Saturday, April 20, 2024

ಶುಲ್ಕ ವಸೂಲಿಗೆ ಅವಕಾಶ


-ಸುಬ್ರಹ್ಮಣ್ಯ ಪಡುಕೋಣೆ (ಸಂಪಾದಕ)

ಕರೊನಾ ಬಂದ ಮೇಲೆ ಶೈಕ್ಷಣಿಕ ವಲಯ ತತ್ತರಿಸಿ ಹೋಗಿದೆ. ಶಾಲೆಗಳು, ಶಾಲಾ ಆಡಳಿತ ಮಂಡಳಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳು ಗೊಂದಲದಲ್ಲಿ ಇದ್ದಾರೆ. ಆಳುವ ವ್ಯವಸ್ಥೆ ದಿಕ್ಕು ತೋಚದೆ ಕಂಗಲಾಗಿದೆ. ಈ ತನ್ಮಧ್ಯದಲ್ಲಿ ಹಣ ಪಡೆಯುವುದರ ಬಗ್ಗೆ ಖಾಸಗಿ ಶಾಲೆಗಳು ಕಾರಣವನ್ನು ಹುಡುಕುತ್ತಲೆ ಇದೆ. ಬಹುತೇಕ ಖಾಸಗಿ ಶಾಲೆಗಳು ಶಿಕ್ಷಕರಿಗೆ ಸಂಬಳವನ್ನು ಕೊಡದೆ ವಿದ್ಯಾರ್ಥಿಗಳಿಂದ ಶುಲ್ಕ ಪಡೆದಿರುವುದು ಸರಕಾರದ ಗಮನಕ್ಕೂ ಹೋಗಿದೆ. ವಿದ್ಯಾರ್ಥಿಗಳನ್ನು ಹೆದರಿಸಿ ಬೆದರಿಸಿ ಶುಲ್ಕ ವಸೂಲಿ ಮಾಡಿದ ಆರೋಪಗಳು ಬರುತ್ತಿದೆ. ಆದರೆ ಸರಕಾರ ಇದರ ಬಗ್ಗೆ ಗಮನವನ್ನೇ ನೀಡಲಿಲ್ಲ. ಮಾತೆತ್ತಿದರೆ ಎಚ್ಚರಿಕೆ ಎಂದು ಹೇಳಿ ಸುಮ್ಮನಾಗಿ ಬಿಡುತ್ತಾರೆ. ಇದರಿಂದ ಯಾವುದೇ ಹೆದರಿಕೆ ಇಲ್ಲದೆ ಖಾಸಗಿ ಶಾಲೆಗಳು ತಮ್ಮ ಚಾಳಿಯನ್ನು ಮುಂದುವರಿಸುತ್ತಿವೆ. ಹಳೆಯ ಬಾಕಿ ಸೇರಿಸಿಕೊಂಡು ಶುಲ್ಕ ವಸೂಲಿಗೆ ಮುಂದಾಗಿದೆ. ಇದರಲ್ಲಿ ಕೆಲವು ಪ್ರಾಮಾಣಿಕ ಖಾಸಗಿ ಶಾಲೆಗಳು ಇರುವುದನ್ನು ನೋಡ ಬಹುದಾಗಿದೆ. ಖಾಸಗಿ ಶಾಲೆಗಳು ಇಂದು ಬಹುತೇಕ ರಾಜಕಾರಣಿಗಳ ಕೈಯಲ್ಲಿದೆ. ಅವರದು ಅದೊಂದು ಪ್ರಮುಖ ಉದ್ಯಮವೂ ಆಗಿದೆ. ಅದಕ್ಕಾಗಿ ಸರಕಾರಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆಳುವ ವರ್ಗಗಳ ರಾಜಕಾರಣಿಗಳೆ ಅದರಲ್ಲಿ ಬಹುಪಾಲನ್ನು ಹೊಂದಿದ್ದಾರೆ. ಹಾಗಾಗಿ ಖಾಸಗಿ ಶಾಲಾ ಆಡಳಿತ ಮಂಡಳಿ ಹೇಳಿದ ಹಾಗೆ ಸರಕಾರ ಕೇಳ ಬೇಕಾದ ಪರಿಸ್ಥಿತಿ ಇದೆ. ಇದರ ಪರಿಣಾಮವೇ ಸರಕಾರ ಪರೀಕ್ಷೆ ಮಾಡುವ ನಿರ್ಧಾರಕ್ಕೆ ಬಂದು ತಲುಪಿದ್ದು. ಸರಕಾರ ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ಹಿಂದಿನ ರ್ಷಗಳ ಅಂಕಗಳನ್ನು ತೆಗೆದುಕೊಂಡು ಫಲಿತಾಂಶ ಪ್ರಕಟಿಸಲಿದೆ. ಅದರಂತೆ ಎಸ್ ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸ ಬಹುದಿತ್ತು. ಆದರೆ ಸರಕಾರ ಅದನ್ನು ಮಾಡಲಿಲ್ಲ. ಯಾಕೆಂದರೆ ಖಾಸಗಿ ಶಾಲೆಗಳು ಆದಾಯ ತರುವಂತದ್ದು ಎಸ್.