spot_img
Saturday, July 4, 2026
spot_img

ದೇಗುಲಗಳಲ್ಲಿ ಪುರಾಣ ಕಥಾ ಶ್ರವಣಕ್ಕೆ ಹೆಚ್ಚು ಹೆಚ್ಚು ಅವಕಾಶ ದೊರೆಯಲಿ: ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ

ಆನೆಗುಡ್ಡೆ: ಯಕ್ಷಗಾನ ತಾಳಮದ್ದಳೆಗೆ ಹೊಸ ಕಲಾವಿದರು ರಂಗದಲ್ಲಿ ಬೆಳೆಯಬೇಕೆನ್ನುವ ನಿಟ್ಟಿನಲ್ಲಿ ಅರ್ಥಾಂಕುರ ಕಾರ್ಯಕ್ರಮ ನಿಜಕ್ಕೂ ಶ್ಲಾಘ್ಯಾಯೋಗ್ಯವಾದದ್ದು. ಪ್ರತೀ ತಿಂಗಳು ಕೆಲವು ದೇವಸ್ಥಾನಗಳ ಸಹಕಾರವನ್ನು ಕೋರಿ ನೀಡುವ ಕಾರ್ಯಕ್ರಮ ಸಾಂಸ್ಕೃತಿಕವಾಗಿ ಪುರಾಣ ಕಥೆಯನ್ನು ಆಸ್ವಾದಿಸುವ ಕಾರ್ಯಕ್ರಮವನ್ನು ದೇಗುಲದಲ್ಲಿ ನೆರವೇರಿಸಿದಂತಾಗುತ್ತದೆ. ಇಂತಹ ಕಾರ್ಯಕ್ರಮ ಇನ್ನಷ್ಟು ಹೆಚ್ಚು ಹೆಚ್ಚು ಮಾಡುವ ಶಕ್ತಿ ಸಂಸ್ಥೆಗೆ ಒದಗಿ ಬರಲಿ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಹಿರಿಯ ಕಲಾವಿದರನ್ನು ಗೌರವಿಸಿ ಶುಭ ಹಾರೈಸಿದರು.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಸಹಕಾರದೊಂದಿಗೆ ಯಶಸ್ವಿ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ (ರಿ.) ಸಿದ್ಧಾಪುರ ಜಂಟಿ ಆಶ್ರಯದಲ್ಲಿ ಅರ್ಥಾಂಕುರ-೨೩ ಕಾರ್ಯಕ್ರಮದಲ್ಲಿ ಜುಲೈ 3ರಂದು ಸಂಕಷ್ಟ ಹರ ಚತುರ್ಥಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಶ್ರೀರಮಣ ಉಪಾಧ್ಯ ಮಾತನ್ನಾಡಿದರು.

ಹಿರಿಯ ಅರ್ಥದಾರಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಡಾ. ವೈಕುಂಠ ಹೇರ್ಳೆ, ಕೂಡ್ಲಿ ದೇವದಾಸ್ ರಾವ್, ರಾಜಾರಾಮ ಉಪಾಧ್ಯಾಯ, ಚಂದ್ರಯ್ಯ ಆಚಾರ್, ನಂದೀಶ್ ಶೆಟ್ಟಿ, ಶ್ರೀನಾಥ ಉರಾಳ, ವಾಗ್ವಿಲಾಸ್ ಭಟ್, ಅನಂತಕೃಷ್ಣ ನಾವಡ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ತಾಳಮದ್ದಳೆ ಅಂಗದ ಸಂಧಾನ ರಂಗ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!