spot_img
Saturday, July 4, 2026
spot_img

ಮಕ್ಕಳಿಗೆ ಮೌಲ್ಯಗಳನ್ನು ಕಲ್ಪಿಸುವಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಹಿರಿದು-ವಡ್ಡರ್ಸೆ ಪ್ರಕಾಶ್ ಆಚಾರ್ಯ

ಅಮಾಸೆಬೈಲು: ಇಂದು ನಾವು ಮಕ್ಕಳಿಗೆ ಅಂಕ, ಪರೀಕ್ಷೆ ಮುಂತಾದ ವಿಚಾರವಾಗಿ ಪದೇಪದೇ ಹೇಳುತ್ತೇವೆಯೋ ಹೊರತು ಅವರಿಗೆ ಪ್ರೀತಿಯಿಂದ ಜವಾಬ್ದಾರಿಯನ್ನು ಕಲಿಸಿ ಕೊಡುತ್ತಿಲ್ಲ ಎಂದು ಶಾಲಾ ಪ್ರಾಂಶುಪಾಲ ವಡ್ಡರ್ಸೆ ಪ್ರಕಾಶ್ ಆಚಾರ್ಯರವರು ಅಭಿಪ್ರಾಯ ಪಟ್ಟರು.

ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಇಲ್ಲಿ ಪೋಷಕರ ಸಭೆಯನ್ನು ಉದ್ದೇಶಿಸಿ ಮಕ್ಕಳು ಅಪಾರ ಕಲ್ಪನಾಶೀಲರಾಗಿದ್ದು ಹೊಸ ಚಿಂತನೆಗಳ ಕಡೆಗೆ ತನ್ನ ಗಮನವನ್ನು ಹರಿಸುತ್ತಿದ್ದು ಅವರಿಗೆ ಪ್ರೋತ್ಸಾಹವನ್ನು ಕೊಡುವಂತದ್ದು ನಮ್ಮ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದರು, ಅಲ್ಲದೆ ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿದ್ದು ಅದನ್ನು ಮಕ್ಕಳಿಗೆ ತಿಳಿಸಬೇಕು ಸಮಯ ಪ್ರಜ್ಞೆ, ಸೌಹಾರ್ದತೆ, ಶಿಸ್ತು, ಸಂಯಮ, ಇತರರನ್ನು ಗೌರವಿಸುವುದು, ಹೀಗೆ ಹತ್ತು ಹಲವು ಮೌಲ್ಯಗಳನ್ನು ಮಕ್ಕಳಿಗೆ ನೀಡುವಂತದ್ದು ಶಿಕ್ಷಕರ ಹಾಗೂ ಪೋಷಕರ ಆದ್ಯ ಕರ್ತವ್ಯವಾಗಿರುತ್ತದೆ ಎಂದರು.

ಸಭೆಯಲ್ಲಿ ಶಾಲಾ ಅಧ್ಯಕ್ಷ ಗುರುರಾಜ ಅಡಿಗ, ಆಡಳಿತ ಮಂಡಳಿಯ ಸದಸ್ಯರಾದ ಹಿರಿಯರು ರಘುಪತಿ ಭಟ್ ಗೆಣಸಿನ ಕುಣಿ, ಶಾಲಾ ಸಂಚಾಲಕ ಶಶಿಧರ್ ದೇವಾಡಿಗ, ಶಾಲಾ ಮುಖ್ಯೋಪಾಧ್ಯಾಯಿನಿ ರಾಧಿಕಾ ಎಸ್ ಮತ್ತು ಸಹ ಶಿಕ್ಷಕ ವಿಘ್ನೇಶ್ ಜಿ ಎಲ್ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ರಾಧಿಕಾ ಎಸ್ ಸ್ವಾಗತಿಸಿದರು, ಶಿಕ್ಷಕಿ ಸುಷ್ಮಾ ಉಳ್ಳೂರು ಪ್ರಾರ್ಥಿಸಿದರು, ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ಪ್ರಸ್ತಾಪಿಸಿದರು, ವಿಘ್ನೇಶ್ ಜಿ ಎಲ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!