spot_img
Saturday, September 26, 2026
spot_img

ಕುಂದಾಪುರದ ಸೃಷ್ಟಿ ಇನ್ಫಾಟೆಕ್ ಕಂಪ್ಯೂಟರ್ ಸಂಸ್ಥೆಗೆ 2025-26ರ ಉತ್ತಮ ತರಬೇತಿ ಕೇಂದ್ರ ಪ್ರಶಸ್ತಿ

ಕುಂದಾಪುರ: ಸೃಷ್ಟಿ ಇನ್ಫಾಟೆಕ್ ಕಂಪ್ಯೂಟರ್ ಸಂಸ್ಥೆಗೆ ಕಿಯೋನಿಕ್ಸ್’ ವತಿಯಿಂದ ರಾಜ್ಯದ ಅತ್ಯುತ್ತಮ ನಿರ್ವಹಣಾ ಕೇಂದ್ರ ಪ್ರಶಸ್ತಿ ಲಭಿಸಿದೆ. ಬೆಂಗಳೂರನಲ್ಲಿ ಜರುಗಿದ ಕಿಯೋನಿಕ್ಸ್ ೫೦ನೇ ಸಂಸ್ಥಾಪನಾ ದಿನಾಚರಣೆ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಸೃಷ್ಟಿ ಇನ್ಫಾಟೆಕ್ ಕಂಪ್ಯೂಟರ್ ಸಂಸ್ಥೆಯ ಮುಖ್ಯಸ್ಥ ಹರ್ಷವರ್ಧನ್ ಶೆಟ್ಟಿ ಕಟ್ಕೆರೆ ಅವರಿಗೆ ಗೃಹ ಹಾಗೂ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ನಿರ್ವಹಣೆಗಾಗಿ ಪ್ರಶಸ್ತಿಗಾಗಿ ಆಯ್ಕೆಗೊಂಡಿರುವ 21 ಕಿಯೋನಿಕ್ಸ್ ಕೇಂದ್ರಗಳಲ್ಲಿ ಯಶ್ ಕಂಪ್ಯೂಟರ್ ಕಿಯೋನಿಕ್ ಕೇಂದ್ರವು ೪ನೇ ಸ್ಥಾನ ಗಳಿಸಿದೆ.

ಈ ಸಂದರ್ಭಧಲ್ಲಿ ಕಿಯೋನಿಕ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲ್ಲಿ,ಸಿ‌ಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಯು.ಬಿ. ವೆಂಕಟೇಶ, ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ಮಂಜುಳಾ,ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ ಮೆನನ್ ರಾಜೇಂದ್ರನ್ ಇತರರಿದ್ದರು.

ಕುಂದಾಪುರದಲ್ಲಿ ಚರ್ಚ್ ರಸ್ತೆಯಲ್ಲಿ 2014ರಲ್ಲಿ ಸ್ಥಾಪನೆಯಾದ ಸೃಷ್ಟಿ ಇನ್ಫಾಟೆಕ್ ಕಂಪ್ಯೂಟರ್ ಸಂಸ್ಥೆಯು ಕಿಯೋನಿಕ್ಸ್ ಕೇಂದ್ರವನ್ನು ಕೂಡ ನಿರ್ವಹಣೆ ಮಾಡುತ್ತ ಬಂದಿದ್ದು ನಮ್ಮ ಸಂಸ್ಥೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣ ಪಡೆದುಕೊಂಡು ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಮತ್ತು ಸ್ವಯಂ ಉದ್ಯೋಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸೃಷ್ಟಿ ಇನ್ಫಾಟೆಕ್ ಕಂಪ್ಯೂಟರ್ ಸಂಸ್ಥೆಯ ಮುಖ್ಯಸ್ಥರಾದ ಹರ್ಷವರ್ಧನ್ ಶೆಟ್ಟಿ ಕಟ್ಕೆರೆ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!