಮ ಆಚಾರ್ ಅವರು ಸಾಮಾಜಿಕ ಸೇವೆಯ ಜನತೆಗೆ ವ್ಯವಹಾರಿಕ ಯಶಸ್ವಿಯಾಗಿದ್ದಾರೆ ಎಂದರು ಇವರ ಸಂಪಾದನೆಯ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟಿದಾರೆ. ರೋಟರಿ ಕ್ಲಬ್ ಮುಂತಾದ ಸಂಘ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ವಿಚಾರ ಎಂದು ಅಭಿಪ್ರಾಯ ಪಟ್ಟರು.

ಸೀತಾರಾಮ ಆಚಾರ್ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಂಸ್ಥೆಯು ಗ್ರಾಹಕ ಸೇವೆಗೆ ಪ್ರಥಮ ಆದ್ಯತೆ ನೀಡುತ್ತಿದೆ ಎಂದರು.

ಸೌಮ್ಯ ಸೀತಾರಾಮ ಆಚಾರ್, ಪೂಜಾ, ಸಿಂಧೂ, ಶರಣ್ಯ ಮತ್ತು ವರುಣ್ ಸುಲತಾ ಉಪಸ್ಥಿತರಿದ್ದರು. ರೋಟರಿ ಮತ್ತು ಲಯನ್ಸ್ ಕ್ಲಬ್ ಸದಸ್ಯರು ಶುಭ ಹಾರೈಸಿದರು. ದಿವ್ಯಾ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!