spot_img
Monday, March 16, 2026
spot_img

ನಲವತ್ತರ ನಾಗೂರು: ನಾಗೂರು ಶ್ರೀನಿವಾಸ ದೇವಾಡಿಗರಿಗೆ ಅಭಿನಂದನೆ

ಬೆಂಗಳೂರು: (ಜನಪ್ರತಿನಿಧಿ ವಾರ್ತೆ) ನಾಗೂರು ಶ್ರೀನಿವಾಸ ದೇವಾಡಿಗ ಅಭಿನಂದನಾ ಬಳಗ ಬೆಂಗಳೂರು, ಬ್ರಹ್ಮಲಿಂಗೇಶ್ವರ ಗೆಳೆಯರ ಬಳಗ ಬೆಂಗಳೂರು, ದೇವಾಡಿಗ ಸಂಘ ರಿ., ಬೆಂಗಳೂರು, ನವೋದಯ ಸಂಘ ಬೆಂಗಳೂರು ಆಯೋಜನೆಯಲ್ಲಿ ಮಾರಣಕಟ್ಟೆ ಮತ್ತು ಕಮಲಶಿಲೆ ಮೇಳದ ಕಲಾವಿದರಿಂದ ನಲವತ್ತರ ನಾಗೂರು ಮಾರಣಕಟ್ಟೆ ಒಂದೇ ಮೇಳದಲ್ಲಿ 44 ವರ್ಷ ಕಲಾ ಸೇವೆ ಮಾಡಿದ ನಾಗೂರು ಶ್ರೀನಿವಾಸ ದೇವಾಡಿಗರಿಗೆ ಅಭಿಮಾನಿಗಳಿಂದ ಅಭಿನಂದನಾ ಸಮಾರಂಭ ನ.8ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು.

ರಾಜ್ಯದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಕಾರ್ಯಕ್ರಮಕ್ಕೆ ಆಗಮಿಸಿ ನಾಗೂರು ಶೀನಿವಾಸ ದೇವಾಡಿಗರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಇದರ ಅಧ್ಯಕ್ಷರಾದ ಶಿವಾನಂದ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಘುರಾಮ ದೇವಾಡಿಗ ಆಲೂರು, ದೇವಾಡಿಗ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ರಮೇಶ್ ದೇವಾಡಿಗ ವಂಡ್ಸೆ, ದೇವಾಡಿಗ ನವೋದಯ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ಹರಿದೇವಾಡಿಗ, ಕುಂದಾಪುರ ಕನ್ನಡ ಪ್ರತಿಷ್ಠಾನ ಬೆಂಗಳೂರು ಅಧ್ಯಕ್ಷರಾದ ದೀಪಕ್ ಶೆಟ್ಟಿ ಬಾರ್ಕೂರು, ಅಭಯ ಫೌಂಡೇಶನ್‌ನ ಎಂ.ಬಿ ಉಮೇಶ್ ಶೆಟ್ಟಿ, ಹರಿಕೃಷ್ಣ ನೈರಿ ಬೆಂಗಳೂರು, ಹೋಟೆಲ್ ಶಾಂತಿ ಸಾಗರ್ ಉದ್ಯಮಿ ಗಣೇಶ ಪೂಜಾರಿ, ಆನಂದ್ ಶೆಟ್ಟಿ ಕೊರ್ಗಿ, ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸೈನ್ಸ್ ಬೆಂಗಳೂರು ಇದರ ಮ್ಯಾನೇಜಿಂಗ್ ಟ್ರಸ್ಟಿ ಎಚ್.ಎಸ್.ದೇವಾಡಿಗ, ಬೆಂಗಳೂರು ಉದ್ಯಮಿ ಮಂಜುನಾಥ ಮಾರಣಕಟ್ಟೆ, ಚರಣ್ ದೇವಾಡಿಗ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರನ್ನು ಕಲಾವಿದ ನಾಗೂರು ಶ್ರೀನಿವಾಸ ದೇವಾಡಿಗರು ಗೌರವಿಸಿದರು. ಬಳಿಕ ಅದ್ದೂರಿಯ ಯಕ್ಷಗಾನ ಪ್ರದರ್ಶನ ಜರಗಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!