spot_img
Saturday, August 1, 2026
spot_img

ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ಶ್ರೀಧರ ಭಟ್ ಕಾಸರಕೋಡು ನಿಧನ

ಕುಂದಾಪುರ: ಬಡಗು ತಿಟ್ಟಿನ ಪ್ರತಿಭಾಸಂಪನ್ನ ಹಾಸ್ಯಕಲಾವಿದ ಕಾಸರಕೋಡು ಶ್ರೀಧರ ಸುಬ್ರಾಯ ಭಟ್ (51) ಜುಲೈ 31ರಂದು ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ ಇಬ್ಬರು ಪುತ್ರರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

ಕೆರೆಮನೆ ಶಿವರಾಮ ಹೆಗಡೆ ಮತ್ತು ದೊಡ್ಡತಂದೆ ನರಸಿಂಹ ಭಟ್ಟರಿಂದ ಪ್ರೇರಿತರಾಗಿ ಹದಿನಾರರ ಹರೆಯದಲ್ಲೇ ಕೆರೆಮನೆ ಕೇಂದ್ರದಲ್ಲಿ ಹೆರಂಜಾಲು ವೆಂಕಟರಮಣ ಗಾಣಿಗರಲ್ಲಿ ಯಕ್ಷಗಾನ ಕಲಿತು ಹದಿನೆಂಟನೆ ವಯಸ್ಸಿಗೆ ಮೇಳ ಸೇರಿ 33 ವರ್ಷಗಳ ಕಲಾಸೇವೆ ಗೈದಿರುತ್ತಾರೆ. ಇಡಗುಂಜಿ, ಸಾಲಿಗ್ರಾಮ, ಮಂದಾರ್ತಿ , ಗುಂಡಬಾಳ ಮೇಳಗಳಲ್ಲಿ 13 ವರ್ಷಗಳ ತಿರುಗಾಟ ಮಾಡಿ ಮುಂದೆ ವಿವಿಧ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಯಾರ ಅನುಕರಣೆಯೂ ಇಲ್ಲದ ತುಂಬಾ ಚುರುಕಿನ ಮಾತು, ಕುಣಿತ, ಅಭಿನಯಗಳಿಂದ ಕಲಾರಸಿಕರಿಗೆ ಸಂತೋಷ ನೀಡುತ್ತಿದ್ದರು. ಚಂದಗೋಪ, ರಜಕ, ನಂದಿಶೆಟ್ಟಿ, ಬೇಹಿನಚರ, ಅಜ್ಜಿ ಹೀಗೆ ಎಲ್ಲಾ ರೀತಿಯ ಪೌರಾಣಿಕ ಹಾಸ್ಯಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸುತ್ತಿದ್ದರು. ಅಸಾಧಾರಣ ಪ್ರತ್ಯುತ್ಪನ್ನ ಮತಿತ್ವ ಅವರದಾಗಿತ್ತು. ಚಂಡೆವಾದನದಲ್ಲೂ ಪರಿಣತರಾಗಿದ್ದರು.

ಶ್ರೀಧರ ಭಟ್ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!