spot_img
Friday, July 31, 2026
spot_img

ಕುಂದಾಪುರ: ಶೂಟೌಟ್ ಪ್ರಕರಣ: ಆರೋಪಿ ಪತ್ತೆಗೆ ಮೂರು ವಿಶೇಷ ತಂಡ ರಚನೆ

ಕುಂದಾಪುರ: ಕುಂದಾಪುರ ಚರ್ಚ್ ರಸ್ತೆಯಲ್ಲಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ಶೂಟೌಟ್ ಪ್ರಕರಣಕ್ಕೆ ಸಂಭದಿಸಿದಂತೆ ಹಂತಕನ ಶೋಧಕ್ಕೆ ಮೂರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.

ಶುಕ್ರವಾರ ಬೆಳಂಬೆಳಿಗ್ಗೆ ಕುಂದಾಪುರವನ್ನೇ ಈ ಶೂಟೌಟ್ ಪ್ರಕರಣ ಬೆಚ್ಚಿ ಬೀಳಿಸಿತ್ತು. ಚರ್ಚ್ ರಸ್ತೆಯಲ್ಲಿ ಗನ್ ನಿಂದ ಶೂಟ್ ಮಾಡಿ ಹತ್ಯೆ ಮಾಡಲಾಗಿತ್ತು. ಕುಂದಾಪುರಕ್ಕೆ ಕರೆಸಿ ಪರಿಚಿತನನ್ನು ಹತ್ಯೆ ಮಾಡಿದ ಘಟನೆಗೆ ಕುಂದಾಪುರವೇ ಬೆಚ್ಚಿ ಬಿದ್ದಿತ್ತು.

ಜು.೩೦ರ ರಾತ್ರಿ ೧೧:೪೫ ಗಂಟೆಗೆ ಡೆರಿಕ್ ಎನ್ನುವಾತ ಸ್ನೇಹಿತ ಐವನ್ ರಿಚರ್ಡ್ ಮಸ್ಕರೇನಸ್ (೪೫ವ) ಎನ್ನುವ ವ್ಯಕ್ತಿಗೆ ಕರೆ ಮಾಡಿ ಸಿಗಡಿ ಕೊಡುವ ವಿಚಾರದಲ್ಲಿ ಹಣ ಬರಲು ಬಾಕಿ ಇದ್ದು, ಈ ವಿಚಾರದಲ್ಲಿ ಡೆರಿಕ್ ನು ಮದ್ಯಸ್ಥಿಕೆ ವಹಿಸಿ ಹಣ ತೆಗಿಸಿ ಕೊಡುತ್ತೇನೆ ಎಂದು ಹೇಳಿರುವ ವಿಚಾರದಲ್ಲಿ ಜೋರು ಜೋರಾಗಿ ಮಾತನಾಡುತ್ತ ಗಲಾಟೆ ಮಾಡಿಕೊಳ್ಳುತ್ತಿದ್ದು, ಆ ಸಮಯ ಡೆರಿಕ್ ನು ಐವನ್ ರವರಿಗೆ ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ ಎಂದು ಸವಾಲು ಹಾಕಿದ್ದ.

ಜು.೩೧ರಂದು ರಾತ್ರಿ ೦೧:೩೦ ಗಂಟೆಗೆ ಐವನ್ ರ ಪೋನ್‌ಗೆ ಡೆರಿಕ್ ಲೋಕೆಶನ್ ಕಳುಹಿಸಿದ್ದು, ಈ ಲೊಕೇಶನ್ ಆದ ಕುಂದಾಪುರ ಚರ್ಚ್ ರಸ್ತೆಯ ಹೋಲಿ ರೋಸಾರಿಯ ಚರ್ಚಿನ ಎದುರು ಇರುವ ಕಾಂಕ್ರೇಟ್ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿಕೊಂಡಿದ್ದಾಗ, ಸುಮಾರು ೦೩:೧೫ ಗಂಟೆಯ ಸಮಯಕ್ಕೆ ಕಪ್ಪು ಕೆಂಪು ಬಣ್ಣದ ಥಾರ್ ಕಾರಿನಲ್ಲಿ ಬಂದ ಡೆರಿಕ್ ಐವನ್ ಇದ್ದ ಕಾರಿನ ಎದುರು ನಿಲ್ಲಿಸಿ ಕೆಳಗೆ ಇಳಿದು ಬಂದು, ಐವನ್ ರವರು ಕಾರಿನಿಂದ ಇಳಿದಾಗ, ಡೆರಿಕ್‌ನು ಕೈಯಲ್ಲಿ ಹಿಡಿದು ಕೊಂಡಿದ್ದ ಒಂದು ಗನ್‌ನಿಂದ ಸೊಂಟದ ಕೆಳ ಭಾಗಕ್ಕೆ ಶೂಟ್ ಮಾಡಿ ವಾಪಾಸ್ಸು ಕಾರಿನ್ನು ಹತ್ತಿ ಹಿಮ್ಮುಖವಾಗಿ ಚಲಾಯಿಸಿಕೊಂಡು ಪರಾರಿಯಾದ್ದಾನೆ.

ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಾಯಗೊಂಡು ರಕ್ತಸ್ರಾವ ಆಗಿ ರಸ್ತೆಯಲ್ಲೆ ಕುಸಿದು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಮೃತಪಟಿದ್ದಾರೆ. ಈ ಗಲಾಟೆಗೆ ಐವನ್ ರವರಿಗೆ ಹಾಗೂ ಡೆರಿಕ್ ರವರಿಗೆ ಇದ್ದ ಹಣಕಾಸಿನ ವ್ಯವಹಾರ ಹಾಗೂ ಇತರ ವ್ಯವಹಾರದ ವಿಚಾರದಲ್ಲಿ ಇರುವ ಮನಸ್ತಾಪದಿಂದ ಆಗಿದೆ ಎನ್ನಲಾಗಿದೆ.

ಡೆರಿಕ್ ಕನ್ನಡಕುದ್ರು ನಿವಾಸಿಯಾಗಿದ್ದು ಪ್ರಸ್ತುತ ಕುಂದಾಪುರದ ಪ್ಲ್ಯಾಟ್ ನಲ್ಲಿ ವಾಸವಿದ್ದ. ಐವನ್ ರಿಚರ್ಡ್ ಮಸ್ಕರೇನಸ್ ಮೂಲತಃ ಹೆಬ್ರಿಯವರಾಗಿದ್ದು ಸದ್ಯ ಬಾರಕೂರಿನಲ್ಲಿ ವಾಸ್ತವ್ಯವಿದ್ದರು ಎನ್ನಲಾಗಿದೆ. ಐವನ್ ರಿಚರ್ಡ್ ಮಸ್ಕರೇನಸ್ ಜೊತೆಗೆ ಕಾರಿನಲ್ಲಿ ಮಹಿಳೆಯೊಬ್ಬರು ಬಂದಿದ್ದು ಘಟನೆಗೆ ಅವರು ಪ್ರತ್ಯಕ್ಷದರ್ಶಿಯಾಗಿದ್ದಾರೆ.

ಪ್ರಕರಣದ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!