spot_img
Friday, August 21, 2026
spot_img

ಛಾಯಾಗ್ರಹಣ ಕ್ಷೇತ್ರದಲ್ಲಿ 50 ವರ್ಷ ಪೂರೈಸಿದ ಕೆ. ಶ್ರೀನಿವಾಸ ಶೇಟ್ ಇವರಿಗೆ ರೋಟರಿ ಕುಂದಾಪುರ ಸೌತ್ ಇವರ ವತಿಯಿಂದ ಸನ್ಮಾನ

ಕುಂದಾಪುರದ ಹಿರಿಯ ಛಾಯಾಗ್ರಾಹಕ, ‘ಸುಮಾ ಸ್ಟುಡಿಯೋ” ಮಾಲಕ ಶ್ರೀನಿವಾಸ ಶೇಟ್ ತನ್ನ ಛಾಯಾಗ್ರಹಣ ವೃತ್ತಿ ಜೀವನದ 50 ವರ್ಷ ಪೂರೈಸಿದ ಈ ಸಂದರ್ಭದಲ್ಲಿ ರೋಟರಿ ಕುಂದಾಪುರ ಸೌತ್ ಇವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.
ರೋಟರಿ ಕುಂದಾಪುರ ದಕ್ಷಿಣದ ಸದಸ್ಯರಾಗಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಅವರ ಸರಳತೆ, ಪ್ರತಿಭೆ ಹಾಗೂ ಜೀವನೋತ್ಸಾಹ, ಧಾರ್ಮಿಕ ಕೇಂದ್ರಗಳು ಹಾಗೂ ಸಂಘ ಸಂಸ್ಥೆಯೊಂದಿಗಿನ ಬಾಂಧವ್ಯ ಹಾಗೂ ಛಾಯಾಗ್ರಹಣದಲ್ಲಿ ಅವರ ಪ್ರತಿಭೆಯನ್ನು ಗಮನಿಸಿ ರೋಟರಿ ಕುಂದಾಪುರ ಸೌತ್ ಶ್ರೀನಿವಾಸ ಶೇಟ್ ಇವರನ್ನು ಸನ್ಮಾನಿದೆ.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ಜ್ಯೋತಿ ಸಾಲಿಗ್ರಾಮ ಅಸಾಡಿ ಸೊಗಸಿನ ಮಹತ್ವವನ್ನು ವಿವರಿಸಿದರು.
ರೋಟರಿ ಅಧ್ಯಕ್ಷ ಡಾ. ಆದರ್ಶ ಹೆಬ್ಬಾರ್, ಸೆಕ್ರೆಟರಿ ಮನೋಹರ ಭಟ್, ಚಿನ್ಮಯಿ ಆಸ್ಪತ್ರೆಯ ಮೆನೇಜಿಂಗ್ ಡೈರೆಕ್ಟರ್ ಡಾ. ಉಮೇಶ್ ಪುತ್ರನ್,ಕುಂದಪ್ರಭಾ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ, ರೋಟರಿ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಪತ್ನಿ ಗೀತಾ ಹಾಗೂ ಮಕ್ಕಳಾದ ಪುತ್ರ ಸನತ್, ಪುತ್ರಿ ಸಿಂಧೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!