spot_img
Tuesday, October 6, 2026
spot_img

ಅಕ್ರಮ ಸಕ್ರಮ ತಂತ್ರಾಂಶ ಸಮಸ್ಯೆ 10 ದಿವಸದೊಳಗೆ ಸರಿ ಪಡಿಸಿ ಇಲ್ಲವೇ ಪ್ರತಿಭಟನೆ ಎದುರಿಸಿ : ಶಾಸಕ ಗಂಟಿಹೊಳೆ

ಬೈಂದೂರು ತಾಲೂಕು ಕಚೇರಿಯಲ್ಲಿ ಬೈಂದೂರು ತಾಲೂಕು ವ್ಯಾಪ್ತಿಯ  ಅಕ್ರಮ ಸಕ್ರಮ ಕಡತಗಳ ಹಾಗೂ 94 ಸಿ ಹಾಗೂ 94 ಸಿಸಿ ಅರ್ಜಿಗಳ ವಿಲೇವಾರಿಯನ್ನು ಕಳೆದ ಮೂರು ವರ್ಷಗಳಿಂದ ತಾಂತ್ರಿಕ  ಸಮಸ್ಯೆಗಳ ನೆಪವೊಡ್ಡಿ ವಿನಾಕಾರಣ ವಿಳಂಬ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಆಧರಿಸಿ ಸಂಬಂಧ ಪಟ್ಟ ಅಧಿಕಾರಿಗಳ ಸಭೆ ನಡೆಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ತಾಲೂಕು ಕಚೇರಿ ವ್ಯವಸ್ಥೆ ಬಗ್ಗೆ ಜನರು ಹೈರಾಣಾಗಿದ್ದಾರೆ.ಕಳೆದ ಒಂದು ವರ್ಷದ ಅವಧಿಯಲ್ಲಿ ಸಾವಿರಾರು ಸಂಖ್ಯೆ ಯಲ್ಲಿ ಅಕ್ರಮ ಸಕ್ರಮ ಅರ್ಜಿಗಳನ್ನು ಅಧಿಕಾರಿಗಳು ರದ್ದು ಪಡಿಸಿರುವ ಬಗ್ಗೆ ಸಭೆಯಲ್ಲಿ ಕೆಂಡಾ ಮಂಡಲರಾದರು.
ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರಕಾರ ತಂತ್ರಾಂಶ ಗಳನ್ನು ಅಳವಡಿಸಿದ್ದರೂ ಸದ್ರಿ ತಂತ್ರಾಂಶ ಗಳನ್ನು ಅರ್ಥೈಸಿಕೊಳ್ಳುವುದರಲ್ಲಿ  ಅಧಿಕಾರಿಗಳ ಅಸಡ್ಡೆ ಹಾಗೂ ಗ್ರಾಮೀಣ ಭಾಗದ ಬಡ ರೈತರುಗಳ ಅಕ್ರಮ ಸಕ್ರಮ ಅರ್ಜಿಗಳು, ಆರ್ ಆರ್ ಟಿ ಅರ್ಜಿಗಳ ಬಗ್ಗೆ ಕಾಳಜಿ ತೋರಿಸದೇ ಕಳೆದ ಮೂರು ವರ್ಷಗಳಲ್ಲಿ ನೀಡಿದ ನಿರಂತರ ಸೂಚನೆಗಳ ಹೊರತಾಗಿಯೂ ಅರ್ಜಿ ವಿಲೇವಾರಿಗೆ ವಿಳಂಬ ತೋರಿಸುತ್ತಿರುವ ತಹಶೀಲ್ದಾರ್, ಸರ್ವೇ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟ ಕಚೇರಿ ವಿಷಯ ನಿರ್ವಾಹಕರುಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು ಇನ್ನು 10 ದಿವಸದ ಒಳಗೆ ತಾಂತ್ರಿಕ ಕಾರಣಗಳನ್ನು ಸರಿ ಪಡಿಸಿ ಅರ್ಹ ಎಲ್ಲರಿಗೆ ಹಕ್ಕು ಪತ್ರ ಗಳನ್ನು ವಿತರಿಸಲು ಕ್ರಮ ವಹಿಸದೇ ಇದ್ದಲ್ಲಿ ತಾಲೂಕು ಕಚೇರಿ ಎದುರುಗಡೆ ಧರಣಿ ನಡೆಸುವ ಎಚ್ಚರಿಕೆಯನ್ನು ನೀಡಿದರು.

ಸಾರ್ವಜನಿಕರ, ಜನ ಪ್ರತಿನಿಧಿಗಳ ತಾಳ್ಮೆ ಪರೀಕ್ಷಿಸುವ ದುಸ್ಸಾಹಸ ಬೇಡ ಎಂದು ಆಕ್ರೋಶ:

ಆರ್ ಆರ್ ಟಿ ಹಾಗೂ 94 ಸಿ ಹಾಗೂ 94 ಸಿ ಸಿ ಗೆ  ಸಂಬಂಧಿಸಿದ ಹಳೆಯ ಅರ್ಜಿಗಳನ್ನು ಸಹ ಹಲವು ಸಮಯದಿಂದ ಬಾಕಿ ಇಟ್ಟು ಕೊಂಡು ಕಚೇರಿಗೆ ಬರುವ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೇ ವಿನಾ ಕಾರಣ ಕಚೇರಿಯಿಂದ ಕಚೇರಿಗೆ ಓಡಾಡಿಸುತ್ತಿರುವ ಬಗ್ಗೆ ನಿರಂತರ ದೂರುಗಳು ಬರುತ್ತಿವೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಶಾಸಕರು ನನ್ನ ಹಾಗೂ ತಾಲೂಕಿನ ಸಾರ್ವಜನಿಕರ ತಾಳ್ಮೆ ಯನ್ನು  ದೌರ್ಬಲ್ಯ ಪರಿಗಣಿಸಿದರೆ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಹಾಗಾಗಿ ಹಲವು ವರ್ಷ ಹಾಗೂ ತಿಂಗಳಿನಿಂದ ತಾಲೂಕು ಕಚೇರಿಯಲ್ಲಿ  ಇರುವ ಹಳೆಯ ಅರ್ಜಿಗಳನ್ನು  ತತಕ್ಷಣ ವಿಲೇವಾರಿ ಮಾಡುವ ಮೂಲಕ ಜನರಿಗೆ ಸ್ಪಂದಿಸಲು ಸಂಬಂಧ ಪಟ್ಟ ವಿಷಯ ನಿರ್ವಾಹಕರುಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಗ್ರೇಡ್ -1 ರವಿರಾಜ್ ದೀಕ್ಷಿತ್, ತಹಸೀಲ್ದಾರ್ ಗ್ರೇಡ್ -2 ರಾಮ ಚಂದ್ರಪ್ಪ,ಉಪ ತಹಸೀಲ್ದಾರ್ ಶ್ರೀ ಮತಿ ಲತಾ ಬೈಂದೂರು ತಾಲೂಕು ಸರ್ವೇ ಸೂಪರ್ ವೈಸರ್, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!