spot_img
Monday, April 6, 2026
spot_img

ಜಲವಳ್ಳಿಗೆ ಮಯ್ಯ ಯಕ್ಷಶ್ರೀ ಪ್ರಶಸ್ತಿ, ಮೊಗೆಬೆಟ್ಟುವಿಗೆ ಮಣೂರು ವಾಸುದೇವ ಮಯ್ಯ ಪ್ರಶಸ್ತಿ

ಕುಂದಾಪುರ: ಯಕ್ಷಗಾನ ಕಲಾ ಪೋಷಕರಾದ ಋಷಿಕುಮಾರ್ ಮಯ್ಯ ಸಂಸಾಪಕತ್ವದ ಮಯ್ಯ ಯಕ್ಷಶ್ರೀ ಪ್ರತಿಷ್ಠಾನ ರಿ., ಅಣಲಾಡಿ ಮಠ ಐರೋಡಿ-ಸಾಸ್ತಾನ ಇದರ ತೃತೀಯ ವಾರ್ಷಿಕ ಸಮಾರಂಭ ಜು.31 ಆದಿತ್ಯವಾರ ನಡೆಯಲಿದೆ.

ಆ ದಿನ ಮಧ್ಯಾಹ್ನ ೨ಗಂಟೆಯಿಂದ ಯಕ್ಷಲೋಕದಲ್ಲಿ ಮೊತ್ತ ಮೊದಲ ಬಾರಿಗೆ ಆಯ್ದ ಆರುಮಂದಿ ಯಕ್ಷ ಕವಿಗಳ ಸಮಾಗಮದಲ್ಲಿ-ಪ್ರಸಂಗಕರ್ತರ ತಾಳಮದ್ದಳೆ ಪ್ರಮದಾ ಪ್ರಸಂಗ ನಡೆಯಲಿದೆ. ಪ್ರಯೋಗ ಪರಿಕಲ್ಪನೆ, ಭಾಗವತಿಕೆಯಲ್ಲಿ ಪ್ರಸಾದ ಕುಮಾರ್ ಮೊಗೆಬೆಟ್ಟು, ಚಂಡೆಯಲ್ಲಿ ರಾಮಕೃಷ್ಣ ಮಂದಾರ್ತಿ, ಮದ್ದಳೆಯಲ್ಲಿ ಭರತ್ ಚಂದನ್ ಭಾಗವಹಿಸುವರು. ಅಭಿನವ ಪಾರ್ತಿಸುಬ್ಬ ಕಂದಾವರ ರಘುರಾಮ ಶೆಟ್ಟಿ, ದೇವದಾಸ ಈಶ್ವರಮಂಗಲ, ಪ್ರೊ.ಪವನ್ ಕಿರಣ್‌ಕೆರೆ ಬಸವರಾಜ ಶೆಟ್ಟಿಗಾರ್, ಸುಜಯೀಂದ್ರ ಹಂದೆ ಅರ್ಥಧಾರಿಗಳಾಗಿದ್ದಾರೆ.
ಸಂಜೆ ೫.೩೦ರಿಂದ ಮಯ್ಯ ಯಕ್ಷಶ್ರೀ ಪ್ರತಿಷ್ಠಾನದ ವಾರ್ಷಿಕ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಸುಪ್ರಸಿದ್ಧ ಕಲಾವಿದರಾದ ಜಲವಳ್ಳಿ ವಿದ್ಯಾಧರ ರಾವ್ ಅವರಿಗೆ ಈ ಸಾಲಿನ ಮಯ್ಯ ಯಕ್ಷಶ್ರೀ ಪ್ರಶಸ್ತಿ ಹಾಗೂ ಪ್ರಸಂಗಕರ್ತ ಭಾಗವತ ಪ್ರಸಾದ ಕುಮಾರ್ ಮೊಗೆಬೆಟ್ಟು ಅವರಿಗೆ ಮಣೂರು ವಾಸುದೇವ ಮಯ್ಯ ಸ್ಮಾರಕ ಪ್ರಶಸ್ತಿಯನ್ನು ವಾಸುದೇವ ಮಯ್ಯ ಕುಟುಂಬದ ವತಿಯಿಂದ ಪ್ರದಾನ ಮಾಡಲಾಗುವುದು.

