spot_img
Saturday, August 1, 2026
spot_img

ಕುಂದಾಪುರ: ಗುಂಡಿಕ್ಕಿ ಹತ್ಯೆಗೈದ ಹಂತಕ ಡೆರಿಕ್ ಕ್ರಾಸ್ತಾ ಬಂಧನ

ಕುಂದಾಪುರ: ಕುಂದಾಪುರ ಚರ್ಚ್ ರಸ್ತೆಯಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಡೆರಿಕ್ ಕ್ರಾಸ್ತಾನನ್ನು ಬಂಧಿಸಲಾಗಿದೆ.

ಡೆರಿಕ್ ಕ್ರಾಸ್ತಾ (55ವ) ಸ್ನೇಹಿತ ಐವನ್ ರಿಚರ್ಡ್ ಮಸ್ಕರೇನಸ್ (45ವ) ಎನ್ನುವ ವ್ಯಕ್ತಿಯನ್ನು ಕುಂದಾಪುರ ಚರ್ಚ್‌ರಸ್ತೆಗೆ ಕರೆಸಿ, ಆತ ಕಾರಿನಿಂದ ಇಳಿಯುತ್ತಿದ್ದಂತೆ ಗನ್ ನಿಂದ ಶೂಟ್ ಮಾಡಿ ಪರಾರಿಯಾಗಿದ್ದ. ಐವನ್ ರಿಚರ್ಡ್ ಮಸ್ಕರೇನಸ್ ಸ್ಥಳದಲ್ಲಿದ್ದಯೇ ಮೃತ ಪಟ್ಟಿದ್ದು ಆರೋಪಿಯ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಡೆರಿಕ್ ಕನ್ನಡಕುದ್ರು ನಿವಾಸಿಯಾಗಿದ್ದು ಪ್ರಸ್ತುತ ಕುಂದಾಪುರದ ಪ್ಲ್ಯಾಟ್ ನಲ್ಲಿ ವಾಸವಿದ್ದ. ಲ್ಯಾಂಡ್ ಲಿಂಕ್ಸ್, ಮರಳು ವ್ಯಾಪಾರ, ಸಿಗಡಿಕೆರೆ ಮೊದಲಾದ ವ್ಯವಹಾರಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ. ಈತನ ಮೇಲೂ ಕೂಡಾ ಕೇಸುಗಳು ಇವೆ ಎನ್ನಲಾಗಿದೆ.

ಕೊಲೆಯಾದ ಐವನ್ ರಿಚರ್ಡ್ ಮಸ್ಕರೇನಸ್ ಮುನ್ನ ಎನ್ನುವ ಅಡ್ಡ ಹೆಸರಿನಿಂದ ಆಪರಾಧ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ. 2024ರ ಸೆ.1ರಂದು ಉದ್ಯಾವರದ ಸಮೀಪ ಕೊಲೆಯಾದ ರೌಡಿ ಪಿಟ್ಟಿ ನಾಗೇಶ ಪ್ರಕರಣದಲ್ಲಿ ಆರೋಪಿಯಾಗಿ ಖುಲಾಸೆಗೊಂಡಿದ್ದ. ಇನ್ನೂ 2-3 ಪ್ರಕರಣದಲ್ಲಿ ಈತನ ಮೇಲೆ ಮೊಕದ್ದಮೆ ಇತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!