spot_img
Tuesday, October 6, 2026
spot_img

ಅನಿಕೇತನ ಕುಂದಾಪುರ: ಕಲೆ, ಸಾಹಿತ್ಯ, ಶಿಕ್ಷಣದ ಸಹಯಾನ | ಬೆಟ್ಟ ಏರೋಣ ಪುಸ್ತಕ ಓದೋಣ-ಕಾರ್ಯಕ್ರಮ

ಕುಂದಾಪುರ: ಅನಿಕೇತನ ಕುಂದಾಪುರದ ಸಾಹಿತ್ಯಾಸಕ್ತ ಶಿಕ್ಷಕ ಬಳಗದವರು ಅ.3ರಂದು ಶಂಕರನಾರಾಯಣದ ಕುಪ್ಪಾರು ಅರೆಕಲ್ಲಿಗೆ ಚಾರಣ ಮಾಡಿ ಎತ್ತರ ಬೆಟ್ಟದ ಸುತ್ತಲೂ ಹಾಸಿರುವ ಹಸಿರಿನ ಪ್ರಕೃತಿಯ ಮಡಿಲಿನಲ್ಲಿ ಎತ್ತರದ ಬಂಡೆಯನ್ನೆ ವೇದಿಕೆಯಾಗಿಸಿಕೊಂಡು 2026ರ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದು ಶಿಖರದೆತ್ತರದ ಸಾಧನೆಯನ್ನು ಮಾಡಿದ ಅಶೋಕ ತೆಕ್ಕಟ್ಟೆಯವರಿಗೆ ಎತ್ತರದ ಬೆಟ್ಟದರೆಕಲ್ಲಿನ ಮೇಲೆ ವಿಶಿಷ್ಟ ರೀತಿಯಲ್ಲಿ ಸನ್ಮಾನ ಮಾಡಲಾಯಿತು.

ಮಕ್ಕಳಲ್ಲಿ ಮತ್ತು ಶಿಕ್ಷಕರ ಬಳಗದಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಜಂಗಮ (ಸಂಚಾರಿ) ಗ್ರಂಥಾಲಯವನ್ನು ಸಾಹಿತಿ ಪಾರ್ವತಿ ಜಿ ಐತಾಳರವರು ನೆರದವರಿಗೆ ಓದಲು ಪುಸ್ತಕ ನೀಡುವುದರೊಂದಿಗೆ ಉದ್ಘಾಟಿಸಿದರು.

ಮಕ್ಕಳು ಮತ್ತು ಅನಿಕೇತನ ಸದಸ್ಯರು ಬೆಟ್ಟದ ಮೇಲೆ ಪುಸ್ತಕವನ್ನು ಓದಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸಾಹಿತಿಗಳಾದ ಪೂರ್ಣಿಮಾ ಭಟ್ ಕಮಲಶಿಲೆ, ಕನ್ನಡ ಶಿಕ್ಷಕರಾದ ಕೃಷ್ಣ ಡಿ ಎಸ್. ರಂಗಕರ್ಮಿ ಗಣೇಶ ಶೆಟ್ಟಿ ಶಾನ್ಕಟ್ಟು ಮತ್ತು ಅನಿಕೇತನದ ಸದಸ್ಯರಾದ ರಾಘವೇಂದ್ರ ಎಚ್. ವಿಜಯ ಶೆಟ್ಟಿ ಮತ್ತು ಆನಂದ ಕುಲಾಲ ಕಾರ್ಯಕ್ರಮವನ್ನು ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!