ಎಸ್.ಎಲ್.ಸಿ ವರೆಗೆ ಮಾತ್ರ. ಈ ಹಂತದಲ್ಲಿ ಶುಲ್ಕವನ್ನು ಆಕರ್ಷಕವಾಗಿ ತೆಗೆದುಕೊಳ್ಳಬಹುದು. ಮತ್ತು ಈ ಅಂಕಗಳ ಆಧಾರದ ಮೇಲೆ ಮುಂದಿನ ವಿದ್ಯಾಭ್ಯಾಸದ ಹಂತ ನಿರ್ಧಾರವಾಗುವುದು. ಕೊರೊನಾ ಸಂದರ್ಭದಲ್ಲಿನ ಎರಡು ವರ್ಷಗಳ ಶುಲ್ಕವೂ ಕೂಡ ಈ ಸಂದರ್ಭದಲ್ಲಿ ಪಡೆದುಕೊಳ್ಳಲು ಅವಕಾಶವಿದೆ. ಇದರಿಂದ ಖಾಸಗಿ ಶಾಲೆಗಳಿಗೆ ಬರಬೇಕಾದ ಬಾಕಿ ವಸೂಲಿ ಬಂದ ಹಗೆ ಆಗುತ್ತದೆ. ಬಾಕಿ ಕೊಡದಿದ್ದರೆ ಪರೀಕ್ಷೆಗೆ ಕೂರಲು ಬಿಡುವುದುಲ್ಲ ಎಂಬ ಬೆದರಿಕೆ ಖಾಸಗಿ ಶಾಲೆಗಳಿಂದ ಬರುತ್ತದೆ, ಹೀಗಾಗಿ ಪೋಷಕರು ಉಪಾಯವಿಲ್ಲದೆ ಶುಲ್ಕವನ್ನು ಪಾವತಿಸಿ ಬಿಡುತ್ತಾರೆ. ಸರಕಾರವೇ ಪರೀಕ್ಷೆಯನ್ನು ನೆಡೆಸಿ ಖಾಸಗಿ ಶಾಲೆಗಳಿಗೆ ಅನುಕೂಲವನ್ನು, ಅವಕಾಶವನ್ನು ಮಾಡಿಕೊಟ್ಟಿದೆ. ಈಗಾಗಲೇ ಪರೀಕ್ಷೆಯ ಸಿದ್ದತೆಯನ್ನು ಸರಕಾರ ಆರಂಭಿಸಿದೆ. ಆದರೆ ಕೇಂದ್ರ ಸರಕಾರ ಪರೀಕ್ಷೆಯನ್ನು ರದ್ದುಗೊಳಿಸಿದೆ. ರಾಜ್ಯ ಸರಕಾರವೂ ಕೂಡ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ಅದರೆ ಹತ್ತನೆಯ ತರಗತಿ ಪರೀಕ್ಷೆ ಮಾಡಲು ಹೊರಟಿರುವುದು ಟೀಕೆಗೆ ಕಾರಣವಾಗಿದೆ ಮತ್ತು ಖಾಸಗಿ ಶಾಲೆಗಳ ಒತ್ತಡ ಎಂಬುದನ್ನು ಸಾಬೀತು ಪಡಿಸಿದೆ. ಇನ್ನು ಪರೀಕ್ಷೆ ನೆಡೆಸುವ ಸರಕಾರ ಯಾರನ್ನು ಅನುತ್ತೀರ್ಣಗೊಳಿಸುವುದಿಲ್ಲ ಎಂದು ಹೇಳಿದೆ. ಹಾಗಾದರೆ ಪರೀಕ್ಷೆ ಏಕೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಇದೆಲ್ಲವೂ ಕೂಡ ಖಾಸಗಿ ಶಾಲೆಗಳು ಅನುಕೂಲಕ್ಕಾಗಿ ಎಂಬ ಮಾತು ಸ್ಪಷ್ಟವಾಗಿ ಕೇಳಿ ಬರುತ್ತಿದೆ. ಈಗಾಗಲೇ ಜನ ಕೊರೊನಾ ಸಂಕಷ್ಟದಲ್ಲಿದ್ದಾರೆ. ಕನಿಷ್ಟ ಆದಾಯಕ್ಕೂ ಪರಿತಪಿಸ ಬೇಕಾಗಿದೆ. ಸರಕಾರ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಹಿತವನ್ನು ಕಾಪಾಡ ಬೇಕಾಗಿದೆ. ಪರೀಕ್ಷೆ ಕೇವಲ ಕಾಟಾಚಾರಕ್ಕೆ ನೆಡೆಯುತ್ತಿದೆ ಎಂಬ ಮಾತು ಎಲ್ಲ ಕಡೆ ಕೇಳಿ ಬರುತ್ತಿದೆ. ಆದರೆ ಇದರಿಂದ ಖಾಸಗಿ ಶಾಲೆಗಳಿಗೆ ಎಲ್ಲಾ ರೀತಿಯ ಅನುಕೂಲವಾಗಲಿದೆ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!