spot_img
Saturday, July 4, 2026
spot_img

ಸಂಚಾರಕ್ಕೆ ಅಸಾಧ್ಯವಾದ ಆಲೂರು-ಹುಂತನಗೋಳಿ ರಸ್ತೆ| ರಸ್ತೆ ಸರಿಪಡಿಸಿಕೊಡುವಂತೆ ಜಿಲ್ಲಾಡಳಿಕ್ಕೆ ಮೊರೆ

ಕುಂದಾಪುರ: ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಂತನಗೋಳಿ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರದೇಶವನ್ನು ಸಂಪರ್ಕಿಸುವ ಮುಖ್ಯ ರಸ್ತೆ ಈಗ ಸಂಚಾರಕ್ಕೆ ಅಸಾಧ್ಯವಾಗಿದೆ. ಮೊದಲಿದ್ದ ರಸ್ತೆಗೆ ಪರ್ಯಯವಾಗಿ ಹೊಸ ರಸ್ತೆ ನಿರ್ಮಾಣ ಮಾಡಲಾಗಿದ್ದು ಮೊದಲ ಮಳೆಗೆ ರಸ್ತೆಯ ಇಳಿಜಾರು ಭಾಗ ಸಂಪೂರ್ಣ ನೀರು ಹರಿದು ಹೋಗಿ ಹಳ್ಳಗಳಂತೆ ರಚನೆಗಳಾಗಿದ್ದು ಜೇಡಿ ಮಣ್ಣು ಕದಡಿ ಪಾದಚಾರಿಗಳಿಗೆ ನಡೆದುಕೊಂಡು ಹೋಗುವುದು ಕೂಡಾ ಕಷ್ಟಸಾಧ್ಯವಾಗಿದೆ. ಹಾಗಾಗಿ ಹುಂತನಗೋಳಿ ಭಾಗಕ್ಕೆ ಸಂಪರ್ಕವೇ ಇಲ್ಲದಂತಾಗಿದೆ.

ಹುಂತನಗೋಳಿ ಸಂಪರ್ಕದ ಏಕೈಕ ರಸ್ತೆ ಇದಾಗಿದ್ದು ನೂರಾರು ಮನೆಗಳು ಇಲ್ಲಿವೆ. ಪುರಾಣ ಪ್ರಸಿದ್ಧ ಹುಂತನಗೋಳಿ ದುರ್ಗಾಪರಮೇಶ್ವರಿ ದೇವಸ್ಥಾನವೂ ಇಲ್ಲದೆ. ಇದು ಪ್ರಸಿದ್ಧ ನಾಗಕ್ಷೇತ್ರ. ಸೌಪರ್ಣಿಕ ನದಿಗೆ ಇಲ್ಲಿಯೇ ಮುಂದೆ ಬಹುಕೋಟಿ ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದ್ದು, ಅಲ್ಲಿಗೆ ಸಂಪರ್ಕವನ್ನು ಕೂಡಾ ಈ ರಸ್ತೆಯೇ ಕಲ್ಪಿಸುತ್ತದೆ. ರಸ್ತೆ ಕೆಸರುಗುಂಡಿಯಾದ್ದರಿಂದ ಹುಂತನಗೋಳಿ ಭಾಗಕ್ಕೆ ಸಂಪರ್ಕವೇ ಇಲ್ಲದಂತಾಗಿದೆ.

ಹುಂತಿನಗೋಳಿ ಮೂಲಕ ಯರುಕೋಣೆ, ಕಾಲ್ತೋಡು, ಅರೆಶಿರೂರು ಭಾಗಕ್ಕೆ ಸಂಪರ್ಕ ಪಡೆಯಬಹುದಾಗಿದೆ. ಈಗ ಆಲೂರಿಗೆ ಬರಲು ಸಾಧ್ಯವಿಲ್ಲದೆ ಇರುವುದರಿಂದ ಜನ ಕಾಲ್ತೋಡು ಮೂಲಕ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗ ನಾಲ್ಕು ಪಟ್ಟು ಹೆಚ್ಚು ದೂರ. ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಂತನಗೊಳಿಯ ಜನ ಆಲೂರನ್ನೇ ಎಲ್ಲದಕ್ಕೂ ಆಶ್ರಯಿಸಿಕೊಂಡಿದ್ದಾರೆ. ಆದರೆ ಈಗ ರಸ್ತೆ ದುಸ್ತರವಾಗಿರುವುದರಿಂದ ಶಾಲಾ ಮಕ್ಕಳು, ಗ್ರಾಮಸ್ಥರು ಆಲೂರಿಗೆ ಬರಲು ದೊಡ್ಡ ಸಮಸ್ಯೆಯಾಗಿದೆ.

ಹೊಸ ರಸ್ತೆ ನಿರ್ಮಾಣದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಜಿಲ್ಲಾಡಳಿತ, ಚುನಾಯಿತ ಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕಾಗಿದೆ. ಸರಕಾರ, ಚುನಾಯಿತ ಪ್ರತಿನಿಧಿಗಳು ಮನಸ್ಸು ಮಾಡಿದರೆ ಗ್ರಾಮೀಣ ಜನರ ರಸ್ತೆ ಸಮಸ್ಯೆಗೆ ಪರಿಹಾರ ದೊರಕುತ್ತದೆ.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!