spot_img
Friday, September 18, 2026
spot_img

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಕುಂದಾಪುರ ಶಾಖೆ: ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ

ಕುಂದಾಪುರ: ಸಮಾಜದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡಾ ಉತ್ತಮ ಶಿಕ್ಷಣವನ್ನು ಪಡೆದು ಸ್ವಾವಲಂಬನೆಯಿಂದ ಜೀವನ ನಡೆಸುವಂತಾಗಬೇಕು. ಅವಕಾಶಗಳ ಸದ್ಭಳಕೆ ಮಾಡಿಕೊಂಡು ಸಾಧನೆಯ ಪಥದಲ್ಲಿ ಮುನ್ನಡೆಯಬೇಕು. ಮೊಗವೀರ ಸಂಘಟನೆಗಳು ಕೂಡಾ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿವೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಹೇಳಿದರು.

ಅವರು ಮೊಗವೀರ ಮಹಾಜನ ಸೇವಾ ಸಂಘ ರಿ., ಬಗ್ವಾಡಿ ಹೋಬಳಿ ಮುಂಬಯಿ, ಕುಂದಾಪುರ ಶಾಖೆ ಇವರ ನೇತೃತ್ವದಲ್ಲಿ ಕುಂದಾಪುರ ಮೊಗವೀರ ಭವನದಲ್ಲಿ ಆ.2ರಂದು ನಡೆದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊಗವೀರ ಮಹಾಜನ ಸೇವಾ ಸಂಘ ರಿ., ಮುಂಬಯಿ ಇದರ ಕೇಂದ್ರ ಸಮಿತಿ ಅಧ್ಯಕ್ಷರಾದ ಸಂತೋಷ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು.
ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿ ಇದರ ಗೌರವಾಧ್ಯಕ್ಷರಾದ ಸುರೇಶ ಆರ್.ಕಾಂಚನ್ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು.

ಶೈಕ್ಷಣಿಕ ಹಾಗೂ ಆರೋಗ್ಯ ನಿಧಿ ಸ್ಥಾಪನೆಗೆ ಚಿಂತನೆ
ಈಗಾಗಲೇ ಬಗ್ವಾಡಿಯಲ್ಲಿ ಅನ್ನದಾಸೋಹ ನಿದಿ ಸ್ಥಾಪಿಸಲಾಗಿದ್ದು ಪ್ರತೀ ಶುಕ್ರವಾರ ಅನ್ನದಾಸೋಹ ನಡೆಯುತ್ತಿದೆ. ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕೂಡಾ ಅಷ್ಟೇ ಮುಖ್ಯವಾಗಿದೆ. ಆ ಹಿನ್ನೆಲೆಯಲ್ಲಿ ಮಹಿಷಾಸುರಮರ್ದಿನಿ ಶೈಕ್ಷಣಿಕ ಮತ್ತು ಆರೋಗ್ಯ ನಿಧಿ ಸ್ಥಾಪನೆ ನಡೆಸಲಾಗಿದ್ದು, ಭವಿಷ್ಯದ ಹಿತಾದೃಷ್ಟಿಯಿಂದ ಸ್ಥಾಪಿಸಲು ಉದ್ದೇಶಿಸಿರುವ ಈ ಮಹತ್ಕಾರ್ಯಕ್ಕೆ ಸಮಾಜಬಾಂಧವರು, ಶಿಕ್ಷಣಾಭಿಮಾನಿಗಳ ಸಂಪೂರ್ಣ ಸಹಕಾರ ಅಗತ್ಯವಾಗಿದೆ ಎಂದು ಮೊಗವೀರ ಮಹಾಜನ ಸೇವಾ ಸಂಘ ಉಪ ಸಮಿತಿ ಕುಂದಾಪುರ ಶಾಖೆ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ ಕರೆ ನೀಡಿದರು.

ಗೀತಾನಂದ ಫೌಂಡೇಶನ್ ಕೋಟ ಇದರ ಪ್ರವರ್ತಕರಾದ ಆನಂದ್ ಸಿ.ಕುಂದರ್, ದ.ಕ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್,  ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಮಹಾಬಲ ಕುಂದರ್, ಎನ್.ಡಿ ಚಂದನ್, ಪ್ರಧಾನ ಕಾರ್ಯದರ್ಶಿ ಗಣೇಶ ಮೆಂಡನ್, ಶಾಖಾ ಸಮಿತಿ ಮಾಜಿ ಅಧ್ಯಕ್ಷರಾದ ಕೆ.ಕೆ ಕಾಂಚನ್, ಎಂ.ಎಂ ಸುವರ್ಣ, ಕಾರ್ಯದರ್ಶಿ ಪ್ರಭಾಕರ ಸೇನಾಪುರ, ಡಾ.ಅಶೋಕ, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರವೀಶ್ ಕೊರವಡಿ, ಜನತಾ ಸಮೂಹ ಶಿಕ್ಷಣ ಸಂಸ್ಥೆ ಹೆಮ್ಮಾಡಿ ಇದರ ಅಧ್ಯಕ್ಷರಾದ ಗಣೇಶ ಮೊಗವೀರ, ಮೊಗವೀರ ಸ್ತ್ರೀಶಕ್ತಿ ಅಧ್ಯಕ್ಷರಾದ ಬೇಬಿ ಜಿ.ನಾಯ್ಕ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮೊಗವೀರ ಭವನದಲ್ಲಿ ಮಹಿಷಾಸುರಮರ್ದಿನಿ ಸಭಾಂಗಣದ ದ್ವಾರಮಂಟಪ ಉದ್ಘಾಟಿಸಲಾಯಿತು.

ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜು ಉಪನ್ಯಾಸಕ ಉದಯ ನಾಯ್ಕ್ ಶೈಕ್ಷಣಿಕ ಮಾಹಿತಿ ನೀಡಿದರು. 19 ವಯೋಮಾನದ ಭಾರತ ಪುಟ್ಬಾಲ್ ತಂಡಕ್ಕೆ ಆಯ್ಕೆಯಾಗಿ ನೇಪಾಳದಲ್ಲಿ ನಡೆದ ಇಂಟರ್ ನ್ಯಾಷನಲ್ ಪುಟ್ಬಾಲ್ ಪಂದ್ಯದಲ್ಲಿ ಭಾರತದ ಪರವಾಗಿ ಆಡಿದ ಕುಂದಾಪುರ ಶ್ರೀ ವೆಂಕಟರಮಣ ಪಿಯು ಕಾಲೇಜು ವಿದ್ಯಾರ್ಥಿ ಹರ್ಷಿತ್ ಬಿ. ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಾದ ಪ್ರಾರ್ಥನ ಜಿ.ಕುಂಭಾಶಿ, ಸಿಂಚನಾ ಬಾಳಿಕೆರೆ, ಕ್ಷಿಪಾಲಿ ಕುಂದಾಪುರ, ತನ್ವಿತಾ ಮರವಂತೆ ಅವರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.

ಸದಾನಂದ ಬಳ್ಕೂರು ಸ್ವಾಗತಿಸಿದರು. ಉದಯ ಕುಮಾರ್ ಹಟ್ಟಿಯಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಭಾಕರ ಸೇನಾಪುರ ವಂದಿಸಿದರು. ಲೋಹಿತಾಶ್ವ ಆರ್.ಕುಂದರ್ ಮತ್ತು ಸುರೇಶ ವಿಠಲವಾಡಿ ಕಾರ್ಯಕ್ರಮ ನಿರ್ವಹಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!