spot_img
Saturday, May 9, 2026
spot_img

ಶಿಸ್ತು ಮತ್ತು ಯಕ್ಷ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಪೂರಕ -ಪ್ರಕಾಶ ಕಾರಂತ್

ಕೋಟ: ಮಕ್ಕಳಿಗೆ ನೀಡುವ ಯಕ್ಷಗಾನ ಮತ್ತು ಶಿಸ್ತಿನ ತರಬೇತಿ ಅವರ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿರುತ್ತದೆ. ಯಕ್ಷಗಾನ ಕ್ಷೇತ್ರದ ಹೆಸರಾಂತ ಕಲಾಕೇಂದ್ರವಾದ ಯಕ್ಷಗಾನ ಕಲಾಕೇಂದ್ರ ಮತ್ತು ಪಾಚಾರ್ಯ ಸದಾನಂದ ಐತಾಳರಂತ ಗುರುಗಳಿಂದ ತರಬೇತಿ ಪಡೆದಿರುವ ಈ ಶಿಬಿರದ ಮಕ್ಕಳು ಖಂಡಿತಾ ಬದಲಾವಣೆಯನ್ನು ಕಂಡಿರುತ್ತಾರೆ. ಶಿಬಿರದಲ್ಲಿ ಮಕ್ಕಳಲ್ಲಿ ಅಡಗಿರುವ ಕೌಶಲ್ಯವನ್ನು ರೂಪಿಸಿ ಹೊರತಂದಿದ್ದೀರಿ. ಅವರಿಗೆ ಜೀವನದ ಪಾಠವೂ ನೀಡಲಾಗಿದೆ ಎಂದು ತಿಳಿಯಬಹುದು ಎಂದು ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಪ್ರಕಾಶ ಕಾರಂತರು ಅಭಿಪ್ರಾಯಪಟ್ಟರು.

ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ.ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಕಲಾಕೇಂದ್ರದ ಶಿಕ್ಷಣ ಸೇವೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಸಾಲಿಗ್ರಾಮದ ಉದ್ಯಮಿಗಳೂ ಕಲಾಪೋಷಕರು ಆದ ಚಂದ್ರಶೇಖರ ಕಾರಂತರು, ಕಲಾಕೇಂದ್ರದ ಆರ್ಥಿಕ ಸಮಿತಿಯ ಅಧ್ಯಕ್ಷರಾದ ಅನಂತಪದ್ಮನಾಭ ಐತಾಳರು, ಪ್ರಾಚಾರ್ಯ ಸದಾನಂದ ಐತಾಳರು ಉಪಸ್ಥಿತರಿದ್ದರು.

ಶ್ರೀ ಗುರುನರಸಿಂಹ ದೇವಸ್ಥಾನದ ನೂತನ ಅಧ್ಯಕ್ಷರಾದ ಪ್ರಕಾಶ ಕಾರಂತ ಮತ್ತು ಟ್ರಸ್ಟಿಗಳಾದ ಕಾರ್ಕಡ ತಾರನಾಥ ಹೊಳ್ಳರನ್ನು ಅಭಿನಂದಿಸಲಾಯಿತು. ಅಲ್ಲದೇ ಶಿಬಿರದ ಪ್ರಾಚಾರ್ಯರನ್ನು ಮತ್ತು ಸಹ ಗುರುಗಳನ್ನು ಸಮ್ಮಾನಿಸಲಾಯಿತು. ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸ್ವಾಗತಿಸಿದರು. ವಿದ್ಯಾರ್ಥಿಗಳಿಗೆ ಕಲಿಕಾ ದೃಢಪತ್ರವನ್ನು ನೀಡಲಾಯಿತು. ನರಸಿಂಹ ತುಂಗ ಕಾರ್ಯಕ್ರಮ ಸಂಯೋಜಿಸಿದರು. ಸೀತಾರಾಮ ಸೋಮಯಾಜಿಯವರು ಕೃತಜ್ಞತೆ ಸಲ್ಲಿಸಿದರು. ಸಭಾಕಾರ್ಯಕ್ರಮದ ಪೂರ್ವದಲ್ಲಿ ಮತ್ತು ನಂತರ ಮಕ್ಕಳ ಕಲಿಕಾ ಪ್ರದರ್ಶನ ಏರ್ಪಡಿಸಲಾಗಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!