ಮೂರು ದಶಕಗಳ ಕಾಲ ರಂಗದಲ್ಲಿ ತನ್ನದೇ ವಿಶಿಷ್ಠ ಶೈಲಿಯ ಪಾತ್ರ ನಿರ್ವಹಣೆಯಿಂದ ಬಹುಬೇಡಿಕೆಯ ಯಕ್ಷತಾರೆಯಾಗಿ ರೂಪುಗೊಂಡ ವಿದ್ಯಾಧರರಾವ್ ಜಲವಳ್ಳಿ ತಂದೆ ಕೀರ್ತಿಶೇಷ ಜಲವಳ್ಳಿ ವೆಂಕಟೇಶ ರಾಯರ ಗತ್ತು-ಗೈರತ್ತಿನ ನಡೆಯ ಅನುಸರಣೆಯೊಂದಿಗೆ ತನ್ನದೇ ಸೃಜನಾತ್ಮಕ ರಂಗನಡೆಯಯೊಂದಿಗೆ ನಾಯಕ, ಪ್ರತಿನಾಯಕ, ಖಳನಾಯಕ ಪಾತ್ರಗಳಿಗೆ ಸಶಕ್ತ ರಂಗನ್ಯಾಯ ಒದಗಿಸುವತ್ತ ಬಂದಿದ್ದಾರೆ. ಜಲವಳ್ಳಿ ಮೇಳ ಎಂಬ ಡೇರೆ ಮೇಳದ ಸಂಚಾಲಕರಾಗಿಯೂ ಅನುಭವ ಹೊಂದಿದವರು. ಜಲವಳ್ಳಿಯ ಕಲಾಧರ ಯಕ್ಷಗಾನ ಶಾಲೆಯ ರೂವಾರಿಯೂ ಹೌದು.

ಯಕ್ಷಗಾನ ರಂಗದಲ್ಲಿ ೨೫ನೇ ವರ್ಷದಲ್ಲಿರುವ ಪ್ರಸಾದ ಕುಮಾರ್ ಮೊಗೆಬೆಟ್ಟು ಪ್ರಸಂಗಕವಿ. ಭಾಗವತ, ಯಕ್ಷಗಾನ ಗುರುವಾಗಿ ಸೇವೆ ಸಲ್ಲಿಸುವವರು. ಸಾಮಾಜಿಕ, ಪೌರಾಣಿಕ, ಕಾಲ್ಪನಿಕ, ಐತಿಹಾಸಿಕ, ಕ್ಷೇತ್ರ ಪುರಾಣ, ಯಕ್ಷರೂಪಕ ಸೇರಿದಂತೆ ೩೨ ಪ್ರಸಂಗಳನ್ನು ರಚಿಸಿದ್ದಾರೆ. ಇತರ ಪ್ರಸಂಗಕರ್ತರ ೧೭ ಪ್ರಸಂಗಳಿಗೆ ಪದ್ಯ ಸಾಹಿತ್ಯ ಒದಗಿಸಿದ್ದಾರೆ. ಆಟ-ಕೂಟಗಳ ಅತಿಥಿ ಭಾಗವತರಾಗಿ ಭಾಗವಹಿಸಿದ್ದಾರೆ. ಗುರುವಾಗಿ ಸಾವಿರಾರು ವಿದ್ಯಾರ್ಥಿಗಳನ್ನು ಹೊಂದಿರುವ ಇವರು, ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಮಣೂರು ವಾಸುದೇವ ಮಯ್ಯರು ಯಕ್ಷಗಾನ ರಂಗಕ್ಕೆ ಪಂಚ ಕಲಾಕೃತಿಗಳನ್ನು ನೀಡಿದ್ದಾರೆ. ಅದ್ಭುತ ಕಥಾಕಲ್ಪನೆ, ಅಪರೂಪದ ರಂಗನಡೆಯ ಅದ್ದೂರಿ‌ ಪ್ರಸಂಗ ಪ್ರದರ್ಶನಗಳ ಮೂಲಕ ರಾಜವೈಭವನ್ನುದ ಮೆರುಗು ನೀಡಿವೆರು. ಇವರ ನಾಲ್ಕು ಹೊಸ ಪ್ರಸಂಗಗಳಿಗೆ ಪ್ರಸಾದ ಕುಮಾರ್ ಮೊಗೆಬೆಟ್ಟು ಪದ್ಯ ಸಾಹಿತ್ಯ ಒದಗಿಸಿದ್ದಾರೆ. ಇಂದ್ರನಾಗ, ಪುಷ್ಪಸಿಂಧೂರಿ, ದೇವಗಂಗೆ ಹಾಗೂ ಸೂರ್‍ಯಸಂಕ್ರಾಂತಿ ಪ್ರಸಂಗಗಳು ಮ್ಯಯ್ಯರ ಯಶಸ್ವಿ ಪ್ರಸಂಗಗಳು.

ಸಭಾ ಕಾರ್ಯಕ್ರಮದ ಬಳಿಕ ಬಡಗಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಗದಾಯುದ್ಧ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದು ಮಯ್ಯ ಪ್ರತಿಷ್ಠಾನ ಅಣಲಾಡಿಮಠ ಇದರ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕರ್ಕೇರ ಕೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!