spot_img
Thursday, March 26, 2026
spot_img

ವಂಡ್ಸೆ: ಶ್ರೀ ಬ್ರಹ್ಮಶ್ರೀ ಸೌಹಾರ್ದ ಸಹಕಾರಿ ನಿ., ಉದ್ಘಾಟನೆ


ಕುಂದಾಪುರ, ಜು.16: ವಂಡ್ಸೆಯ ವಾತ್ಸಲ್ಯ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಶ್ರೀ ಬ್ರಹ್ಮಶ್ರೀ ಸೌಹಾರ್ದ ಸಹಕಾರಿ ನಿಯಮಿತ ವಂಡ್ಸೆ ಶುಕ್ರವಾರ ಶುಭಾರಂಭಗೊಂಡಿತು. ಜ್ಯೋತಿಷ್ಯ ವಿದ್ವಾನ್ ವೇ.ಮೂ.ರಾಮಕೃಷ್ಣ ಭಟ್ ಶಾರ್ಕೆ ನೂತನ ಸಹಕಾರ ಸಂಘವನ್ನು ಉದ್ಘಾಟಿಸಿದರು. ಶ್ರೀ ಬ್ರಹ್ಮಶ್ರೀ ಸೌಹಾರ್ದ ಸಹಕಾರಿ ನಿ., ಇದರ ಅಧ್ಯಕ್ಷ ಕೆ.ಬಸವರಾಜ್ ರಾಯಪ್ನಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತ ಧರ್ಮದರ್ಶಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಇ-ಬ್ಯಾಂಕ್ ಸಾಪ್ಟ್‌ವೇರ್‌ಗೆ ಚಾಲನೆ ನೀಡಿದರು. ವಾತ್ಸಲ್ಯ ಕಾಂಪ್ಲೆಕ್ಸ್ ಮಾಲಕ ಆನಂದ ಶೆಟ್ಟಿ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಭದ್ರತಾ ಕೋಶವನ್ನು ನ್ಯಾಯವಾದಿ ಉಮೇಶ್ ಶೆಟ್ಟಿ ಶಾನ್ಕಟ್ಟು ಉದ್ಘಾಟಿಸಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ಮುಂಬಯಿ ಉದ್ಯಮಿ ಚಂದ್ರಶೇಖರ ಹೆರಿಯಣ್ಣ ನಾಯ್ಕ್, ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಿ.ಸುಧೀರ್ ಕುಮಾರ್ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ಆಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಂಜಯ್ಯ ಶೆಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಕಲ್ಮಡಿ, ರೋಯಲ್ ಕಾಂಪ್ಲೆಕ್ಸ್ ಮಾಲಕ ಮಹಮ್ಮದ್ ಇಕ್ಬಾಲ್, ಹಿಜಾಣ ಶ್ರೀ ಚಿಕ್ಕು ಯುವ ಸಂಘಟನೆ ಅಧ್ಯಕ್ಷ ಜಯರಾಮ ಶೆಟ್ಟಿ, ಗ್ರಾ.ಪಂ. ಸದಸ್ಯ ಪ್ರಶಾಂತ್ ಪೂಜಾರಿ ವಂಡ್ಸೆ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಶ್ರೀ ಬ್ರಹ್ಮಶ್ರೀ ಸೌಹಾರ್ದ ಸಹಕಾರಿ ನಿ ವಂಡ್ಸೆ ಇದರ ಪ್ರವರ್ತಕರಾದ ವೆಂಕಟೇಶ ಸಿ.ಶೆಟ್ಟಿ ಹರವರಿ, ಚಂದ್ರಶೇಖರ ಶೆಟ್ಟಿ, ರವೀಂದ್ರ ಎನ್.ಬಂಗೇರ ಕುಂದಾಪುರ, ಶಂಕರ ಗಾಣಿಗ ಹೊಲಾಡು, ಚಂದ್ರ ರಾಯಪ್ನಡಿ, ದಿವಾಕರ ಸುಜಿ ವಂಡ್ಸೆ, ಹರೀಶ ನಾಯ್ಕ ವಂಡ್ಸೆ, ಶಿವರಾಮ ಶೆಟ್ಟಿ ವಂಡ್ಸೆ, ಉದಯ ಕೆ.ನಾಯ್ಕ ವಂಡ್ಸೆ, ಜಲಜ ಪೂಜಾರಿ ಮಾವಿನಕಟ್ಟೆ, ಶಶಿಕಲಾ ಎಸ್.ವಂಡ್ಸೆ, ಗುರುರಾಜ್ ಪಂಜು ಪೂಜಾರಿ ಬಿಜೂರು, ದೇವು ಮೆಂಡನ್ ಹಿಜಾಣ, ನಾಗರಾಜ ಪುತ್ರನ್ ಅಂಬ್ಲಾಡಿ ಉಪಸ್ಥಿತರಿದ್ದರು.

ಶಾಖಾ ಸಿಬ್ಬಂದಿ ಅಭಿಷೇಕ್ ವಂಡ್ಸೆ ಸ್ವಾಗತಿಸಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್.ಸಂತೋಷ ವಂದಿಸಿದರು. ಮಂಜುನಾಥ್ ಚಂದನ್ ನೆಂಪು ಕಾರ್ಯಕ್ರಮ ನಿರ್ವಹಿಸಿದರು. ನಿತ್ಯನಿಧಿ ಸಂಗ್ರಹಕ ಗುರುರಾಜ್ ಗಾಣಿಗ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!