spot_img
Monday, October 5, 2026
spot_img

ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕ : ಡಾ. ಜಿ. ಶಂಕರ್ ರವರ 71ನೇ ಹುಟ್ಟು ಹಬ್ಬ ಆಚರಣೆ

ಹೆಮ್ಮಾಡಿ: ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಡಾ. ಜಿ. ಶಂಕರ್ ರವರ 71ನೇ ಹುಟ್ಟು ಹಬ್ಬವನ್ನು ಮೊಗವೀರ ಯುವ ಘಟನೆ (ರಿ.), ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ತಲ್ಲೂರಿನ ಜಯರಾಣಿ ಕಾನ್ವೆಂಟ್ ವೃದ್ಧಾಶ್ರಮದಲ್ಲಿ ಆಕ್ಟೋಬರ್ 5 ರಂದು ಆಚರಿಸಲಾಯಿತು.

ಕೇಕ್ ಕತ್ತರಿಸಿ,ಸಿಹಿ ಹಂಚುವುದರ ಜೊತೆಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು. ವೃದ್ಧಾಶ್ರಮದ ಸಂಯೋಜಕರಾದ ಸಿಸ್ಟರ್ ಕೊಲೇಟ್ ರವರು ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಅಧ್ಯಕ್ಷ ಪ್ರವೀಣ್ ಮೊಗವೀರ ಗಂಗೊಳ್ಳಿ, ಮೊಗವೀರ ಮಹಾಜನ ಸೇವಾ ಸಂಘ (ರಿ.) ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಇದರ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ, ಕಾರ್ಯದರ್ಶಿ ಪ್ರಭಾಕರ ಸೇನಾಪುರ, ಹೆಮ್ಮಾಡಿ ಘಟಕದ ಗೌರವಾಧ್ಯಕ್ಷ ದಿನೇಶ್ ಕಾಂಚನ್ ಬಾಳಿಕೆರೆ, ಮಾಜಿ ಅಧ್ಯಕ್ಷ ಲೋಹಿತಾಶ್ವ ಆರ್.ಕುಂದರ್, ಕಾರ್ಯದರ್ಶಿ ಜಯಂತ್ ಕುಂದರ್, ಮೊಗವೀರ ಸ್ತ್ರೀಶಕ್ತಿ ಬಗ್ವಾಡಿ ಹೋಬಳಿ ಇದರ ಅಧ್ಯಕ್ಷರಾದ ಶ್ರೀಮತಿ ಬೇಬಿ. ಜಿ. ನೈಕ್, ಹೆಮ್ಮಾಡಿ ಘಟಕದ ಸಲಹೆಗಾರರಾದ ಗೋಪಾಲ್ ಚಂದನ್,, ಉಪಾಧ್ಯಕ್ಷರಾದ ಶ್ರೀಮತಿ ಶಾಮಲಾ ಜಿ.ಚಂದನ್, ಜಿಲ್ಲಾ ಸಮಿತಿ ಸದಸ್ಯರಾದ ಚಂದ್ರಶೇಖರ ಪಡುಕೋಣೆ ಜನಾರ್ಧನ ತೊಪ್ಲು, ಜೊತೆ ಕಾರ್ಯದರ್ಶಿ ಮಹೇಶ್ ನೆಂಪು ಹಾಗೂ ಸತೀಶ್ ಮೊಗವೀರ ಗಂಗೊಳ್ಳಿ ಉಪಸ್ಥಿತರಿದ್ದರು.
ಹಾಗೆಯೇ ತೊಪ್ಲುವಿನ ಎರಡು ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!