spot_img
Tuesday, April 7, 2026
spot_img

ವಂಡ್ಸೆ ಗಾಣಿಗ ಸಮಾಜದಿಂದ ರತ್ನಾಕರ ಗಾಣಿಗರಿಗೆ ಸನ್ಮಾನ

ಕುಂದಾಪುರ: ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ರತ್ನಾಕರ ಗಾಣಿಗ ಇವರನ್ನು ಗಾಣಿಗ ಸಮಾಜ ವಂಡ್ಸೆ ಇವರ ವತಿಯಿಂದ ಜು.31ರಂದು ವಂಡ್ಸೆಯ ಮಹತ್ಮಾಗಾಂಧಿ ಸಭಾಭವನದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರತ್ನಾಕರ ಗಾಣಿಗ ಅವರು ವಿದ್ಯಾರ್ಥಿದಿಸೆಯಿಂದಲೇ ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಬೇಕು. ಕಷ್ಟಪಟ್ಟು ಶ್ರದ್ದೆಯಿಂದ ಮುನ್ನೆಡೆದರೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ ಎಂದರು.

ಮಧುಕರ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉದಯ ಕುಮಾರ ಶೆಟ್ಟಿ, ಉದ್ಯಮಿ ನಿತಿನ್ ನಾರಾಯಣ ಗಾಣಿಗ, ಶ್ರೀನಿವಾಸ ಗಾಣಿಗ ತೋಟಬೈಲು, ದಿನೇಶ ಗಾಣಿಗ ಕೋಟ, ಪ್ರಭಾಕರ ಗಾಣಿಗ ತೆಂಕೊಡಿಗೆ, ಚಂದ್ರ ಗಾಣಿಗ ಅಬ್ಬಿ, ರಾಘವೇಂದ್ರ ಗಾಣಿಗ, ಮಹೇಶ ಗಾಣಿಗ ಅಬ್ಬಿ, ಗುರುರಾಜ ಗಾಣಿಗ ಅಬ್ಬಿ, ವಿಶ್ವನಾಥ ಗಾಣಿಗ ನೂಜಾಡಿ, ಸುರೇಶ ಗಾಣಿಗ ಬಳಗೇರಿ, ಶಂಕರ ಗಾಣಿಗ ಹೊಲಾಡು, ಮಂಜುನಾಥ ಗಾಣಿಗ ಅಬ್ಬಿ, ಪ್ರಭಾಕರ ಗಾಣಿಗ ಚಿತ್ತೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರತ್ನಾಕರ ಗಾಣಿಗ ದಂಪತಿಗಳನ್ನು ಸನ್ಮಾನಿಸಲಾಯಿತು. ಬ್ಯಾಂಕ್‌ನಲ್ಲಿ ಹಾಗೂ ಸಾರ್ವಜನಿಕ ವ್ಯವಸ್ಥೆಯಲ್ಲಿ ರತ್ನಾಕರ ಗಾಣಿಗರ ಸೇವೆಯನ್ನು ಶ್ಲಾಘಿಸಲಾಯಿತು. ವಿಶ್ವನಾಥ ಗಾಣಿಗ ಸ್ವಾಗತಿಸಿ, ರಾಘವೇಂದ್ರ ಗಾಣಿಗ ಹರವರಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!