spot_img
Saturday, May 23, 2026
spot_img

ಜೆಸಿ‌ಐ ಕುಂದಾಪುರ ಸಂಸ್ಥಾಪನಾ ದಿನಾಚರಣೆ: ಸಾಧಕರಿಗೆ ಸನ್ಮಾನ

ಕುಂದಾಪುರ: ಜೆಸಿ‌ಐ ಕುಂದಾಪುರ ವತಿಯಿಂದ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಕುಂದಾಪುರದ ಹಿರಿಯ ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಅವರ ಮನೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರತ್ನ ಹೇರ್ಳೆ ವಹಿಸಿದ್ದರು.

ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಅಂತಾರಾಷ್ಟ್ರೀಯ ದೇಹದಾರ್ಡ್ಯ ಪಟು ಜಿ.ವಿ ಅಶೋಕ, ಅಂಬುಲೆನ್ಸ್ ಹಂದೆ ಎಂದೇ ಖ್ಯಾತರಾದ ವಾಸುದೇವ ಹಂದೆ, ಶಿಕ್ಷಕಿ ಶಶಿಕಲಾ, ಸ್ಯಾನಿಟರ್ ಪ್ಯಾಡ್ ವಿಲೇವಾರಿ ಘಟಕ ಯೋಜನೆ ತಯಾರಿಸಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಪರಿಸರ ಪ್ರೇಮಿ ಶಿಕ್ಷಕ ಶ್ರೀಕಾಂತ ವಿ, ನೃತ್ಯಗಾರ್ತಿ ಶುಭಾ ಭಾಗವತ್, ರಕ್ತದಾನಿ ಸುಧಾಕರ ಕಾಂಚನ್ ಇವರನ್ನು ಗೌರವಿಸಲಾಯಿತು.

ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿ ಸೆನೆಟರ್ ಸದಾನಂದ ನಾವಡ, ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರ ಶ್ರೀಧರ ಪಿ.ಎಸ್, ಮಹಿಳಾ ಜೆ.ಸಿಯ ವಲಯ ನಿರ್ದೇಶಕಿ ಅಕ್ಷತಾ ಗಿರೀಶ್, ನ್ಯೂ ಜೆಸಿಯ ವಲಯ ಸಂಯೋಜಕರಾದ ಅಶೋಕ ತೆಕ್ಕಟ್ಟೆ, ಜೆಸಿ‌ಐ ಕುಂದಾಪುರದ ಪೂರ್ವಾಧ್ಯಕ್ಷರಾದ ರತ್ನಾಕರ್, ವಿಷ್ಣು ಕೆ.ಬಿ, ದಿನೇಶ್ ಗೋಡೆ, ನವೀನ್ ಶೇಟ್, ಜಗದೀಶ್ ಜೋಗಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!