spot_img
Monday, November 16, 2026
spot_img

ಯಶಸ್ವಿ ಮಹಿಳಾ ಕಲಾವೃಂದದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಂಸ್ಕೃತಿಕ ಹಾಗೂ ಸಾಂಸ್ಕೃತಿಕ ಕಲರವ

ಕುಂದಾಪುರ: ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂದೇಶದೊಂದಿಗೆ ‘ಯಶಸ್ವಿ ಮಹಿಳಾ ಕಲಾವೃಂದ ತೆಕ್ಕಟ್ಟೆ’ ಇದರ ವತಿಯಿಂದ ಸಾಂಸ್ಕೃತಿಕ ಹಾಗೂ ಸಾಂಸ್ಕೃತಿಕ ಕಲರವ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮವನ್ನು ಪರದೆ ಸರಿಸಿ, ಕನ್ನಡದಲ್ಲಿ ಸಹಿ ಮಾಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿಯ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ಥಳೀಯ ಸಾಧಕ ಮಹಿಳೆಯರ ಹೆಸರುಗಳನ್ನು ಸ್ಮರಿಸಿ, ಅವರ ಸಾಧನೆಗಳನ್ನು ಕೊಂಡಾಡಿ ಇದು ಇಂದಿನ ಯುವ ಪೀಳಿಗೆಗೆ ಸ್ಫೂರ್ತಿದಾಯಕ ಎಂದರು.

ಕಥಾ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಶಿಕ್ಷಕ ಸತೀಶ್ ವಡ್ಡರ್ಸೆ ಅವರು ಸ್ಪರ್ಧೆಗೆ ಬಂದ ಕಥೆಗಳನ್ನು ವಿಮರ್ಶಿಸಿ, ಸ್ಪರ್ಧಿಗಳ ಕಥಾ ರಚನಾ ಪ್ರತಿಭೆಯನ್ನು ಶ್ಲಾಘಿಸಿದರು.

ಇನ್ನೋರ್ವ ತೀರ್ಪುಗಾರರಾದ ಪಾರ್ವತಿ ಜಿ ಐತಾಳ ಅವರ ಅನುಪಸ್ಥಿತಿಯಲ್ಲಿ ಅವರ ಅನಿಸಿಕೆಗಳನ್ನು ಸಾಂಸ್ಕೃತಿಕ ಕಾರ್ಯದರ್ಶಿ ವನಿತಾ ಉಪಾಧ್ಯ ಓದಿದರು.

ಕಥಾ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು. ಹಾಗೆಯೇ ಬಹುಮಾನಿತ ಕಥಾವಾಚನವೂ ನಡೆಯಿತು. ಪ್ರಥಮ ಬಹುಮಾನ ಸರಿತಾ ಉಪಾಧ್ಯಾಯ, ದ್ವಿತೀಯ ಬಹುಮಾನವನ್ನು ಸುಶೀಲಾ ಹೊಳ್ಳ, ತೃತೀಯ ಬಹುಮಾನವನ್ನು ಪುಷ್ಪಾ ಗಣೇಶ್ ಇವರು ಪಡೆದುಕೊಂಡರೆ ಸಂಗೀತ ಟಿ. ಕೋಟೇಶ್ವರ ಹಾಗೂ ಭಾಗ್ಯ ಬಿದ್ಕಲ್ಕಟ್ಟೆ ಇವರ ಕಥೆಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಥಾ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ರಾಧಿಕಾ ಮೋಹನ್ ಚಂದ್ರ ಅವರು ವಾಚಿಸಿದರು.

ಯಶಸ್ವಿ ಕಲಾವೃಂದದ (ರಿ) ಕೊಮೆ, ತೆಕ್ಕಟ್ಟೆ ಇದರ ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ ಅವರು ಶುಭ ಹಾರೈಸಿದರು.
ಯಶಸ್ವಿ ಮಹಿಳಾ ಕಲಾವೃಂದ ತೆಕ್ಕಟ್ಟೆ ಇದರ ಸಂಸ್ಥಾಪಕ ಅಧ್ಯಕ್ಷೆಯಾದ ಶಾರದಾ ಹೊಳ್ಳ ಅವರು ಸಮಾರಂಭದಲ್ಲಿ ಮಹಿಳಾ ಸಬಲೀಕರಣದ ಕುರಿತು ಮಾತನಾಡುತ್ತಾ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರಬೇಕಾದ ಅಗತ್ಯವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ, ಗೌರವಾಧ್ಯಕ್ಷೆ ಸುಧಾ ಮಣೂರು ಉಪಸ್ಥಿತರಿದ್ದರು.

ಯಶಸ್ವಿ ಮಹಿಳಾ ಕಲಾವೃಂದದ ಸದಸ್ಯೆ ಮಾಲತಿ ಸ್ವಾಗತಿಸಿ, ಸಾಹಿತ್ಯಿಕ ಸಂಚಾಲಕಿ ವಾಣಿಶ್ರೀ ಐತಾಳ ಅವರು ಪ್ರಾಸ್ತಾವನೆಗೈದರು, ಕಾರ್ಯದರ್ಶಿ ಭಾಗ್ಯಲಕ್ಷ್ಮೀ ವೈದ್ಯ ವಂದಿಸಿದರು. ನಾಗರತ್ನ ಜಿ ಕಾರ್ಯಕ್ರಮ ನಿರೂಪಿಸಿದರು.

ನಂತರ ಮಹಿಳಾ ಸದಸ್ಯರಿಂದ ಕನ್ನಡ ನಾಡುನುಡಿಯ ಕುರಿತಾದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!