spot_img
Friday, August 14, 2026
spot_img

ಕುಂದಾಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ‘ವಾತ್ಸಲ್ಯ ವಿದ್ಯಾನಿಧಿ’ ವಿತರಣೆ

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ-2 ಯೋಜನಾ ಕಛೇರಿ ವ್ಯಾಪ್ತಿಯಲ್ಲಿ ಮಾಶಾಸನ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಕುಟುಂಬದ ಒಟ್ಟು 5 ಮಂದಿ ವಿದ್ಯಾರ್ಥಿಗಳಿಗೆ ‘ವಾತ್ಸಲ್ಯ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಶುಕ್ರವಾರ ಯೋಜನಾ ಕಛೇರಿಯಲ್ಲಿ ನಡೆಯಿತು.

ವಿದ್ಯಾನಿಧಿ ಯೋಜನೆಯನ್ನು ವಿತರಣೆ ಮಾಡಿದ ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿಗಳ ತಾಲೂಕು ಒಕ್ಕೂಟದ ಅಧ್ಯಕ್ಷರಾದ ರಾಧಾ ದಾಸ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಪಾಲುದಾರ ಕುಟುಂಬಗಳ ಸರ್ವೋತೋಮುಖ ಏಳಿಗೆಯಲ್ಲಿ ಗ್ರಾಮಾಭಿವೃದ್ಧಿಯ ಪಾತ್ರ ಪ್ರಮುಖವಾಗಿದೆ. ಹಲವು ಕಾರ್ಯಕ್ರಮಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುವ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡ ಶಿಷ್ಯವೇತನ, ವಿದ್ಯಾನಿಧಿ ಯೋಜನೆಯಂತಹ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇದರ ಪ್ರಯೋಜನೆ ಪಡೆದ ಮಕ್ಕಳು ಉತ್ತಮ ವಿದ್ಯಾವಂತರಾಗಿ ಹೊರಹೊಮ್ಮಲಿ. ಇವರ ಭವಿಷ್ಯ ಉಜ್ವಲವಾಗಿರಲಿ ಎಂದರು.

ಕಾರ್ಯಕ್ರಮದ ಕುರಿತು ಯೋಜನಾಧಿಕಾರಿ ಸುಧೀರ್ ಹಂಗಳೂರು ಮಾತನಾಡಿ, ಡಾ|ಡಿ ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಪರಿಕಲ್ಪನೆಯ ವಾತ್ಸಲ್ಯ ಕಾರ್ಯಕ್ರಮ ಹಾಗೂ ಇದರ ಉದ್ದೇಶದ ಕುರಿತು ಪೋಷಕರು ಹಾಗೂ ಮಕ್ಕಳಿಗೆ ತಿಳಿಸಿದರು. ತಾಲೂಕಿನಲ್ಲಿ ತೀರಾ ಹಿಂದುಳಿದ ನಿರ್ಗತಿಕ / ಅಶಕ್ತರಿಗೆ ಮಾಸಿಕ ಮಾಶಾಸನ ಸೌಲಭ್ಯವನ್ನು ನೀಡಲಾಗುತ್ತಿದ್ದು, ಈ ಮೊತ್ತವು ಅವರ ವೈದ್ಯಕೀಯ ಖರ್ಚಿಗೆ, ಜೀವನ ನಿರ್ವಹಣೆಗೆ ಸಹಕಾರಿಯಾಗುತ್ತಿದೆ. ಇಷ್ಟೇ ಅಲ್ಲದೇ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳ ಮಕ್ಕಳು ಶಾಲಾ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದರೇ, ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ “ವಾತ್ಸಲ್ಯ ವಿದ್ಯಾನಿಧಿ”ಯನ್ನ ಕೂಡ ನೀಡಲಾಗುತ್ತಿದೆ. ವಿದ್ಯಾನಿಧಿ ಯೋಜನೆಯಡಿಯಲ್ಲಿ ಶಾಲಾ ಬ್ಯಾಗ್, ನೋಟ್ ಪುಸ್ತಕ, ಛತ್ರಿ, ಶಾಲಾ ಶುಲ್ಕ ಪಾವತಿಯ ಮೊತ್ತವನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಕುಂದಾಪುರ ತಾಲೂಕಿನಲ್ಲಿ ಒಟ್ಟು 78 ಮಂದಿ ಫಲಾನುಭವಿಗಳು ಮಾಸಿಕ ರೂ.1000ದಂತೆ ಮಾಶಾಸನ ಮೊತ್ತವನ್ನು ಪಡೆಯುತ್ತಿದ್ದು, ಕಳೆದ 4 ವರ್ಷದಿಂದೀಚೆಗೆ ಒಟ್ಟು 42 ವಾತ್ಸಲ್ಯ ಕಿಟ್ ವಿತರಣೆ, ಮನೆ ಇಲ್ಲದ 2 ಫಲಾನುಭವಿಗಳಿಗೆ ವಾತ್ಸಲ್ಯ ಮನೆ ರಚನೆ, ಓರ್ವ ಫಲಾನುಭವಿಗೆ ಮನೆ ರಿಪೇರಿ ಮಾಡಿ ಕೊಡಲಾಗಿರುತ್ತದೆ. ವಿದ್ಯಾನಿಧಿ ಯೋಜನೆಯನ್ನು ಈವರೆಗೆ ಒಟ್ಟು 14 ಮಂದಿ ಮಕ್ಕಳಿಗೆ ವಿತರಣೆ ಮಾಡಲಾಗಿರುತ್ತದೆ ಎಂದರು.

ಜಿಲ್ಲಾ ಕಾನೂನು ಪ್ರಾಧಿಕಾರ, ಉಡುಪಿ ಜಿಲ್ಲೆ ಪಿ.ಎಲ್.ವಿಯ ತಿಲೋತ್ತಮ ನಾಯ್ಕ್ ಶುಭಹಾರೈಸಿದರು.

ತಾಲೂಕು ಜ್ಞಾನವಿಕಾಸ ಸಮನ್ವಯಾಧಿರಿಕಾರಿ ಕವಿತಾ ಗೌಡ ನಿರೂಪಿಸಿ, ಮೇಲ್ವಿಚಾರಕಿ ಶರ್ಮಿಳಾ ಜಿ ಸ್ವಾಗತಿಸಿ, ಕೃಷಿ ಮೇಲ್ವಿಚಾರಕರಾದ ಪ್ರದೀಪ್ ಕುಮಾರ್ ವಂದಿಸಿದರು. ಈ ಸಂದರ್ಭ ವಿದ್ಯಾನಿಧಿ ಯೋಜನೆಯ ವಿದ್ಯಾರ್ಥಿಗಳು, ಫೋಷಕರು, ತಲೂಕಿನ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು, ಯೋಜನಾ ಕಛೇರಿಯ ಹಣಕಾಸು ಪ್ರಬಂಧಕರು, ಸಹಾಯಕ ಪ್ರಬಂಧಕರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!