spot_img
Wednesday, May 6, 2026
spot_img

ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ: ಗೋಪಾಲಕೃಷ್ಣ ನಾಯರಿ ರಂಗಪ್ರಶಸ್ತಿ ಪ್ರದಾನ

kundapura: ಅವಕಾಶಗಳು ಯಾರನ್ನೂ ಹುಡುಕಿ ಬರುವುದಿಲ್ಲ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಮಾತ್ರ ಸಾಧನೆ ಸಾಧ್ಯ ಎಂದು ಮುಖಂಡ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

.
ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆಯ ಸದಾನಂದ ರಂಗಮಂಟಪದಲ್ಲಿ ಬೆಂಗಳೂರಿನ ಸಮಸ್ತ ರಂಗ ಸಂಶೋಧನಾ ಕೇಂದ್ರದ ವತಿಯಿಂದ ನಡೆದ ಗೋಪಾಲಕೃಷ್ಣ ನಾಯರಿ ಅವರ ಸಂಸ್ಮರಣೆ ಮತ್ತು ರಂಗಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗೋಪಾಲಕೃಷ್ಣ ನಾಯರಿ ಅವರಂತಹ ಕಲಾವಿದರಿಗೆ ಯಾರೂ ಅವಕಾಶವನ್ನು ಸೃಷ್ಟಿಸಿಕೊಟ್ಟಿಲ್ಲ. ಸ್ವತಃ ಅವಕಾಶವನ್ನು ಮಾಡಿಕೊಂಡು ಮೇಲೆ ಬಂದವರು. ನಾನು ಕೂಡ ಕಲಾವಿದ ಬದುಕಿನ ಬಗ್ಗೆ ಅವರೊಂದಿಗೆ ಬಹಳಷ್ಟು ಚರ್ಚೆ ಮಾಡಿದ್ದೇನೆ ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಲಾವಿದ ಎಂ.ಎಸ್.ಭಟ್, ನಾವು ಹವ್ಯಾಸಿ ಕಲಾವಿದರು. ನಮಗೆ ನಾಟಕ ಎನ್ನುವುದು ಒಂದು ಚಟ. ನಾಟಕ ಆರ್ಥಿಕವಾಗಿ ಏನು ಲಾಭವಿಲ್ಲದಿದ್ದರೂ ಮಾನಸಿಕವಾಗಿ ನೆಮ್ಮದಿ ಕೊಡುತ್ತದೆ. ಅಭಿಮಾನಿಗಳ ಪ್ರೀತಿ ಮತ್ತು ನೂರಾರು ಜನರ ಗೆಳೆತನ ಕೊಡುತ್ತದೆ. ಇದಕ್ಕಿಂತ ದೊಡ್ಡ ಸಂಬಳ ಇನ್ಯಾವುದೂ ಇಲ್ಲ ಎಂದರು.

ಸಂಸ್ಮರಣಾ ಮಾತನ್ನಾಡಿದ ರಸರಂಗ ಕೋಟದ ಸುಧಾ ಮಣೂರು ಗೋಪಾಲಕೃಷ್ಣ ನಾಯರಿ ಅವರೊಂದಿಗಿನ ಒಡನಾಟವನ್ನ ಸ್ಮರಿಸಿದರು. ಗಣೇಶ್ ರಾವ್ ಎಲ್ಲೂರು ಅಭಿನಂದನಾ ನುಡಿಗಳನ್ನಾಡಿದರು. ಗೋಪಾಲಕೃಷ್ಣ ನಾಯರಿ ಅವರ ಹಿರಿಯ ಸಹೋದರ ಕೆ. ರಾಧಾಕೃಷ್ಣ ನಾಯರಿ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಸಹಾಯಕ ಮಹಾ ಪ್ರಬಂಧಕ ಸೋಮಶೇಖರ ನಾಯರಿ ಉಪಸ್ಥಿತರಿದ್ದರು.

ಡಾ.ಕೀರ್ತಿರಾಜ್ ಸ್ವಾಗತಿಸಿದರು. ರಾಜಶೇಖರ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಪೂರ್ವದಲ್ಲಿ ನೃತ್ಯ ವೈವಿಧ್ಯ ನಂತರ ಹಿರಿಯ ಕಲಾವಿದರಿಂದ ಭೀಷ್ಮ ಪ್ರತಿಜ್ಞೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!