spot_img
Thursday, November 19, 2026
spot_img

ಕುಂದಾಪುರ:ಎಕ್ಸಲೆಂಟ್‌ನಲ್ಲಿ ರೂ.1 ಕೋಟಿವರೆಗೆ ವಿದ್ಯಾರ್ಥಿ ವೇತನಕ್ಕೆ ESET-2027 ಪ್ರವೇಶ ಪರೀಕ್ಷೆ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಎ.ಐ ತಂತ್ರಜ್ಞಾನದೊಂದಿಗೆ ದಿನದ 24 ಗಂಟೆ ಪ್ರವೇಶ ಪರೀಕ್ಷೆ

ಕುಂದಾಪುರ, ನ.19: ಸದಾ ಹೊಸತನದೊಂದಿಗೆ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಅನುಕೂಲ ಕಲ್ಪಿಸಿಕೊಡಲು ಸದಾ ಕಾರ್ಯಪ್ರವೃತ್ತವಾಗಿರುವ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಒಂದು ಕೋಟಿ ವರೆಗೆ ವಿದ್ಯಾರ್ಥಿವೇತನಕ್ಕೆ ESET-2027 ಪ್ರವೇಶ ಪರೀಕ್ಷೆಗೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಎ.ಐ ತಂತ್ರಜ್ಞಾನದಲ್ಲಿ ಪ್ರವೇಶಾತಿ ಬಯಸುವ ವಿದ್ಯಾರ್ಥಿ ದಿನದ 24 ಗಂಟೆ ಪರೀಕ್ಷೆ ಬರೆಯುವ ಅವಕಾಶವನ್ನು ಪರಿಚಯಿಸುತ್ತಿದೆ ಎಂದು ಎಕ್ಸಲೆಂಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ ತಿಳಿಸಿದರು.

ಅವರು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸಂಸ್ಥೆಯು 14 ವರ್ಷಗಳಿಂದ ವಿವಿಧ ವೃತ್ತಿ ಪರ ಕೋರ್ಸ್‌ಗಳಿಗೆ ತರಬೇತಿಯನ್ನು ನೀಡುತ್ತಿದ್ದು, ಈ ಬಾರಿ ಸಿ‌ಇಟಿ, ನೀಟ್, ಜಿ‌ಇ‌ಇ ಮೈನ್ಸ್ ಮತ್ತು ಅಡ್ವಾನ್ಸ್, ಸಿ‌ಎ, ಸಿ‌ಎಸ್ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿಗೆ ನಂಬರ್ 1 ಸಂಸ್ಥೆಯಾಗಿ ಮೂಡಿಬಂದಿದೆ. ಅಷ್ಟೆ ಅಲ್ಲದೇ ಕ್ರೀಡೆಯಲ್ಲೂ ಕೂಡ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ದ್ವಿತೀಯ ಪಿಯುಸಿ ವರೆಗೆ ನಮ್ಮ ಜವಾಬ್ದಾರಿ, ನಂತರ ಪಾಲಕರು ನೋಡಿಕೊಳ್ಳುತ್ತಾರೆ ಎನ್ನುವ ಮನೋಭಾವನೆ ನಮ್ಮದಲ್ಲ. ನೀಟ್ ಮೆಡಿಕಲ್ ಸೀಟ್ ಆದ ನಂತರದಲ್ಲಿ ಸಿ‌ಇಟಿಯಲ್ಲಿ ಇಂಜಿನಿಯರಿಂಗ್ ಸೀಟ್ ಆದ ನಂತರದಲ್ಲಿ ಆರ್ಥಿಕವಾಗಿ ಸಬಲರಲ್ಲದ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಬೆನ್ನೆಲುಬಾಗಿ ಸಂಸ್ಥೆ ನಿಂತಿದ್ದು ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಬೇರೆ ಊರಿನ ಪೋಷಕರು ಸೀಟಿಗಾಗಿ ಸಂಪರ್ಕಿಸುತ್ತಿದ್ದು ಬೇಡಿಕೆ ಹೆಚ್ಚಿರುವುದರಿಂದ ನಾವು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಒಂದು ಹೊಸ ಯೋಜನೆಯನ್ನು ಅನುಷ್ಟಾನಿಸಿದ್ದೇವೆ ಎಂದರು.

