spot_img
Tuesday, August 18, 2026
spot_img

ಚಿತ್ತೂರಿನಲ್ಲಿ ಶ್ರೀನಿವಾಸ ಕನ್ವೆನ್‌ಷನ್ ಹಾಲ್ ನೂತನ ಆಡಳಿತದೊಂದಿಗೆ ಪುನರಾರಂಭ

ಕುಂದಾಪುರ, ಆ.18: ಕುಂದಾಪುರ-ಕೊಲ್ಲೂರು ರಸ್ತೆಯ ಚಿತ್ತೂರು ಗ್ರಾಮದ ಆಲೂರು ಕ್ರಾಸ್ ಹತ್ತಿರ ಸಕಲ ಕನ್ವೆನ್‌ಷನ್ ಹಾಲ್ ಪ್ರಸ್ತುತ ನೂತನ ಆಡಳಿತದೊಂದಿಗೆ ಶ್ರೀನಿವಾಸ ಕನ್ವೆನ್‌ಷನ್ ಹಾಲ್ ಆಗಿ ಸುಸಜ್ಜಿತವಾಗಿ ನವೀಕರಣಗೊಂಡಿದ್ದು ಇದರ ಪುನರಾರಂಭ ಕಾರ್ಯಕ್ರಮ ಆಗಸ್ಟ್ 17ಸಿಂಹ ಸಂಕ್ರಮಣದ ಶುಭದಿನ ನಡೆಯಿತು.

ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಅತ್ಯಾಧುನಿಕವಾಗಿ ಶ್ರೀನಿವಾಸ ಕನ್ವೆನ್‌ಷನ್ ಹಾಲ್ ನವೀಕರಣಗೊಂಡಿದ್ದು ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಆತ್ಯಾಕರ್ಷಕವಾಗಿ ಕಂಗೊಳಿಸುತ್ತಿದೆ. ಸೋಮವಾರ ವಿದ್ಯುಕ್ತವಾಗಿ ಪುನರಾರಂಭದ ಕಾರ್ಯಕ್ರಮ ಸಹಸ್ರಾರು ಜನರ ಸಮಕ್ಷಮದಲ್ಲಿ ಸುಸಂಪನ್ನಗೊಂಡಿತು. ಹಲವಾರು ಗಣ್ಯಮಾನ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು. ಜನಪ್ರತಿನಿಧಿಗಳು, ಧಾರ್ಮಿಕ ಮುಂದಾಳುಗಳು, ಉದ್ಯಮಿಗಳು, ಸಂಘ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು. ಶ್ರೀನಿವಾಸ ಕನ್ವೆನ್‌ಷನ್ ಹಾಲ್ ಮುಖ್ಯಸ್ಥರಾದ ಪ್ರಭಾಕರ ಗಾಣಿಗ ಅವರು ಆಗಮಿಸಿದ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಶಾಸಕ ಗುರುರಾಜ ಗಂಟಿಹೊಳೆ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿಗಳಾದ ವಂಡಬಳ್ಳಿ ಜಯರಾಮ ಶೆಟ್ಟಿ, ಡಾ.ಅತುಲ್ ಕುಮಾರ್ ಶೆಟ್ಟಿ ಚಿತ್ತೂರು ಇವರನ್ನು ಗೌರವಿಸಲಾಯಿತು.

ಪುನರಾರಂಭ ಕಾರ್ಯಕ್ರಮದ ಅಂಗವಾಗಿ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಡುಪಿಯ ತರಂಗ್ ಮ್ಯೂಸಿಕಲ್ಸ್ ಅವರಿಂದ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ್ ಪ್ರಕಾಶ್ ಹೆಮ್ಮಾಡಿ ಇವರಿಂದ ಜಾದು ಕಾರ್ಯಕ್ರಮ, ಬಳಿಕ ಚೈತನ್ಯ ಕಲಾವಿದರು ಬೈಲೂರು ಕಾರ್ಕಳ ಇವರಿಂದ ನಾಟಕ ರಾಘು ಮಾಸ್ಟ್ರು ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ ತಂಡದ ಮುಖ್ಯಸ್ಥರನ್ನು ಶ್ರೀನಿವಾಸ ಕನ್ವೆನ್‌ಷನ್ ಹಾಲ್‌ನ ಮುಖ್ಯಸ್ಥರಾದ ಪ್ರಭಾಕರ ಗಾಣಿಗ ಗೌರವಿಸಿದರು. ಈ ಸಂದರ್ಭದಲ್ಲಿ ಗುಂಡು ಪೂಜಾರಿ ಹರವರಿ, ಪ್ರಭಾಕರ ಗಾಣಿಗರ ಕುಟುಂಬವರ್ಗದವರು, ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!