spot_img
Thursday, August 20, 2026
spot_img

ಕಸ್ತೂರಿ ರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ 7ನೇ ಕರಡು ಅಧಿಸೂಚನೆ ಬಗ್ಗೆ ಸದನದ ಗಮನ ಸೆಳೆದ ಶಾಸಕ ಗಂಟಿಹೊಳೆ

ಅಧಿಸೂಚನೆ ವಿರುದ್ಧ ಸ್ಪಷ್ಟ ವಾದ ಮಂಡನೆ: ಭೌತಿಕ ಸರ್ವೇಗೆ ಒಳಪಡಿಸಲು ಆಗ್ರಹ
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನದಲ್ಲಿ ರಾಜ್ಯದಲ್ಲಿ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದ 7ನೇ ಕರಡು ಅಧಿಸೂಚನೆ ಹೊರಡಿಸಿರುವುದು ಸರಕಾರದ ಗಮನದಲ್ಲಿರುವ ಹಾಗೂ ಕರಡು ಅಧಿಸೂಚನೆಯ ಬಗ್ಗೆ ಸ್ಥಳೀಯ ಗ್ರಾಮ ನಿವಾಸಿಗಳು ಮತ್ತೊಮ್ಮೆ ಅತಂಕಿತರಾಗಿರುವುದರಿಂದ ಜನರ ಜೀವನೋಪಾಯ ಮತ್ತು ಅಭಿವೃದ್ಧಿ ವಿಚಾರಗಳ ಸ್ಪಷ್ಟನೆ ಬಗ್ಗೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸರಾದ ಗುರುರಾಜ್ ಗಂಟಿ ಹೊಳೆಯವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ರಾಜ್ಯ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರಾದ ರಾಮ ಲಿಂಗರೆಡ್ಡಿಯವರು ಭಾರತ ಸರಕಾರವು ಜು.27-2026ರಂದು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದಂತೆ 7ನೇ ಕರಡು ಅನುಸೂಚನೆಯನ್ನು ಹೊರಡಿಸಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ಪ್ರಸ್ತುತ ಕಸ್ತೂರಿ ರಂಗನ್ ವರದಿ ಅಧರಿಸಿ ಕೇಂದ್ರ ಸರ್ಕಾರವು 27 ನೇ ಜುಲೈ 2026 ರಂದು ಹೊರಡಿಸಿರುವ 7 ನೇ ಕರಡು ಅಧಿಸೂಚನೆಯನ್ನು ಸರ್ಕಾರದ ಹಂತದಲ್ಲಿರುತ್ತದೆ ಎಂದಿದ್ದಾರೆ.

6ನೇ ಅಧಿಸೂಚನೆಯನ್ನು ಸಾರಸಗಟ ತಳ್ಳಿ ಹಾಕಿದ ನಿಲುವನ್ನು ಪುನರುಚ್ಚರಿಸಿದ ರಾಜ್ಯ ಸರಕಾರ:
ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಸಮಿತಿ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಟ್ಟಿರುವ ಪ್ರದೇಶಗಳು ಈಗಾಗಲೇ ರಕ್ಷಿತ ಪ್ರದೇಶಗಳು ಅಧಿಸೂಚಿತ ಅರಣ್ಯಗಳು ಅಥವಾ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಲ್ಪಟ್ಟು ಸರ್ಕಾರದ ರಕ್ಷಣೆ ಅಡಿಯಲ್ಲಿದ್ದು,ಈ ಪ್ರದೇಶಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುವುದು ಸಂರಕ್ಷಣೆಯ ಉದ್ದೇಶಗಳಿಗೆ ಪ್ರತಿಕೂಲವಾಗುವುದಾಗಿ ಹಾಗೂ ಜನರ ಜೀವನೋಪಾಯಕ್ಕೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ರಾಜ್ಯ ಸಚಿವ ಸಂಪುಟ ಸಭೆಗಳಲ್ಲಿ ಈ ವರದಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಹಿಂದಿನ ಕರಡು ಅಧಿಸೂಚನೆಗಳನ್ನು ಸಂಪೂರ್ಣವಾಗಿ ನಿರಾಕರಿಸಲು ನಿರ್ಣಯಿಸಲಾಗಿರುತ್ತದೆ. ರಾಜ್ಯ ಸಚಿವ ಸಂಪುಟ ಸಭೆಗಳ ನಿರ್ಣಯಗಳನ್ನು ಅನುಸರಿಸಿ ಡಾ. ಕಸ್ತೂರಿರಂಗನ್ ಸಮಿತಿಯ ವರದಿಯ ಶಿಫಾರಸುಗಳನ್ನು ನಿರಾಕರಿಸಿ ಸದರಿ ವರದಿ ಅನುಷ್ಠಾನದ ಸಂಬಂಧ ಹೊರಡಿಸಿದ ಕರಡು ಅಧಿ ಸೂಚನೆಗಳನ್ನು ತಿರಸ್ಕರಿಸುವ ರಾಜ್ಯ ಸರ್ಕಾರದ ಸ್ಪಷ್ಟ ನಿಲುವನ್ನು 30-09-2024 ರಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ ಎಂಬುದನ್ನು ಇದೇ ಸಂದರ್ಭದಲ್ಲಿ ಶಾಸಕರ ಪ್ರಶ್ನೆಗೆ ಪೂರಕವಾಗಿ ಸಚಿವರು ಸ್ಪಷ್ಟನೆಯನ್ನು ನೀಡಿರುತ್ತಾರೆ.

