ಕುಂದಾಪುರ: ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಪ್ರಸಿದ್ಧ ಚರ್ಮ ಹಾಗೂ ಸೌಂದರ್ಯವರ್ಧಕ ಚಿಕಿತ್ಸಾ ತಜ್ಞ ರೋ. ಡಾ. ಉಮೇಶ್ ಪುತ್ರನ್ ಇವರು ರೋಟರಿ ವಲಯ 1 ರ ಅಸಿಸ್ಟೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದಾರೆ. ರೋಟರಿ ಜಿಲ್ಲೆ 3182ರ 2022-23 ಸಾಲಿನ ಜಿಲ್ಲಾ ಗವರ್ನರ್ ಮಣಿಪಾಲ ಸೋನಿಯಾ ಕ್ಲಿನಿಕ್‌ನ ಡಾ. ಜಯಗೌರಿ ಇವರನ್ನು ನೇಮಿಸಿದ್ದಾರೆ.
ವಲಯ 1 ರಲ್ಲಿ ಕುಂದಾಪುರ, ಕುಂದಾಪುರ ದಕ್ಷಿಣ, ಕುಂದಾಪುರ ಮಿಡ್ ಟೌನ್, ಕುಂದಾಪುರ ಸನ್ ರೈಸ್, ಕುಂದಾಪುರ ರಿವರ್ ಸೈಡ್, ಬೈಂದೂರು, ಗಂಗೊಳ್ಳಿ ಹಾಗೂ ಸಿದ್ದಾಪುರ- ಹೊಸಂಗಡಿ ರೋಟರಿ ಸಂಸ್ಥೆಗಳು ಒಳಗೊಂಡಿದೆ.
ಡಾ. ಉಮೇಶ್ ಪುತ್ರನ್ ಇವರು ರೋಟರಿಯಲ್ಲಿ 28 ವರ್ಷಗಳ ಸೇವಾ ಅನುಭವ ಉಳ್ಳವರಾಗಿದ್ದು, ಕುಂದಾಪುರ ದಕ್ಷಿಣ ರೋಟರಿಯ ಸದಸ್ಯರಾಗಿರುತ್ತಾರೆ. ಇವರು ರೋಟರಿ ಜಿಲ್ಲಾ ಮಟ್ಟದಲ್ಲಿ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಇವರು ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಶಾಖೆಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾಗಿದ್ದಾರೆ. ಆಳ್ವಾಸ್ ನುಡಿಸಿರಿ ಕುಂದಾಪುರ ಘಟಕದ ಅಧ್ಯಕ್ಷರಾಗಿ, ಹಲವು ವರ್ಷಗಳಿಂದ ಕುಂದಾಪುರದ ಪರಿಸರದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ. ಇವರು ಪ್ರಸ್ತುತ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.