spot_img
Saturday, August 15, 2026
spot_img

ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 80ನೇ ಸ್ವಾತಂತ್ರ್ಯೋತ್ಸವ

ಕಿರಿಮಂಜೇಶ್ವರ: ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರೂ ಆದ ಗಣೇಶ ಮೊಗವೀರ ಧ್ವಜಾರೋಹಣಗೈದು “ಇಂದು ಜಾಗತಿಕ ಮಟ್ಟದಲ್ಲಿ ಭಾರತ ದೇಶದ ಖ್ಯಾತಿ ಹೆಚ್ಚುತ್ತಿದೆ. ಸ್ವಾತಂತ್ರ್ಯ ಸಂಪಾದನೆ ಎಂಬುದು ಸುಲಭಕ್ಕೆ ಸಿಕ್ಕ ಫಲವಾಗಿರಲಿಲ್ಲ. ಅನೇಕ ಮಹನೀಯರು, ಸ್ವಾತಂತ್ರ್ಯ ಸಿಂಹಗಳು ತಮ್ಮ ಇಡೀ ಬದುಕನ್ನು ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ. ಹಿರಿಯರ ಶ್ರಮದ ಫಲದಿಂದ ಈ ಸ್ವಾತಂತ್ರ್ಯವನ್ನು ನಾವೆಲ್ಲರೂ ಒಗ್ಗೂಡಿ ರಾಷ್ಟ್ರ ಕಟ್ಟುವ ಕೆಲಸ ಮಾಡುವ ಮೂಲಕ ಸಾರ್ಥಕಗೊಳಿಸಬೇಕೆಂದು ಕರೆ ಕೊಟ್ಟರು.

ಸಂಸ್ಥೆಯ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಸ್ವಾತಂತ್ರ್ಯದ ಶುಭ ಕೋರಿದರು. ಸಂಸ್ಥೆಯ ಸಹಶಿಕ್ಷಕರಾದ ರಾಘವೇಂದ್ರ ದುರ್ಗ ಬಿಲ್ಲವ ಸ್ವಾತಂತ್ರ್ಯ ಸಂಭ್ರಮದ ಬಗ್ಗೆ ಮಾತನಾಡುತ್ತಾ ” ಇಂದಿನ ದಿನ ಸಮಸ್ತ ಭಾರತೀಯರಿಗೂ ಹೆಮ್ಮೆಯ ದಿನವಾಗಿದೆ. ಸ್ವಾತಂತ್ರ್ಯ ದೊರಕಿ ೮೦ ವರ್ಷಗಳೇ ಉರುಳಿ ಹೋಗಿವೆ, ಇಷ್ಟು ವರ್ಷಗಳ ಇತಿಹಾಸದಲ್ಲಿ ಈ ದೇಶ ಬಹಳಷ್ಟನ್ನು ಸಾಧಿಸಿದೆ. ಆರ್ಥಿಕತೆ, ಕ್ರೀಡೆ, ಸಾಂಸ್ಕೃತಿಕ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಅನುಪಮವಾದ ಸಾಧನೆಗಳು ಕಂಡು ಬಂದಿವೆ. ವಿದೇಶಗಳಲ್ಲಿ ಭಾರತ ಮತ್ತು ಭಾರತೀಯರ ವರ್ಚಸ್ಸು ಹೆಚ್ಚುತ್ತಿದೆ. ಇಂದಿನ ಈ ಸಾಧನೆಯ ಹಿಂದೆ ಹಲವಾರು ಮಹನೀಯರ ತ್ಯಾಗ ಮತ್ತು ಅವಿರತ ಪರಿಶ್ರಮವಿದೆ. ನಮ್ಮ ಹಿರಿಯರಿಂದ ಸಿಕ್ಕಿರುವ ಈ ಸ್ವಾತಂತ್ರ್ಯವನ್ನು ಕಾಪಾಡುವುದು ಮತ್ತು ದೇಶದ ಕೀರ್ತಿಗಾಗಿ ಶ್ರಮಿಸುವುದು ಎಲ್ಲಾ ಭಾರತೀಯರ ಹೊಣೆಗಾರಿಕೆಯಾಗಿದೆ ” ಎಂದು ಅಭಿಪ್ರಾಯಪಟ್ಟರು.

ಶಿಕ್ಷಕಿಯರು ಮತ್ತು ವಿದ್ಯಾರ್ಥಿ ವೃಂದದವರು ದೇಶಪ್ರೇಮವನ್ನು ಸಾರುವ ಹಲವು ದೇಶಭಕ್ತಿ ಗೀತೆಗಳಿಗೆ ಇದೇ ಸಂದರ್ಭದಲ್ಲಿ ದನಿಯಾದರು.
ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳು, ಶಿಕ್ಷಕ- ಶಿಕ್ಷಕೇತರ ವರ್ಗದವರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಹಶಿಕ್ಷಕಿ ಶ್ರೀರಾಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!