ಒಂದು ಬಾರಿಗೆ ಭೌತಿಕ ಸರ್ವೇಯನ್ನು ಸರಕಾರದ ಮೂಲಕ ಕೈಗೊಳ್ಳಲು ಸರಕಾರಕ್ಕೆ ಶಾಸಕರ ಆಗ್ರಹ :
ಈ ಹಿಂದಿನ 6 ಅಧಿಸೂಚನೆ ಸೇರಿದಂತೆ ಪ್ರಸ್ತುತ 7ನೇ ಅಧಿಸೂಚನೆಯೂ ಕೂಡ ವೈಮಾನಿಕ ಸಮೀಕ್ಷೆಯ ಆಧಾರದ ಮೂಲಕ ಕೈಗೊಳ್ಳಲಾಗಿದ್ದು, ಅಧಿಸೂಚನೆಯಲ್ಲಿ ಗ್ರಾಮಗಳಲ್ಲಿ ಬರಬಹುದಾದ ಪ್ರದೇಶಗಳ ಅಕ್ಷಾಂಶ ಹಾಗೂ ರೇಖಾಂಶಗಳ ವಿವರಗಳನ್ನು ನಮೂದಿಸಿದ್ದರೂ ಪ್ರಸ್ತುತ ಈ ಗಡಿ ರೇಖೆ ಯಾವ ಭಾಗದಲ್ಲಿ ಹಾದು ಹೋಗುತ್ತದೆ ಎಂಬ ಬಗ್ಗೆ ಸ್ಥಳೀಯ ಗ್ರಾಮಸ್ಥರಿಗೆ ಮಾಹಿತಿಗಳು ಇಲ್ಲದೆ ಇರುವ ಕಾರಣ ಹಾಗೂ ಈ ಬಗ್ಗೆ ನಿರಂತರವಾಗಿ ಆತಂಕವನ್ನು ತೋರ್ಪಡಿಸುತ್ತಿರುವುದರಿಂದ ಕರಡು ಅಧಿ ಸೂಚನೆಯಲ್ಲಿ ಇರುವ ಗ್ರಾಮಗಳ ಭೌತಿಕ ಸಮೀಕ್ಷೆಯನ್ನು ಒಂದು ಬಾರಿಗೆ ರಾಜ್ಯ ಸರ್ಕಾರದ ಮೂಲಕ ಕೈಗೊಂಡು ಗ್ರಾಮೀಣ ಜನರಿಗೆ ಸ್ಪಷ್ಟ ಮಾಹಿತಿಯೊಂದಿಗೆ ಅವರಲ್ಲಿರುವ ಆತಂಕ ನಿವಾರಣೆ ಮಾಡಿ ತದನಂತರ ಜನ ಜೀವನೋಪಾಯದ ಪೂರಕ ಸಂಪೂರ್ಣ ಮಾಹಿತಿಯೊಂದಿಗೆ ಕೇಂದ್ರ ಸರಕಾರದೊಂದಿಗೆ ಈ ವಿಚಾರದಲ್ಲಿ ಸಮನ್ವಯ ಸಾಧಿಸಲು ಹಾಗೂ ಹಕ್ಕು ಮಂಡಿಸಲು ಪೂರಕ ವಾತಾವರಣ ಸೃಷ್ಟಿಸಲು ಆಗುವುದರಿಂದ ಅಧಿಸೂಚಿತ ಗ್ರಾಮಗಳಲ್ಲಿ ಸರಕಾರದ ಮೂಲಕ ಒಂದು ಬಾರಿಗೆ ಭೌತಿಕ ಸರ್ವೇ ನಡೆಸಲು ಕ್ರಮ ವಹಿಸಬೇಕೆಂದು ಇದೇ ಸಂದರ್ಭದಲ್ಲಿ ಶಾಸಕರು ಸರಕಾರವನ್ನು ಆಗ್ರಹ ಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!