spot_img
Tuesday, November 17, 2026
spot_img

ದೇಶಾದ್ಯಂತ ಸುದ್ದಿಯಾದ ಸಂಸದರ ಸೂರ್ಯ ಚಂದ್ರ ಸ್ವಾಗತ

kundapura: ಮಡಗಾಂವ್ ಬೆಂಗಳೂರು ವಂದೇ ಭಾರತ್ ರೈಲು ಮೊದಲ ಬಾರಿ ಕುಂದಾಪುರಕ್ಕೆ ಬಂದಾಗ ಉಡುಪಿ ಸಂಸದರು ಅದರ ಮೇಲೆ ಕುಂದಾಪುರದ ನೆಲ ಮೂಲ ಸಂಸ್ಕ್ರತಿಯ ಆದಿ ಗುರುತಾದ ಸೂರ್ಯ ಚಂದ್ರ ಚಿಹ್ನೆಯನ್ನು ಶೇಡೀ ನಾಮಗಳ ಜತೆ ಬರೆದು ಸ್ವಾಗತಿಸಿದ್ದು ದೇಶಾದ್ಯಂತ ವೈರಲ್ ಆಗಿದೆ.

ಜತೆಗೆ ಕುಂದಾಪುರದಿಂದ ಕಾಸರಗೋಡಿನ ನಡುವೆ ನೆಲೆಸಿದ ವಿಶಿಷ್ಟ ಸಂಸ್ಕ್ರತಿಯ ಗುರುತನ್ನು ಅತ್ಯಂತ ಸುಂದರವಾಗಿ ಸ್ವಾಗತಕ್ಕೆ ಅಳವಡಿಸಿಕೊಂಡ ಕ್ರಮ ತುಳು ಜನಪದ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ಸ್ಟಾಗ್ರಾಂ ಮತ್ತು ಪೇಸ್ ಬುಕ್ಕಲ್ಲಿ ಸಂಸದರು ಸೂರ್ಯ ಚಂದ್ರ ಚಿತ್ರ ಬಿಡಿಸುವ ದ್ರಶ್ಯವನ್ನು ಹಲವು ಪೇಜುಗಳು ಪ್ರಸಾರ ಮಾಡಿದ್ದು ಮೂರು ಮಿಲಿಯನ್ಗೂ ಹೆಚ್ಚು ವ್ಯೂ ಆಗಿದ್ದು ಕಂಡು ಬಂತು.

ರಾಷ್ಟ್ರಾದ್ಯಂತ ಹಲವು ಪೇಜುಗಳು ಈ ವಿಡಿಯೋವನ್ನು ಸನಾತನ ನಂಬಿಕೆಯ ಜತೆ ಆಧುನಿಕತೆಯ ಸ್ವಾಗತ! ಇದೇ ಭಾರತದ ಅಂತಸತ್ವ ಎಂದು ಪೋಸ್ಟ್ ಮಾಡಿದ್ದು ಹಲವು ಲಕ್ಷ ವ್ಯೂಗಳನ್ನು ಪಡೆದಿವೆ.

ಕುಂದಾಪುರದ ಬದುಕಿನ ಆದಿ ಗುರುತಾದ ಸೂರ್ಯ ಚಂದ್ರ ಚಿಹ್ನೆಯನ್ನು ಮಗು ಹುಟ್ಚಿದಾಗ ತೊಟ್ಟಿಲ ಮೇಲೆ , ಹೊಸ ಬತ್ತದ ಅನ್ನ ಮಾಡುವ ಹೊಸ್ತ್ ದಿನದ ಅನ್ನ ಬೇಯುವ ಪಾತ್ರೆಯ ಮೇಲೆ , ಅಕ್ಕಿ ಗೇರುವ ಗೆರ್ಸಿಯ ಮೇಲೆ , ದೈವಸ್ತಾನ ದೇವಾಲಯಗಳ ಪೌಳಿಯ ಮೇಲೆ , ದೇಗುಲಗಳ ಶಿಲೆಗಳ ಮೇಲೆ ಮತ್ತು ರಥೋತ್ಸವದ ರಥಗಳ ಮೇಲೆ ಹಾರುವ ಬಾವುಟದ ಮೇಲೂ ಸೂರ್ಯ ಚಂದ್ರರ ಬಿಡಿಸಿ ಆರಾದಿಸುತ್ತಾರೆ.

ಹಿಂದಿನ ಕುಂದಾಪುರ ಭಾಗದ ಗುತ್ತಿನ ಮನೆಗಳ ಹೆಬ್ಬಾಗಿಲ ಮೇಲೆ ಈ ಗುರುತು ಕಾಣ ಸಿಗುತಿದ್ದು ಈಗ ವಂದೇ ಭಾರತ್ ನಂತಹ ಆಧುನಿಕ ರೈಲಿನ ಮೇಲೂ ಮೂಡುವ ಮೂಲಕ ಪರಂಪರೆಯ ಪದ್ದತಿಯೊಂದು ಕಾಲ ಚಕ್ರದ ಓಟದಲ್ಲಿ ಶಾಶ್ವತವಾಗಿ ನೆಲೆಯಾಗಿರುವುದರ ಸಂಕೇತ ಎಂದು ಹಲವು ಜನ ಪೇಸ್ ಬುಕ್ ಮತ್ತು ಇತರ ಕಡೆ ಬರೆದು ಕೊಂಡಿದ್ದಾರೆ.

ತುಳು ನಾಡಿನ ದರ್ಮ ಪರಂಪರೆಯಲ್ಲಿ ಸೂರ್ಯ ಚಂದ್ರ ಶಾಶ್ವತೆಯ ಸಂಕೇತವಾಗಿದ್ದು, ವಂದೇ ಭಾರತ್ ರೀತಿಯ ಅಭಿವ್ರದ್ದಿಯ ಮತ್ತು ಮನುಶ್ಯನ ಜೀವನ ಮಟ್ಟದ ಅಭಿವ್ರದ್ದಿ ನಿರಂತರವೂ ಶಾಶ್ವತವೂ ಆಗಿರಲಿ ಎಂಬ ಆಶಯ ಈ ಆಚರಣೆಯ ಹಿಂದಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!