ಪ್ರತಿ ವರ್ಷ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ 600 ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚವನ್ನು ಸಂಸ್ಥೆ ಭರಿಸುವ ಮೂಲಕ ಪ್ರತಿ ವರ್ಷ ಒಂದು ಕೋಟಿಯವರೆಗೆ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಕುಂದಾಪುರ ತಾಲೂಕಿನಲ್ಲಿ ಎಲೆ ಮರೆಯ ಕಾಯಿ ಎನ್ನುವಂತೆ ಎಕ್ಸಲೆಂಟ್ ಕೆಲಸ ಮಾಡುತ್ತ ಬಂದಿದೆ. ಪ್ರತಿವರ್ಷ ನಾವು ಬೇರೆ ಬೇರೆ ಊರುಗಳಿಗೆ ಹೋಗಿ ಪರೀಕ್ಷೆ ನಡೆಸುವಂಥದ್ದು. ಅಥವಾ ನಮ್ಮ ಸಂಸ್ಥೆಗೆ ಕರೆಸಿ ವಿದ್ಯಾರ್ಥಿವೇತನದ ಪರೀಕ್ಷೆ ನಡೆಸುವಂಥದ್ದು. ಇದೆಲ್ಲ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿ ಪಾಲಕರಿಗೆ ಖರ್ಚು ವೆಚ್ಚ ಸಮಯದ ತೊಂದರೆ ಆಗುತ್ತಿತ್ತು. ಆದರೆ ಈ ವ್ಯವಸ್ಥೆಯಿಂದ ನಮ್ಮ ಸಂಸ್ಥೆಯು ಅಭೂತಪೂರ್ವ ಬದಲಾವಣೆಯನ್ನು ಮಾಡಿದ್ದೇವೆ. ರಾಜ್ಯದ ಪ್ರತಿ ಮಗುವನ್ನು ಈ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೋಸ್ಕರ ವಿದ್ಯಾರ್ಥಿಗಳಿಗಾಗಲಿ ಅಥವಾ ಪಾಲಕರಿಗಾಗಲಿ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷೆ ಸಮಯದಲ್ಲಿ ಅವರ ಸಮಯವನ್ನು ನಾವು ಕಸಿದುಕೊಳ್ಳುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಈ ವರ್ಷ ರಾಜ್ಯದಲ್ಲಿ ಮೊದಲ ಬಾರಿಗೆ (AI Proctored) ಎ.ಐ ಪ್ರೋಕ್ಟರ್‍ಡ್ ಪರೀಕ್ಷೆ ಪ್ರಸ್ಥುತ ಪಡಿಸುತ್ತಿರುವುದು ರಾಜ್ಯದಲ್ಲಿಯೇ ಪ್ರಪ್ರಥಮ ಸಂಸ್ಥೆ ಎಕ್ಸಲೆಂಟ್ ಆಗಿದೆ. ಇದರ ಮೂಲಕ ಪ್ರಥಮ ವರ್ಷಕ್ಕೆ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳಿಗೆ 24×7 ಎನ್ನುವಂತೆ ವಿದ್ಯಾರ್ಥಿಗಳಿಗೆ ಯಾವಾಗ ಸಮಯ ಇರುತ್ತದೆಯೋ ಆವಾಗ ಪರೀಕ್ಷೆ ಬರೆಯಬಹುದು. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಮಯ, ಹಣ ಎಲ್ಲ ಉಳಿತಾಯವಾಗುತ್ತದೆ ಈ ಯೋಚನೆ ಮತ್ತು ಯೋಜನೆ ನಮ್ಮ ಸಂಸ್ಥೆಯದು. ಎಕ್ಸಲೆಂಟ್ ವೆಬ್‌ಸೈಟ್ ಮೂಲಕ ಈ ಪ್ರವೇಶಾತಿ ಪರೀಕ್ಷೆಯನ್ನು ಬರೆಯಬಹುದು. ಪ್ರತಿಯೊಂದು ವಿದ್ಯಾರ್ಥಿಗಳ ಪಾಲಕರ ಬಳಿ ಮೊಬೈಲ್ ಇರುತ್ತದೆ ಮೊಬೈಲ್ ಮೂಲಕ ಕೂಡ ಈ ಪರೀಕ್ಷೆಯನ್ನು ಬರೆಯಬಹುದು. ಈ ಯೋಜನೆಯು ಅಧಿಕೃತವಾಗಿ ನವೆಂಬರ್ ೨೫ರಿಂದ ವಿದ್ಯಾರ್ಥಿಗಳಿಗೆ ಲಭ್ಯವಿರುತ್ತದೆ ಎಂದು ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 6361329550 ಹಾಗೂ ಸಂಸ್ಥೆಯ ವೆಬ್‌ಸೈಟ್  https://excellentpucollege.com    ಗೆ ಭೇಟಿ ನೀಡಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!