spot_img
Thursday, May 7, 2026
spot_img

ಪಾರ್ವತಿ ಜಿ. ಐತಾಳ್ ಅವರ ಸಮಗ್ರ ಕೃತಿ ನೋಟ ‘ಸುರಗಂಗೆ’ ಪುಸ್ತಕ ಬಿಡುಗಡೆ

ಕುಂದಾಪುರ: ಪಂಚಭಾಷಾ ಲೇಖಕಿ ಪಾರ್ವತಿ ಜಿ ಐತಾಳ್ ವಿಶೇಷವಾಗಿ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅನುಪಮವಾದದ್ದು. ಅವರ ಸಾಧನೆ ಸದಾ ಕಾಲ ಪ್ರೇರಣೆ ನೀಡುವಂತದ್ದು. ಆ ಹಿನ್ನೆಲೆಯಲ್ಲಿ ಅವರ ಸಮಗ್ರ ಕೃತಿಗಳನ್ನು ಪರಿಚಯಿಸುವ ಸುರಗಂಗೆ ಅವರ ಬಗ್ಗೆ ಸಮಗ್ರ ಅರಿವು ಪಡೆಯಲು ಸಹಕಾರಿಯಾಗಲಿದೆ ಎಂದು ರಂಗನಟಿ, ಸಾಹಿತಿ ಪೂರ್ಣಿಮಾ ಸುರೇಶ್ ಅಭಿಪ್ರಾಯಪಟ್ಟರು.


ಅವರು ಕುಂದಾಪುರದ ಜನಪ್ರತಿನಿಧಿ ಪ್ರಕಾಶನ ಹೊರತಂದಿರುವ ನರೇಂದ್ರ ಎಸ್ ಗಂಗೊಳ್ಳಿ ಸಂಪಾದಕತ್ವದ ಡಾ. ಪಾರ್ವತಿ ಜಿ ಐತಾಳ್ ಅವರ ಸಮಗ್ರ ಕೃತಿಗಳ ಪರಿಚಯವುಳ್ಳ ಸುರಗಂಗೆ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.


ಸಂವೇದನೆಗಳನ್ನು ಅನುಭವಿಸಿದಾಗಲೇ ಅರ್ಥಪೂರ್ಣ ಕೃತಿ ಹೊರಬರಲು ಸಾಧ್ಯ. ಪಾರ್ವತಿ ಜಿ.ಐತಾಳ್ ಅವರ ಕಥೆ, ಕಾದಂಬರಿಗಳಲ್ಲಿ ಅಂಥಹ ಜೀವಸ್ಪಂದನೆ ಗುರುತಿಸಬಹುದು. ಅನುವಾದ ಸಾಹಿತ್ಯದಲ್ಲಿಯೂ ಕೂಡಾ ಅಧ್ಯಯನಶೀಲತೆ ಹಾಗೂ ಭಾಷೆ, ಭಾವನೆಗಳ ಹಿಡಿತ ಅದ್ಬುತವಾದುದು. ಅವರು ಸಾಹಿತ್ಯ, ಕಲೆ, ನಾಟಕ, ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಕೈಯಾಡಿಸಿ ಬರಹಗಳ ಮೂಲಕ ಕಟ್ಟಿಕೊಡುವ ಕೆಲಸ ಮಾಡುತ್ತಿದ್ದಾರೆ. ಸ್ತ್ರೀಸಂವೇದನೆ, ಮಾನಸಿಕ ತಳಮಳ, ಹೊಸ ಹೊಸ ವಿಚಾರಗಳನ್ನು ಕೂಡಾ ಪರಿಣಾಮಕಾರಿಯಾಗಿ ಕೃತಿಯಲ್ಲಿ ಅಳವಡಿಸಿ ಓದುಗರ ಮುಂದಿಡುವ ಪಾರ್ವತಿ ಐತಾಳರಿಗೆ ಬರವಣಿಗೆ ಹವ್ಯಾಸವಲ್ಲ, ಅವರಿಗೆ ಅದು ತಪಸ್ಸು ಎಂದರು.


ಪಾರ್ವತಿ ಐತಾಳರು ಕನ್ನಡ ಸಾಹಿತ್ಯ ಹಾಗೂ ಅನುವಾದ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಗೆ ಇನ್ನೂ ಸೂಕ್ತ ಮನ್ನಣೆ ಸಿಗಬೇಕಾಗಿದೆ ಎಂದು ಪೂರ್ಣಿಮಾ ಸುರೇಶ ಅಭಿಪ್ರಾಯ ಪಟ್ಟರು.


ಕುಂದಾಪುರ ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿ, ಲೇಖಕಿ ಸುಮತಿ ಶೆಣೈ ಶುಭಾಶಂಸನೆಗೈಯುತ್ತ, ಸುರಗಂಗೆಯಂತಹ ಪುಸ್ತಕಗಳು ಉದಯೋನ್ಮುಖ ಬರಹಗಾರರಿಗೆ ಬಹುದೊಡ್ಡ ಪ್ರೇರಣೆಯನ್ನು ನೀಡುವಂತಹವು. ಇದು ಹೆಚ್ಚೆಚ್ಚು ಜನರನ್ನು ತಲುಪುವಂತಾಗಬೇಕು. ಪಾರ್ವತಿ ಜಿ. ಐತಾಳರ ಕೃತಿಗಳ ಮಹತ್ವಿಕೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.


ಲೇಖಕಿ ಪಾರ್ವತಿ ಜಿ ಐತಾಳ್, ವಿಜ್ಞಾನ ಲೇಖಕ ಗಂಗಾಧರ ಐತಾಳ್, ಸುರಗಂಗೆಯ ಸಹ ಸಂಪಾದಕ ನಾಗರಾಜ್ ವಂಡ್ಸೆ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಜನಪ್ರತಿನಿಧಿ ಪ್ರಕಾಶನದ ವತಿಯಿಂದ ಪೂರ್ಣಿಮ ಸುರೇಶ್, ಸುಮತಿ ಶೆಣೈ ಮತ್ತು ನರೇಂದ್ರ ಎಸ್ ಗಂಗೊಳ್ಳಿ ಇವರನ್ನು ಸನ್ಮಾನಿಸಲಾಯಿತು.
ಪುಸ್ತಕದ ಪ್ರಕಾಶಕ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿದರು. ಸುರಗಂಗೆ’ಯ ಪ್ರಧಾನ ಸಂಪಾದಕ ನರೇಂದ್ರ ಎಸ್ ಗಂಗೊಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿನಯ ಕೌಂಜೂರು ಕಾರ್ಯಕ್ರಮ ನಿರೂಪಿಸಿದರು. ಸಹ ಸಂಪಾದಕ ಶ್ರೀರಾಜ್ ಆಚಾರ್ಯ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!