spot_img
Monday, July 6, 2026
spot_img

ಸಂಸ್ಕೃತಿ, ಮಾನವೀಯ ಮೌಲ್ಯ ಮಾತೃಭಾಷೆಯಲ್ಲಿರುತ್ತದೆ-ಚಿತ್ರನಟಿ ಅಶ್ವಿನಿ ಗೌಡ

ಸುಜ್ಞಾನದಲ್ಲಿ ‘ವಾಲ್ಬೆಲ್ಲ’ ಕುಂದಾಪ್ರ ಕನ್ನಡದ ಸಾಂಸ್ಕೃತಿಕ, ಚಿತ್ರಕಲಾ ಸ್ಪರ್ಧೆ ಉದ್ಘಾಟನೆ
ಕುಂದಾಪುರ : ಭಾಷೆಯಲ್ಲಿರುವ ಸ್ಥಳೀಯವಾದ ಭಾಷೆಯಲ್ಲಿ ಅನನ್ಯತೆ ಇರುತ್ತದೆ. ಜನರ ಜೀವನ ಶೈಲಿ, ಆಚರಣೆ, ಸಂಸ್ಕೃತಿಯ ಜೊತೆಗಿನ ಅವಿನಾಭಾವ ಸಂಬಂಧ ಪ್ರಾದೇಶಿಕ ಭಾಷೆಗಳಲ್ಲಿ ಕಾಣಬಹುದು. ಬೆಂಗಳೂರಿನಂತಹ ಮಹಾನಗರದಲ್ಲಿ ಇತರೆ ಭಾಷೆಗಳ ನಡುವೆ ಕನ್ನಡ ಸಿಲುಕಿ ಒದ್ದಾಡುತ್ತಿದೆ. ಇಂಥಹ ಸಂದರ್ಭದಲ್ಲಿ ಕುಂದಾಪ್ರ ಕನ್ನಡದ ಬಗ್ಗೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನಾರ್ಹ ಎಂದು ಚಿತ್ರನಟಿ ಹಾಗೂ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ ಹೇಳಿದರು.

ಅವರು ಯಡಾಡಿ ಮತ್ಯಾಡಿಯ ಸುಜ್ಞಾನ ಪದವಿಪೂರ್ವ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಜುಲೈ 6ರಂದು ಸೋಮವಾರ ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆ ‘ವಾಲ್ಬೆಲ್ಲ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ನಮಗೆ ಪದವಿಗಳು ಬೇಡ, ಮಾನವಿಯತೆಯ ಮನುಷ್ಯತ್ವ ಬೇಕು. ಅಂಥಹ ಶಿಕ್ಷಣ ಪ್ರಸ್ತುತ ಶಿಕ್ಷಣ ಸಂಸ್ಥೆಗಳಿಂದ ದೊರಕಬೇಕು. ಶ್ರೇಷ್ಠ ಸ್ಥಾನದಲ್ಲಿರುವ ಗುರು ತಂದೆ, ತಾಯಿ, ದೇವರು ಹೀಗೆ ನಾಲ್ಕು ಸ್ಥಾನಗಳನ್ನು ತುಂಬಬಲ್ಲ ಸಾಮರ್ಥ್ಯ ಹೊಂದಿರುತ್ತಾರೆ. ಮಾದರಿ ಶಿಕ್ಷಕರ ಮೂಲಕ ಆದರ್ಶ ಸಮಾಜ ನಿರ್ಮಾಣವಾಗಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು
ಪ್ರಸ್ತುತ ಮಕ್ಕಳು ಮೊಬೈಲ್, ಡಿಜಿಟಲ್ ಲೋಕದಲ್ಲಿ ಮುಳುಗುತ್ತಿದ್ದಾರೆ. ಆಧುನಿಕತೆ ಪ್ರಾದೇಶಿಕ ಸೊಗಡುಗಳನ್ನು ನಾಶ ಮಾಡುತ್ತಿದೆ. ಬದಲಾದ ಜಿವನ ಕ್ರಮ ನಮ್ಮ ಸಂಸ್ಕೃತಿಕ ಗುರುತನ್ನು ಮರೆಸಿಬಿಟ್ಟಿದೆ. ಹಳ್ಳಿಯ ಕೌಟುಂಬಿಕ ಬಾಂಧವ್ಯ, ಕೃಷಿ ಸಂಸ್ಕೃತಿಯ ನಂಟು, ಪರಿಸರ ಸಂವೇದನೆ, ಹಬ್ಬ-ಹರಿದಿನಗಳು ಭಾಷೆಯ ಜೊತೆಗೆ ಬೆಸದುಕೊಂಡ ಸಂಬಂಧ ಅದ್ಭುತವಾದುದು ಎಂದರು.

ಜಯರತ್ನ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಹಾಗೂ ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ ಮಾತನಾಡಿ, ಇವತ್ತು ಅನುಕರಣೆ, ಪ್ರತಿಷ್ಠೆಯ ವಿಷಯದಲ್ಲಿ ಮಾತೃಭಾಷೆಯನ್ನು ಮರೆಯುತ್ತಿದ್ದೇವೆ. ಮನೆ ಮನೆಗಳಿಂದಲೇ ಭಾಷಾ ಪ್ರೇಮ ಆರಂಭವಾಗಬೇಕು ಎಂದರು.
ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ವಹಿಸಿದ್ದರು. ಸಂಸ್ಥೆಯ ಕೋಶಾಧಿಕಾರಿ ಭರತ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಕನ್ನಡ ಹೋರಾಟಗಾರ್ತಿ ಅಶ್ವಿನಿ ಗೌಡ, ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ರಾಜು ಮೊಗವೀರ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಂಯೋಜಕ ಪ್ರೊ. ನಾಗಪ್ಪಗೌಡ ಆರ್. ಅವರನ್ನು ಸನ್ಮಾನಿಸಲಾಯಿತು.

ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಾದ ಅರುಣ್ ಕುಮಾರ್ ಹೆಗ್ಡೆ, ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್. ಮಂಜಯ್ಯ ಶೆಟ್ಟಿ ಸಬ್ಲಾಡಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಚಿಟ್ಟೆಬೈಲು ಜಗನ್ನಾಥ ಶೆಟ್ಟಿ, ಕುಂದಾಪ್ರ ಕನ್ನಡ ಪೀಠದ ಸದಸ್ಯರಾದ ಕೆ.ಸಿ. ರಾಜೇಶ್, ಉದಯ ಶೆಟ್ಟಿ ಪಡುಕೆರೆ, ಜುಡಿತ್ ಮೆಂಡೋನ್ಸಾ ಹಾಗೂ ಡಾ. ರೇಖಾ ಬನ್ನಾಡಿ ಉಪಸ್ಥಿತರಿದ್ದರು.

ಶಿಕ್ಷಕ ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ರಂಜನ್ ಶೆಟ್ಟಿ ವಂದಿಸಿದರು.
ಬಳಿಕ ಸಾಂಸ್ಕೃತಿಕ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಆರಂಭಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!