spot_img
Monday, April 6, 2026
spot_img

ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ‘ನಾಟ್ಯವಲ್ಲಿ-2’ ಬಿಡುಗಡೆ


ಕುಂದಾಪುರ : ಕುಂದಾಪುರ ಭಾಷೆಯಲ್ಲಿ ಛಂದೋಬದ್ಧವಾಗಿ ಯಕ್ಷ ಕೃತಿಯನ್ನು ಬರೆಯುವುದು ಸಣ್ಣ ಸಾಧನೆಯಲ್ಲ. ಭಾಷೆಯನ್ನು ಪದೇ ಪದೇ ರಂಗದಲ್ಲಿಯೂ ಬಳಸುವುದಕ್ಕೆ ಕೃತಿಯನ್ನು ರಚಿಸಿದ್ದಾರೆ. ಇದು ಮುಂದಿನ ಪೀಳಿಗೆಗೂ ಕೊಂಡೊಯ್ಯುವದಕ್ಕೆ ಸಾಧ್ಯವಾಗುತ್ತದೆ. ಪ್ರೀತಿಯಿಂದ ಭಾಷೆಯನ್ನು ಬಳಸಿ, ಬೆಳೆಸಿ ಎಂದು ಪತ್ರಕರ್ತ, ಸಮಾಜ ಚಿಂತಕ ವಸಂತ ಗಿಳಿಯಾರು ಅಭಿಪ್ರಾಯಪಟ್ಟರು.

ಜುಲೈ ೨೮, ೨೦೨೨ರಂದು ಯಕ್ಷದೀಪ ಕಲಾಟ್ರಸ್ಟ್ ಮಲ್ಯಾಡಿ ಪ್ರಾಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಕಾರದೊಂದಿಗೆ ಯೋಗೀಶ್ ಮಣೂರು ಬಳಗ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯಲ್ಲಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ನಾಟ್ಯವಲ್ಲಿ-೨ ಯಕ್ಷ ಪ್ರಸಂಗ ಕೃತಿಯನ್ನು ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವರ ಸಹಕಾರದೊಂದಿಗೆ ಅನಾವರಣಗೊಳಿಸಿ ಮಾತನ್ನಾಡಿದರು.

ಕುಂದಾಪುರ ಕನ್ನಡ ಭಾಷೆಯನ್ನು ನಮ್ಮ ಮಕ್ಕಳು ಮುಂದಿನ ತಲೆಮಾರಿಗೆ ಕೊಂಡೊಯ್ಯುವುದಕ್ಕಾಗಿ ಹೆಚ್ಚು ಹೆಚ್ಚು ಬಳಸಬೇಕು. ಆ ಕಾರಣಕ್ಕಾಗಿಯೇ ಕುಂದಾಪುರ ಕನ್ನಡ ದಿನಾಚರಣೆಯನ್ನು ನಾವು ನಮ್ಮ ಸ್ನೇಹಿತರೊಂದಿಗೆ ಚರ್ಚಿಸಿ, ವರ್ಷದ ಪ್ರಥಮ ಹಬ್ಬ ಆಷಾಡ ಅಮವಾಸ್ಯೆಯಂದು ಆಚರಿಸುವುದಾಗಿ ತೀರ್ಮಾನ ಕೈಗೊಂಡೆವು. ಈ ಆಚರಣೆಯನ್ನು ಹೊತ್ತು ಮೆರೆಸಿದವರು ಹಲವಾರು ಸಂಘ ಸಂಸ್ಥೆ ಹಾಗೂ ಭಾಷಾಭಿಮಾನಿಗಳು. ಅದರಲ್ಲಿಯೂ ಯಶಸ್ವಿ ಕಲಾವೃಂದ ಕೊಮೆ, ಯಕ್ಷದೀಪ ಕಲಾಟ್ರಸ್ಟ್ ಮಲ್ಯಾಡಿ, ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಈ ಸಂಸ್ಥೆಗಳು ಅಭಿಮಾನದಿಂದ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಿರ್ವಹಿಸುತ್ತಿರುವುದು ನಿಜಕ್ಕೂ ಸ್ತುತ್ಯರ್ಹ ಎಂದು ಅತಿಥಿಯಾಗಿ ಆಗಮಿಸಿದ ಸಾಹಿತಿ ಚಿಂತಕ ಉದಯಕುಮಾರ್ ಶೆಟ್ಟಿ ಪಡುಕೆರೆ ಮಾತನ್ನಾಡಿದರು.

ವೇದಿಕೆಯಲ್ಲಿ ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಬಸವರಾಜ್ ಶೆಟ್ಟಿಗಾರ್, ಯಕ್ಷದೇಗುಲದ ಸಂಚಾಲಕ ಕೋಟ ಸುದರ್ಶನ ಉರಾಳ, ಶ್ರೀ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಉಪಸ್ಥಿತರಿದ್ದರು. ಯಕ್ಷದೀಪ ಕಲಾ ಟ್ರಸ್ಟ್ ಮಲ್ಯಾಡಿ ಅಧ್ಯಕ್ಷರಾದ ಸತೀಶ್ಚಂದ್ರ ಕಾಳಾವರ್‌ಕರ್ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಯೋಗಿಶ್ ಮಣೂರು ಬಳಗ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ ಪೌರಾಣಿಕ ಕಥಾ ಭಾಗ ಕುಂದಪಂಚಮಿ ಸಾಮಾಜಿಕ ಪ್ರಸಂಗ ನಾಟ್ಯವಲ್ಲಿ-2 ರಂಗದಲ್ಲಿ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!