spot_img
Friday, July 31, 2026
spot_img

ಕೋಡಿ ಸಾಸ್ತಾನ ಸಂಪರ್ಕ ಸೇತುವೆ ಕುಸಿತ: ಸರಿಪಡಿಸಲು ಆಗ್ರಹ

ಅತ್ಯಂತ ಹಿಂದುಳಿದ ಗ್ರಾಮವಾದ ಉಡುಪಿ ಜಿಲ್ಲೆ ಕೋಡಿ ಗ್ರಾಮ ಪಂಚಾಯತ್‌ನ ಸಾಸ್ತಾನ ಪೇಟೆಗೆ ಸಂಪರ್ಕ ಕಲ್ಪಿಸುವ ಕೋಡಿ ಸಾಸ್ತಾನ ಸಂಪರ್ಕ ಸೇತುವೆಯ ಪಶ್ಚಿಮ ತುದಿಯಲ್ಲಿ ಭೂಕುಸಿತವಾಗಿದ್ದು ಸದ್ಯಕ್ಕೆ ಈ ಸೇತುವೆಯ ಮೇಲೆ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
1993 ರಲ್ಲಿ ಅಂದಿನ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿಯವರು, ದಿ. ಡಾ. ಕೋಟ ಶಿವರಾಮ ಕಾರಂತರು ಮತ್ತು ಮೂಲತಃ ಕೋಡಿ ಗ್ರಾಮದಲ್ಲಿ ಹುಟ್ಟಿ ಬೆಳೆದವರಾದ ಹಿರಿಯ ಉದ್ಯಮಿ ಡಾ. ಜಿ. ಶಂಕರ್ ರವರ ಒತ್ತಾಯದ ಮೇರೆಗೆ ಆ ವರ್ಷದ ಬಜೆಟ್ ಗೆ ಈ ಸೇತುವೆಯ ಕಾಮಗಾರಿಯನ್ನು ಸೇರಿಸಿದ್ದರು. ನಂತರ ಡಾ. ಜಿ.ಶಂಕರ್ ಮತ್ತು ಅಂದಿನ ಉಸ್ತುವಾರಿ ಸಚಿವ ಜಯಪ್ರಕಾಶ ಹೆಗ್ಡೆಯವರ ಶ್ರಮದಿಂದ ಈ ಸೇತುವೆಯ ಕಾಮಗಾರಿ ಪೂರ್ಣಗೊಂಡು, 2000 ನೆಯ ಇಸವಿ ಜನವರಿಯಲ್ಲಿ ಉದ್ಘಾಟನೆಗೊಂಡಿತ್ತು. ಇದರಿಂದ ಕೋಡಿ ಗ್ರಾಮದ ಜನರ ಬದುಕು ಬಹಳಷ್ಟು ಸುಧಾರಿಸಿತ್ತು.
ಆದರೆ ಇದೀಗ ಮತ್ತೆ ಕುಸಿದಿರುವುದು ಇಲ್ಲಿಯ ಜನರ ಆತಂಕಕ್ಕೆ ಕಾರಣವಾಗಿದೆ. ಸಾಧ್ಯವಾದಷ್ಟು ಬೇಗ ಈ ಕುಸಿತವನ್ನು ಸರಿಪಡಿಸಬೇಕೆಂಬುದು ಜನರ ಬೇಡಿಕೆಯಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!