spot_img
Sunday, May 10, 2026
spot_img

‘ಅಮ್ಮ ಸೇವಾ ವೇದಿಕೆ ಹೆಮ್ಮಾಡಿ’ ಪ್ರಥಮ ಸೇವಾ ಕೈಂಕರ್ಯ: ಸುಬ್ರಹ್ಮಣ್ಯ ಬಗ್ವಾಡಿ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ


ಕುಂದಾಪುರ: ಅಮ್ಮ ಸೇವಾ ವೇದಿಕೆ ಹೆಮ್ಮಾಡಿ ನೇತೃತ್ವದಲ್ಲಿ ಕಲಾವಿದ ಸುಬ್ರಹ್ಮಣ್ಯ ಬಗ್ವಾಡಿ, ಅಮ್ಮ ಅಜ್ಜಿಯು ವಾಸವಾಗಿರಲು ಮನೆ ಕಟ್ಟಿಸಿ ಕೊಡುವ ಸಂಕಲ್ಪ ಮಾಡಿದ್ದು, ಆ ಪ್ರಯುಕ್ತ ನೂತನ ಮನೆ ನಿರ್ಮಾಣದ ಭೂಮಿ ಪೂಜೆಯ ಮೂಲಕ ಅಮ್ಮ ಸೇವಾ ವೇದಿಕೆಯ ಪ್ರಥಮ ಸೇವಾಕಾರ್ಯಕ್ಕೆ ಚಾಲನೆ ನೀಡಲಾಯಿತು.


ಫಲಾನುಭವಿಗಳು ಈಗ ಇರುವ ಗುಡಿಸಲು ಮನೆಯ ಹಿಂದುಗಡೆ ಇರುವ ಸ್ವಂತ ಜಾಗದಲ್ಲಿ ಮನೆ ನಿರ್ಮಾಣದ ಭೂಮಿ ಪೂಜೆ (ಕೆಸರು ಕಲ್ಲು ಮುಹೂರ್ತ) ಗ್ರಾಮಸ್ಥರ ಸಮಕ್ಷಮದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಉದ್ಯಮಿ, ಕೊಡುಗೈ ದಾನಿ ಗೋವಿಂದ ಬಾಬು ಪೂಜಾರಿ ಅವರು ರೂ. 50,000 ಚೆಕ್ ನೀಡಿ, ಕಲಾವಿದ ಸುಬ್ರಮಣ್ಯ ಮತ್ತು ಅವರ ಅಮ್ಮ, ಅಜ್ಜಿಗೆ ಸಾಂತ್ವನ ಹೇಳಿದರು.


ಅಮ್ಮ ಸೇವಾ ವೇದಿಕೆ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ ಸ್ವಾಗತಿಸಿ, ಆಗಮಿಸಿದ ದಾನಿಗಳಿಗೆ, ಊರ ಗ್ರಾಮಸ್ಥರಿಗೆ, ಸದಸ್ಯರು ಮತ್ತು ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!