spot_img
Monday, April 6, 2026
spot_img

ಸೌತ್ ಕೆನರಾ ಫೊಟೋಗ್ರಾಫರ್‍ಸ್ ಅಸೋಸಿಯೇಶನ್: ಕುಂದಾಪುರ ಬೈಂದೂರು ವಲಯದ ಕ್ರೀಡಾಕೂಟ

ಕುಂದಾಪುರ: ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಷನ್ ರಿ., ದಕ್ಷಿಣ ಕನ್ನಡ ಕುಂದಾಪುರ ಬೈಂದೂರು ವಲಯದ ಕ್ರೀಡಾ ಕೂಟವು ಜು.23 ರಂದು ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆಯಿತು.

ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೃಷ್ಣಾನಂದ ಚಾತ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ದೊಟ್ಟಯ್ಯ ಪೂಜಾರಿ ವಹಿಸಿದ್ದರು. ಸಲಹಾ ಸಮಿತಿಯ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ, ಚಂದ್ರಕಾಂತ, ರಾಘವೇಂದ್ರ ಭಟ್, ಶೀನ ದೇವಾಡಿಗ. ಪ್ರಧಾನ ಕಾರ್ಯದರ್ಶಿ ಸುರೇಶ್ ಜಮದಗ್ನಿ ಕೋಶಾಧಿಕಾರಿ ವಿಠ್ಠಲ ನಾಗೂರು, ಕ್ರೀಡಾ ಕಾರ್ಯದರ್ಶಿಗಳಾದ ರಾಘವೇಂದ್ರ ಬಸ್ರೂರು, ಸಿರಿ ಕುಂದಾಪುರ, ದಿನೇಶ್ ನಾಗೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ವೇಯ್ಟ್ ಲಿಫ್ಟರ್ ಸತೀಶ್ ಖಾರ್ವಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಾಗರಾಜ ರಾಯಪ್ಪನಮಠ ಸ್ವಾಗತಿಸಿದರು. ಸುರೇಶ್ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಜಮದಗ್ನಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!