Thursday, November 21, 2024

ಬೆಂಗಳೂರು-ಕಾರವಾರ ಹಗಲು ರೈಲು ಪುನಃ ಆರಂಭಕ್ಕೆ ಕೊಂಕಣ ರೈಲ್ವೆ ವಿಭಾಗೀಯ ಅಧಿಕಾರಿಗಳಿಗೆ ಮನವಿ


ಕುಂದಾಪುರ: ಕೊಂಕಣ ರೈಲ್ವೆ ವಿಭಾಗೀಯ ಅಧಿಕಾರಿ ಬಿ.ಬಿ ನಿಕ್ಕಮ್ ಮತ್ತು ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿಯಿಂದ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಕುಂದು ಕೊರತೆ ಬಗ್ಗೆ ಚರ್ಚೆ ನಡೆಸಲಾಯಿತು.


ಕುಂದಾಪುರದಲ್ಲಿ ಪ್ರಯಾಣಿಕರ ಗಣಕೀಕೃತ ಸೀಟು ಕಾದಿರಿಸುವಿಕೆ, ನಿಲ್ದಾಣದ ದುರಸ್ತಿ ಕಾರ್ಯ, ವಿಸ್ಟೋಡೋಮ್ ಪ್ರವಾಸಿ ರೈಲು ಕಾರವಾರದವರೆಗೂ ವಿಸ್ತರಣೆ, ನಿಲ್ದಾಣದಲ್ಲಿ ಹೈಮಾಸ್ಟ್ ದೀಪದ ಅಳವಡಿಕೆ, ನೇತ್ರಾವತಿ ನಿಲುಗಡೆ ಮತ್ತು ಬೆಂಗಳೂರು ಕಾರವಾರ ಹಗಲು ರೈಲು ಪುನಃ ಆರಂಭದ ಬಗ್ಗೆ ಚರ್ಚಿಸಲಾಯಿತು.


ಹೈ ಮಾಸ್ಟ್ ದೀಪವನ್ನು ಕೂಡಲೇ ಅಳವಡಿಸಲು ನಿಕ್ಕಮ್ ಸ್ಥಳದಲ್ಲೆ ನಿರ್ಣಯ ಕೈಗೊಂಡರು. ಉಳಿದ ವಿಷಯಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವದು ಎಂದು ಸಮಿತಿಗೆ ಭರವಸೆ ನೀಡಿದರು. ಸಮಿತಿ ಅಧ್ಯಕ್ಷ ಗಣೇಶ ಪುತ್ರನ್ ಪ್ರಯಾಣಿಕರ ಕುಂದು ಕೊರತೆಗಳನ್ನು ವಿವರಿಸಿದರು.


ಕುಂದಾಪುರ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್, ತಾಂತ್ರಿಕ ಸಲಹೆಗಾರ ಗೌತಮ್ ಶೆಟ್ಟಿ, ಕೋಶಾಧಿಕಾರಿ ಉದಯ ಭಂಡಾರ್ಕರ್, ಗೌರವ ಅಧ್ಯಕ್ಷ ಕೆಂಚಿನೂರ್ ಸೋಮಶೇಖರ್ ಶೆಟ್ಟಿ, ಸದಸ್ಯರಾದ ರಾಘವೇಂದ್ರ ಶೇಟ್, ಧರ್ಮ ಪ್ರಕಾಶ್, ನಾಗೇಶ್ ಶೆಣೈ, ಕೋಣಿ ಪಂಚಾಯತ್ ಸದಸ್ಯ ನಾಗರಾಜ್ ಆಚಾರ್, ಕಂದಾವರ ಸದಸ್ಯ ಅಭಿಷೇಕ್, ಕಾರ್ಯದರ್ಶಿ ಸಂಜೀವ,
ಕೊಂಕಣ ರೈಲ್ವೆಯ ಸಿವಿಲ್ ಇಂಜಿನಿಯರ್ ವೆಂಕಟೇಶ್, ಎಲೆಕ್ಟ್ರಿಕಲ್ ಇಂಜಿನಿಯರ್ ಅಭಿಜಿತ್ ಮತ್ತು ಎಲೆಕ್ಟ್ರಿಕಲ್ ಗುತ್ತಿಗೆದಾರ ಭಾಗ್ಯಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!