spot_img
Friday, August 14, 2026
spot_img

ಹಕ್ಲಾಡಿಯಲ್ಲಿ ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆಯಿಂದ ಕಾರ್ಯಾಗಾರ | ”ಮೊಬೈಲ್ ಬಳಕೆಗೆ ಸಮಯ ಮಿತಿ ಅಳವಡಿಸಿಕೊಳ್ಳಿ”-ಸುಭಾಶ್ ಶೆಟ್ಟಿ

ಕುಂದಾಪುರ: ಮಕ್ಕಳನ್ನು ಒಳ್ಳೆಯ ಪರಿಸರದಲ್ಲಿ ಬೆಳೆಸಬೇಕು, ಒಳ್ಳೆಯ ಸಂಸ್ಕಾರವನ್ನು ಕೊಡಬೇಕು, ಉತ್ತಮ ಸಮಾಜ ಕಟ್ಟುವಲ್ಲಿ ಸಶಕ್ತರನ್ನಾಗಿ ಅವರನ್ನು ಸಿದ್ಧಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸರಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ ಎನ್ನುವ ಕೀಳಿರಿಮೆ ಬೇಡ. ಸರಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಮುಂದೆ ಸಮಾಜ ಕಟ್ಟುವಲ್ಲಿ ದೊಡ್ಡ ಕೊಡುಗೆ ನೀಡುತ್ತಾರೆ ಎಂದು ಹಕ್ಲಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರು, ಉದ್ಯಮಿಗಳಾದ ಸುಭಾಶ್ ಶೆಟ್ಟಿ ಹೊಳ್ಮಗೆ ಹೇಳಿದರು.

ಹಕ್ಲಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ ರಿ., ಉಡುಪಿ ಜಿಲ್ಲೆ ತಾಲೂಕು ಸಮಿತಿ ಬೈಂದೂರು ನೇತೃತ್ವದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಗ್ರಾಮ ಪಂಚಾಯತ್ ಹಕ್ಲಾಡಿ, ಗೀತಾ ಹೆಚ್.ಎಸ್.ಎನ್. ಫೌಂಡೇಶನ್ ಕೋಟೇಶ್ವರ, ಕರ್ನಾಟಕ ಶಿಕ್ಷಣ ಸಮನ್ವಯ ಮತ್ತು ತರಬೇತಿ ಚಾರಿಟೇಬಲ್ ಟ್ರಸ್ಟ್ ಇದರ ಸಹಯೋಗದಲ್ಲಿ ನಡೆದ ಅತಿಯಾದ ಮೊಬೈಲ್ ಬಳಕೆ ಮತ್ತು ಮಾದಕ ದ್ರವ್ಯ ಸೇವನೆಯಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳು ಮತ್ತು ಸರಕಾರಿ ಶಾಲೆ ಉಳಿಸಿ ಬೆಳೆಸುವಲ್ಲಿ ಎಸ್.ಡಿ.ಎಂ.ಸಿ ಅವರ ಪಾತ್ರ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಮೊಬೈಲ್ ಗೀಳು ಎಲ್ಲೆಡೆ ಹಬ್ಬಿದೆ. ಮೊಬೈಲ್‌ನ ಬಾಧಕಗಳ ಬಗ್ಗೆ ಎಚ್ಚರ ವಹಿಸಬೇಕು. ಮೊಬೈಲ್‌ಗೆ ಮಕ್ಕಳು ಅಷ್ಟೊಂದು ಅಂಟಿಕೊಂಡು ಬಿಟ್ಟಿದ್ದಾರೆ. ಇದರಿಂದ ಮಕ್ಕಳ ಮಾನಸಿಕ, ಶಾರೀರಿಕ ಹಾಗೂ ಭಾವನಾತ್ಮಕತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅತಿಯಾದ ಮೊಬೈಲ್ ಬಳಕೆಯನ್ನು ನಿರ್ಬಂಧಿಸಿ ಮೊಬೈಲ್ ಬಳಕೆಗೊಂದು ನಿರ್ದಿಷ್ಟ ಸಮಯ ನಿಗಧಿಪಡಿಸಿಕೊಳ್ಳಬೇಕು. ಈ ಸಮಯ ಪಾಲನೆ ಅನುಸರಿಸುವುದರಿಂದ ಹಂತಹಂತವಾಗಿ ಮೊಬೈಲ್ ಬಳಕೆ ಕಡಿಮೆ ಮಾಡಬಹುದು ಎಂದರು.

ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ ಬೈಂದೂರು ತಾಲೂಕು ಅಧ್ಯಕ್ಷರಾದ ಸಾಧಿಕ್ ಮಾವಿನಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಮುಖ್ಯಶಿಕ್ಷಕ, ಶಿಕ್ಷಣ, ಸಾಮಾಜಿಕ ಮುಂದಾಳು ಬಿ.ರಾಜೀವ ಶೆಟ್ಟಿ ಮಾತನಾಡಿ, ಪೋಷಕರು ಮಕ್ಕಳ ದಿನಚರಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಸೂಕ್ತ ಮಾರ್ಗದರ್ಶನ ನೀಡಬೇಕು. ಮಗುವಿನ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಇಂಥಹ ಕಾರ್ಯಾಗಾರಗಳು ನಿರಂತರವಾಗಿ ನಡೆಯುತ್ತ ಇರಬೇಕು, ವಿದ್ಯಾರ್ಥಿಗಳು, ಪೋಷಕರನ್ನು ಜಾಗೃತಗೊಳಿಸುವಲ್ಲಿ ನಿರಂತರ ಕಾರ್ಯಾಗಾರಗಳಿಂದ ಸಾಧ್ಯ ಎಂದರು.

ವೇದಿಕೆಯ ರಾಜ್ಯ ನಿರ್ದೇಶಕರು, ಜಿಲ್ಲಾಧ್ಯಕ್ಷರಾದ ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಅಯೂಬ್ ಹಕ್ಲಾಡಿ, ಹಕ್ಲಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಮ್ಮ, ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದ ಎಸ್. ವಿ ನಾಗರಾಜ್, ಕಾರ್ಯದರ್ಶಿ ಪ್ರಮೋದ ಕೆ.ಶೆಟ್ಟಿ ಪುರಸಭಾ ಘಟಕದ ಅಧ್ಯಕ್ಷರಾದ ಅಶ್ವತ್ ಕುಮಾರ್, ಕಾಪು ತಾಲೂಕು ಉಸ್ತುವಾರಿಗಳಾದ ಅಶ್ಪಾಕ್, ಬೈಂದೂರು ತಾಲೂಕು ಘಟಕದ ಉಪಾಧ್ಯಕ್ಷರಾದ ರತ್ನಾಕರ, ಕಾರ್ಯದರ್ಶಿ ಶಾಂತ ಪೂಜಾರಿ, ಕೋಶಾಧಿಕಾರಿ ಗೋವಿಂದ ಹಳಗೇರಿ, ತಾಲೂಕು ಉಸ್ತುವಾರಿ ವರದ ಆಚಾರ್ಯ, ಸಂಪನ್ಮೂಲ ವ್ಯಕ್ತಿಗಳಾದ ಶೋಭಾ ಶಾಂತರಾಜ್, ಖಲೀಲ್ ಬ್ರಹ್ಮಾವರ ಹಾಗೂ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ ಎಸ್.ಡಿ.ಎಂ.ಸಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಎಸ್.ವಿ ನಾಗರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಶಾಂತ ಪೂಜಾರಿ ಸ್ವಾಗತಿಸಿ, ವಂದಿಸಿದರು.

ವೇದಿಕೆಯ ಜಿಲ್ಲಾಮಟ್ಟದ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಬಗ್ವಾಡಿ ರಾಜೀವ ಶೆಟ್ಟಿ ಅವರಿಗೆ ಗುರುವಂದನೆ ಸಲ್ಲಿಸಲು ಆಯ್ಕೆಗೊಳಿಸಿ, ಅಭಿನಂದಿಸಲಾಯಿತು.

ತರಬೇತಿ ಕಾರ್ಯಗಾರದ ನಂತರ ಹಕ್ಲಾಡಿ ಪಂಚಾಯತ್ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ವಿದ್ಯಾ ಗುರುರಾಜ್ ಆಚಾರ್ಯ, ಉಪಾಧ್ಯಕ್ಷರಾಗಿ ವಿಶ್ವನಾಥ ಗಾಣಿಗ, ಕಾರ್ಯದರ್ಶಿಯಾಗಿ ಶ್ಯಾಮಲ, ಜೊತೆ ಕಾರ್ಯದರ್ಶಿಯಾಗಿ ಶಶಿಕಲಾ, ಕೋಶಾಧಿಕಾರಿಯಾಗಿ ರಾಧಾಕೃಷ್ಣ ಆಯ್ಕೆಯಾದರು. ಸಂಘಟನಾ ಕಾರ್ಯದರ್ಶಿಗಳಾಗಿ ಉದಯ, ಉಮೇಶ, ಸುಜಾತ, ಸವಿತ, ಭಾಗೀರಥಿ ರಾಜೇಶ ಆಯ್ಕೆಯಾದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!