spot_img
Saturday, August 1, 2026
spot_img

ಹಾಲಾಡಿ ಜೆಸಿ‌ಐ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ

ಹಾಲಾಡಿ: ಹಾಲಾಡಿ ವಾರಾಹಿ ಜೆಸಿ‌ಐ ಘಟಕದ ವತಿಯಿಂದ ಕೆಸರಸಿರು ಕೆಸರುಗದ್ದೆ ಕ್ರೀಡಾಕೂಟ ಮತ್ತು ಕೆಸರಲ್ಲೊಂದು ದಿನ ಕಾರ್ಯಕ್ರಮವು ಆಗಸ್ಟ್ 1 ರ ಶನಿವಾರ ಹಾಲಾಡಿ ಸಮೀಪದ ಕಕ್ಕುಂಜೆ ಕ್ರಾಸ್ ಅಯೂಬ್ ಖಾನ್ ಇವರ ಗದ್ದೆಯಲ್ಲಿ ನಡೆಯಿತು.

ಕೆಸರುಗದ್ದೆಯಲ್ಲಿ ಸಾರ್ವಜನಿಕರು ಮತ್ತು ಮಕ್ಕಳಿಗೆ ವಿವಿಧ ಮನೋರಂಜನಾ ಹಾಗೂ ಸ್ಪರ್ಧಾತ್ಮಕ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಉಸ್ಮಾನ್ ಹಸನ್ ಹಾಲಾಡಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜೆಸಿ‌ಐ ಸದಸ್ಯರು, ಸಾರ್ವಜನಿಕರು ಹಾಗೂ ಶಾಲಾ ವಿಧ್ಯಾರ್ಥಿಗಳಿಗಾಗಿ ಕೆಸರುಗದ್ದೆಯಲ್ಲಿ ಹಗ್ಗಜಗ್ಗಾಟ, ನಿಧಿಶೋಧ, ಗಿರಕಿ ಓಟ ಮತ್ತು ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಜೆಸಿ‌ಐ ಸದಸ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಾಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಲಾಡಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರ್ದಳ್ಳಿ ಮಂಡಳ್ಳಿ ಇಲ್ಲಿಯ ಇಕೋ ಕ್ಲಬ್ ವತಿಯಿಂದ ಮಕ್ಕಳಿಗೆ ಭತ್ತದ ನಾಟಿ ಪ್ರಾತ್ಯಕ್ಷಿತೆ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲಾಡಿ ಜೆಸಿ‌ಐ ಘಟಕದ ಅಧ್ಯಕ್ಷರಾದ ಪ್ರದೀಪ ಹಾಲಾಡಿ ವಹಿಸಿದ್ದರು.
ಹಾಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಶೇಟ್, ನಿವೃತ್ತ ಶಿಕ್ಷಕರಾದ ಬಿ.ಚಂದ್ರಶೇಖರ ಶೆಟ್ಟಿ ಮಣಿಗೇರಿ, ಶಂಕರನಾರಾಯಣ ಜೆಸಿ‌ಐ ಘಟಕದ ನಿಕಟ ಪೂರ್ವಾಧ್ಯಕ್ಷ ಪ್ರವೀಣ ಬಾಳೆಕೊಡ್ಲು, ಹಾಲಾಡಿ ಮಾರಿಕಾನ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಜ್ಞಾನೇಶ ಶೆಟ್ಟಿ, ಅಯೂಬ್ ಖಾನ್ ಹಾಲಾಡಿ, ಜೆಸಿ‌ಐ ಕಾರ್ಯದರ್ಶಿ ಅಶೋಕ ಆಚಾರ್ಯ , ಲೇಡಿ ಪ್ರೆಸಿಡೆಂಟ್ ಅವಶ್ಯ ಶೆಟ್ಟಿ , ಜೇಸಿ ಕೋ ಆರ್ಡಿನೇಟರ್ ದೀಪಾ .ಆರ್. ಶೆಟ್ಟಿ, ಕಾರ್ಯಕ್ರಮ ನಿರ್ದೇಶಕರಾದ ನಾರಾಯಣ ಮೊಗವೀರ ಹಾಲಾಡಿ, ಹಾಲಾಡಿ ಶಾಲಾ ಶಿಕ್ಷಕಿಯರಾದ ಕಲ್ಪನಾ, ಜ್ಯೋತಿ, ಹಾರ್ದಳ್ಳಿ ಮಂಡಳ್ಳಿ ಶಾಲಾ ಶಿಕ್ಷಕಿ ಶಾಹಿರಬಾನು, ಶಿಕ್ಷಕ ಗಿರೀಶ್ , ಜೆಸಿ‌ಐ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಆಶಾ ಆರ್ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿದರು. ನಾಗೇಶ ಹಾಲಾಡಿ, ವಿಘ್ನೇಶ ಶೆಣೈ ಹಾಲಾಡಿ ಮತ್ತು ಕಿರಣ್ ಹಾಲಾಡಿ ಸಹಕರಿಸಿದ್ದರು. ಪ್ರದೀಪ ಹಾಲಾಡಿ ಸ್ವಾಗತಿಸಿ, ಅಶೋಕ ಆಚಾರ್ಯ ವಂದಿಸಿದರು

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!