spot_img
Thursday, May 7, 2026
spot_img

ಮೇ 8ರಂದು ಮಹಾರಾಷ್ಟ್ರದ ಫಲಟನ್‍ನಲ್ಲಿ ‘ಅವನಿ ಆರೋಮ ಆಗ್ರೋ ಪ್ರೈವೇಟ್ ಲಿ.,’ ಉದ್ಘಾಟನೆ

ಉಮೇಶ ಶೆಟ್ಟಿ

ಕುಂದಾಪುರ: ಭಾರತೀಯ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿ, ಭಾರತದ ಅತಿದೊಡ್ಡ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಲೆಮನ್ ಗ್ರಾಸ್ ಡಿಸ್ಟಿಲೇಷನ್ ಘಟಕ ಅವನಿ ಆರೋಮ ಆಗ್ರೋ ಪ್ರೈವೇಟ್ ಲಿ.,’ ಮೇ 8ರಂದು ಮಹಾರಾಷ್ಟ್ರದ ಫಲಟನ್‍ನಲ್ಲಿ ಉದ್ಘಾಟನೆಗೊಳ್ಳಲಿದೆ.

ಕುಂದಾಪುರ ತಾಲೂಕು ವಂಡ್ಸೆ ಅಡಿಕೆಕೊಡ್ಲು ಉಮೇಶ ಶೆಟ್ಟಿ ಇಂಥಹದ್ದೊಂದು ಅದ್ಬುತ ಯೋಜನೆ ರೂಪಿಸಿ, ‘ಅವನಿ ಆರೋಮ ಆಗ್ರೋ ಪ್ರೈವೇಟ್ ಲಿ.,’ ಸ್ಥಾಪಿಸಿದ್ದಾರೆ. ಅವರೇ ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಮುನ್ನಡೆಸಲಿದ್ದು, ತುಳಸಿದಾಸ್ ಜ್ಞಾನೇಶ್ವರ್ ಶಿಂದೆ ನಿರ್ದೇಶಕರಾಗಿದ್ದಾರೆ.

ಮೇ 8 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ‘ಅವನಿ ಆರೋಮ ಆಗ್ರೋ ಪ್ರೈವೇಟ್ ಲಿ.,’ ಉದ್ಘಾಟನೆಗೊಳ್ಳಲಿದ್ದು, ಮಹಾರಾಷ್ಟ್ರ ಸರ್ಕಾರದ ಕೃಷಿ ಸಚಿವರಾದ ದತ್ತಾತ್ರೇಯ ವಿಠೋಬಾ ಭರ್ನೆ ಉದ್ಘಾಟನೆ ನೆರವೇರಿಸಲಿದ್ದಾರೆ. ಮಹಾರಾಷ್ಟ್ರ ವಿಧಾನ ಪರಿಷತ್ತಿನ ಅಧ್ಯಕ್ಷರಾದ ರಾಮರಾಜಿ ನಾಯಕ್ ನಿಂಬಾಳ್ಕರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ರಘುನಾಥ ರಾಜೆ ನಾಯಕ್ ನಿಂಬಾಳ್ಕರ್, ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾದ ಶಶಿಕಾಂತ್ ಹಿಂಡೆ, ಜಿಲ್ಲಾ ಪರಿಷತ್ ಅಧ್ಯಕ್ಷರಾದ ಸಂಜೀವರಾಜೆ ನಾಯಕ್ ನಿಂಬಾಳ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಘಟಕದ ವೈಶಿಷ್ಟ್ಯಗಳು:
ದೇಶದ ಬೃಹತ್ ಘಟಕ ಹೊಸ ಹಾಗೂ ಸುಧಾರಿತ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುವ ಭಾರತದ ಅತಿದೊಡ್ಡ ಸಂಸ್ಕರಣ ಕೇಂದ್ರ, ಜಾಗತಿಕ ಮಾರುಕಟ್ಟೆ ಅಮೇರಿಕಾ, ಕೆನಡಾ, ಜಪಾನ್ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ರಪ್ತು ಮಾಡಲು ಅಂತರಾಷ್ಟ್ರೀಯ ಗುಣಮಟ್ಟದ ವಸ್ತುಗಳು, ರೈತರ ಸಬಲೀಕರಣ ಸುಸ್ಥಿರ ಕೃಷಿ ಪದ್ದತಿಯ ಮೂಲಕ ರೈತರ ಆರ್ಥಿಕ ಪ್ರಗತಿಗೆ ಹೊಸ ಆಯಾಮ ನೀಡಲು ಯೋಜಿಸಲಾಗಿದೆ.

ಉತ್ಪನ್ನಗಳ ಬಹುಪಯೋಗಗಳು:
ಸುಗಂಧ ದ್ರವ್ಯಗಳು, ಸೌಂದರ್ಯವರ್ಧಕಗಳು, ಔಷಧೀಯ ಹಾಗೂ ಆರೋಮ ಥೆರಪಿ, ಕೀಟ ನಿಯಂತ್ರಣ ಮತ್ತು ಗೃಹಬಳಕೆಯ ವಸ್ತುಗಳು ಜಾಗತಿಕವಾಗಿ ಬಳಕೆಯಾಗುತ್ತವೆ.

ಇದೊಂದು ಕೃಷಿ ವಲಯದ ಮಹತ್ವಕಾಂಕ್ಷಿ ಹಾಗೂ ಭವಿಷ್ಯದ ಯೋಚನೆ ಹಾಗೂ ಯೋಜನೆಯಾಗಿದೆ. ಕೃಷಿಯಲ್ಲಿ ಮೌಲ್ಯವರ್ಧನೆ ಹಾಗೂ ಸಂಸ್ಕರಣ ಕ್ಷೇತ್ರದಲ್ಲಿ ಮಹತ್ತರವಾದ ಮೈಲಿಗಲ್ಲು ಆಗಲಿದೆ. ಭಾರತೀಯ ಕೃಷಿ ವಲಯ ಜಾಗತಿಕ ಮಟ್ಟಕ್ಕೆ ಬೆಳೆಯಬೇಕು ಎನ್ನುವ ಮಹತ್ವಕಾಂಕ್ಷೆಯೊಂದಿಗೆ ಕೃಷಿಕುಟುಂಬದಿಂದ ಬಂದಿರುವ ಉಮೇಶ ಶೆಟ್ಟಿ ಅವರು ಈ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದಾರೆ. ಮುಂದಿನ ಭವಿಷ್ಯವೇ ಕೃಷಿ ಆದ್ದರಿಂದ ಇದು ಸಹಜವಾಗಿ ಜಾಗತಿಕ ಮಟ್ಟದಲ್ಲಿ ಯಶಸ್ಸು ಗಳಿಸಲಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!