ಹೆಬ್ರಿ: ಅಮೃತ ಭಾರತಿ ವಿದ್ಯಾ ಕೇಂದ್ರ ಹೆಬ್ರಿ ಇದರ ಕಾರ್ಯದರ್ಶಿ ಗುರುದಾಸ್ ಶೆಣೈ, ಸದಸ್ಯ ವಿಷ್ಣುಮೂರ್ತಿ ನಾಯಕ್, ಕಾಲೇಜು ಪ್ರಾಂಶುಪಾರಾದ ಬಿ ಅಮರೇಶ್ ಹೆಗ್ಡೆ, ಸಿಬಿಎಸ್ಸಿ ವಿಭಾಗದ ಪ್ರಾಂಶುಪಾಲರಾದ ಅರುಣ್ ಎಚ್ ವೈ, ಮುಖ್ಯೋಪಾಧ್ಯಾಯಿನಿ ಅನಿತಾ ಇವರೆಲ್ಲರೂ ಇತ್ತೀಚೆಗೆ ಅಪಘಾತಕ್ಕಿಡಾದ ಬಾಲಕ ಕೌಶಿಕ್ ಶೆಟ್ಟಿ ಚಿಕಿತ್ಸೆಗಾಗಿ ತಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಪೋಷಕರು ಹಾಗೂ ಸಿಬ್ಬಂದಿ ವರ್ಗದವರಿಂದ ಸಂಗ್ರಹಿಸಿದ ರೂ. 77438 ನಗದು ರೂಪದಲ್ಲಿ ಕೌಶಿಕನ ಮನೆಗೆ ಆಗಮಿಸಿ ತಂದೆ ರಾಘವೇಂದ್ರ ಶೆಟ್ಟಿ ತಾಯಿ ರಾಜಶ್ರೀ ಇವರಿಗೆ ನೀಡಿ ಕ್ಷೇಮ ಸಮಾಚಾರ ವಿಚಾರಿಸಿದರು.
ಈ ಸಂದರ್ಭ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸತೀಶ್ ಶೆಟ್ಟಿ ಹಾಗೂ ಗೌರವ ಶಿಕ್ಷಕಿ ಸುಮಾ ಆರ್ ಕ್ರಮ ದಾರಿ ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಇವರು ವಿದ್ಯಾಸಂಸ್ಥೆಯ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.