spot_img
Monday, November 16, 2026
spot_img

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥರ ವಸಂತೋತ್ಸವ

ಕುಂದಾಪುರ: ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಪ್ಲವಂಗ ನಾಮ ಸಂವತ್ಸರದ ವಸಂತೋತ್ಸವ 2027 ಕುಂದಾಪುರದ ಇತಿಹಾಸ ಪ್ರಸಿದ್ಧ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ.

ಈ ಸಂಬಂಧ 2027 ರ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ದೇವಾಲಯದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿವೆ.

ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ವಾರಾಣಾಸಿ ಶ್ರೀ ಕಾಶೀ ಮಠದಲ್ಲಿ ವಸಂತೋತ್ಸವ 2027 ಆಹ್ವಾನ ಪತ್ರವನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದ್ದಾರೆ.

ಶ್ರೀ ಕಾಶೀ ಮಠಾಧೀಶರು ಎಪ್ರಿಲ್ 1 ರಂದು ಕುಂದಾಪುರಕ್ಕೆ ಚಿತ್ತೈಸಲಿದ್ದಾರೆ. ಎಪ್ರಿಲ್ 7ರ ಯುಗಾದಿ ದಿನದಿಂದ ವಸಂತೋತ್ಸವ ಆಚರಣೆ ಆರಂಭವಾಗಲಿದೆ. ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ ಎಪ್ರಿಲ್ 15, ಶ್ರೀರಾಮ ನವಮಿಯಂದು ನಡೆಯಲಿದ್ದು, ಈ ಸಂಬಂಧ ಎಪ್ರಿಲ್ 11 ರಿಂದ 13ರ ತನಕ ನಡೆಯುವ ಉತ್ಸವಗಳು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನಡೆಯಲಿವೆ.

ಸಹಸ್ರ ಕಂಭಾಭಿಷೇಕ : ವಸಂತೋತ್ಸವ ಪರ್ವ ಕಾಲದಲ್ಲಿ ಶ್ರೀ ದೇವರ ಪ್ರಿತ್ಯರ್ಥವಾಗಿ, ಲೋಕ ಕಲ್ಯಾಣಾರ್ಥ ಸಹಸ್ರ ಕುಂಭಾಭಿಷೇಕ 29-4-2027 ರಂದು ಶ್ರೀ ಗುರುಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.

ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ವಸಂತ ಮಾಸ ಸಮಿತಿ ಗೌರವಾಧ್ಯಕ್ಷ ಕೆ. ರಾಧಾಕೃಷ್ಣ ಶೆಣೈ, ವಸಂತ ಮಾಸ ಸಮಿತಿ ಗೌರವಾಧ್ಯಕ್ಷ ಡಾ| ಪಿ. ದಯಾನಂದ ಪೈ, ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸ ಪ್ರಭು., ಕಾರ್ಯದರ್ಶಿ ಕೆ. ಪದ್ಮನಾಭ ಶೆಣೈ., ಕೋಶಾಧಿಕಾರಿ ಕೆ. ರಾಮಚಂದ್ರ ಕಾಮತ್., ದೇವಸ್ಥಾನದ ಜೊತೆ ಮೊಕ್ತೇಸರರಾದ ಹೆಚ್. ಜನಾರ್ದನ ಮಲ್ಯ., ಪಿ. ತ್ರಿವಿಕ್ರಮ್ ಪೈ., ದೇವಸ್ಥಾನದ ಹತ್ತು ಸಮಸ್ತರು ಹಾಗೂ ಗಣ್ಯ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ವಸಂತ ಮಾಸ ಸಮಿತಿ ರಚಿಸಲಾಗಿದೆ. ಎರಡು ತಿಂಗಳ ವಸಂತೋತ್ಸವದಲ್ಲಿ ದೇಶದ ಸರ್ವ ಸಮಾಜ ಬಾಂಧವರು ಪಾಲ್ಗೊಳ್ಳಬೇಕೆಂದು ವಸಂತ ಮಾಸ ಸಮಿತಿ ವಿನಂತಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!