spot_img
Monday, July 6, 2026
spot_img

ಬಸ್ರೂರು: ವಿದ್ಯಾರ್ಥಿ ಸಚಿವ ಸಂಪುಟ ಪದಗ್ರಹಣ ಮತ್ತು ಶಾಲೆಯ ವಿವಿಧ ಸಂಘಗಳ ಉದ್ಘಾಟನೆ

ಜುಲೈ 3: ವಿದ್ಯಾರ್ಥಿ ಸಚಿವ ಸಂಪುಟ ಪದಗ್ರಹಣ ಮತ್ತು ಶಾಲೆಯ ವಿವಿಧ ಸಂಘಗಳ ಉದ್ಘಾಟನೆಯು ಇತ್ತೀಚೆಗೆ ಬಸ್ರೂರು ಸೈಂಟ್ ಫಿಲಿಪ್ ನೇರಿ ಸೆಂಟ್ರಲ್ ಸ್ಕೂಲ್‌ನಲ್ಲಿ ಜುಲೈ 3 ರಂದು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ವಂದನೀಯ ಧರ್ಮ ಗುರುಗಳಾದ ಫಾದರ್ ರಾಯ್ ಲೋಬೋ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕುಂದಾಪುರದ ಸೈಂಟ್ ಮೇರಿಸ್ ಇನ್ಸ್ಟಿಟ್ಯೂಶನ್‌ನ ಪ್ರಾಂಶುಪಾಲರಾದ ವಂದನೀಯ ಧರ್ಮ ಗುರು ರಾಲ್ ವಿನ್ ಫರ್ನಾಂಡಿಸ್ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಡ್ಯಾನ್ಸಿ ಸುನಿಲ್ ಮಾರ್ಟಿಸ್, ಆಡಳಿತ ಮಂಡಳಿ, ಶಿಕ್ಷಕ, ಶಿಕ್ಷಕಿಯರು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ವಂದನೀಯ ಧರ್ಮ ಗುರುಗಳು ರಾಲ್ವಿನ್ ಫರ್ನಾಂಡಿಸ್ ವಿದ್ಯಾರ್ಥಿಗಳಿಗೆ ನಾಯಕತ್ವ, ಶಿಸ್ತು ಮತ್ತು ಸೇವಾ ಮನೋಭಾವದ ಮಹತ್ವವನ್ನು ಹೊಂದಬೇಕೆಂದು ತಿಳಿಸಿದರು. ವಿದ್ಯಾರ್ಥಿ ಪ್ರೇಕ್ಷ , ಅಬ್ದುಲ್ ಅಹಾದ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಶಾಂತಿ ಪ್ರಮೀಳಾ ಸ್ವಾಗತಿಸಿದರು. ಶ್ರೀಮತಿ ಫರ ಕಾರ್ಯಕ್ರಮ ಸಂಯೋಜಿಸಿದರು. ಶ್ರೀಮತಿ ಸುಜಾತ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!