spot_img
Friday, May 22, 2026
spot_img

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕುಂದಾಪುರ ಶಾಖೆ ಉದ್ಘಾಟನೆ | ಸಹಕಾರ ಕ್ಷೇತ್ರ ಜನರ ಬೆಳವಣಿಗೆಯ ಅವಿಭಾಗ್ಯ ಭಾಗ-ಡಾ.ಎಂ.ಎನ್.ರಾಜೇಂದ್ರ ಕುಮಾರ್

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಸಹಕಾರ ಕ್ಷೇತ್ರ ಜನಜೀವನದ ಬೆಳವಣಿಗೆಯ ಭಾಗವಾಗಿ ಜನರ ಅವಶ್ಯಕತೆಗಳನ್ನು ಪೂರೈಸುತ್ತ ಜನಸ್ನೇಹಿಯಾಗಿ ಬೆಳೆದಿವೆ. ಅವಿಭಜಿತ ಜಿಲ್ಲೆಯ ಸಹಕಾರ ಕ್ಷೇತ್ರ ರಾಷ್ಟ್ರಕ್ಕೆ ಇಂದು ಮಾದರಿಯಾಗಿದೆ. ವಾಣಿಜ್ಯ ಬ್ಯಾಂಕುಗಳು ಹುಟ್ಟಿ ಕಣ್ಮರೆಯಾದ ಈ ಜಿಲ್ಲೆಯಲ್ಲಿ ಸಹಕಾರ ಚಳವಳಿ ಜನಜೀವನದ ಭಾಗವಾಗಿ ಬೆಳೆದಿದೆ. ಅದಕ್ಕೊಂದು ಉದಾಹರಣೆ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ. ಜಯಕರ ಶೆಟ್ಟಿ ಇಂದ್ರಾಳಿಯವರು ಈ ಸೊಸೈಟಿಯ ಅಧಿಕಾರ ವಹಿಸಿಕೊಂಡ ಬಳಿಕ ಕ್ರಾಂತಿಕಾರಕ ಬೆಳವಣಿಗೆಯಾಗಿದೆ. ವಾರ್ಷಿಕ 18 ಕೋಟಿ ರೂಪಾಯಿ ಲಾಭ ಗಳಿಸುವ ಮಟ್ಟಿಗೆ ಸೊಸೈಟಿ ಬೆಳೆದಿರುವ ಸಾಧನೆ ಬಹು ದೊಡ್ಡದು ಎಂದು ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಅವರು ಕುಂದಾಪುರ ಮುಖ್ಯರಸ್ತೆಯ ಶ್ರೀ ನಂದಿಕೇಶ್ವರ ಟವರ್ಸ್ ನಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಉಡುಪಿ ಇದರ ನೂತನ ಕುಂದಾಪುರ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

107 ವರ್ಷಗಳ ವಿಶ್ವಾಸಾರ್ಹ ಸೇವೆ ಸಲ್ಲಿಸಿರುವ ಈ ಸೊಸೈಟಿ ಮಾದರಿಯಾಗಿ ಬೆಳೆದಿದೆ. ತನ್ನ ಸೇವೆಯನ್ನು ಕುಂದಾಪುರ ತಾಲೂಕಿಗೂ ವಿಸ್ತರಿಸಿದೆ. ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ ಸದಸ್ಯರು, ಆಡಳಿತ ಮಂಡಳಿಯ ಜೊತೆಗೆ ಮುಖ್ಯವಾಗಿ ಸಿಬ್ಬಂದಿಗಳ ಪಾತ್ರವೂ ಮಹತ್ತರವಾಗಿರುತ್ತದೆ. ಸಿಬ್ಬಂದಿಗಳ ಪ್ರಾಮಾಣಿಕ ದುಡಿಮೆಯನ್ನು ಗಮನಿಸಬೇಕು ಎಂದು ಹೇಳಿದರು.

ಈ ಜಿಲ್ಲೆಯ ವಾಣಿಜ್ಯ ಬ್ಯಾಂಕುಗಳ ತವರು. ಆದರೆ ಇಂದು ಕೆಲವು ವಾಣಿಜ್ಯ ಬ್ಯಾಂಕುಗಳು ಫಲಕಗಳನ್ನು ನೋಡಲು ಸಿಗುವುದಿಲ್ಲ, ವಿಲೀನ ಪ್ರಕ್ರಿಯೆಯಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಇತ್ತ ಸಹಕಾರ ವ್ಯವಸ್ಥೆ ಜನರ ಹತ್ತಿರಕ್ಕೆ ಹೋಗುತ್ತಾ ಬೆಳವಣಿಗೆ ಕಂಡುಕೊಂಡಿತು. ಜನರಿಗೆ ಉತ್ತಮ ಸೇವೆ ನೀಡಿದಾಗ ಜನರು ಆ ಸಂಸ್ಥೆಯನ್ನು ಹುಡುಕಿಕೊಂಡು ಬರುತ್ತಾರೆ. ಹಾಗಾಗಿ ಉತ್ತಮ ಸೇವೆ ಸಹಕಾರ ಸಂಘಗಳ ಮೂಲ ಆಧ್ಯತೆಯಾಗಿದೆ ಎಂದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ಕರಾವಳಿ ಜಿಲ್ಲೆಯಲ್ಲಿ ಸಹಕಾರ ಸಂಘಗಳ ಬೆಳವಣಿಗೆ ರಾಜ್ಯಕ್ಕೆ ಮಾದರಿಯಾಗಿದೆ. ಸಹಕಾರ ಸಂಘಗಳು ಜನಸಾಮಾನ್ಯರಿಗೆ ಅನಿವಾರ್ಯವಾಗಿ ಬಿಟ್ಟಿದೆ. ಜನಸಾಮಾನ್ಯರ ಬದುಕಿನಲ್ಲಿ ಸಹಕಾರ ವ್ಯವಸ್ಥೆ ಅಷ್ಟೊಂದು ಹಾಸುಹೊಕ್ಕಾಗಿದೆ. ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದೆ. ಅದೇ ರೀತಿ ಬಡಗಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಜಯಕರ ಶೆಟ್ಟಿ ಇಂದ್ರಾಳಿಯವರ ಸಾರಥ್ಯದಲ್ಲಿ ಮಹತ್ತರವಾದ ಬೆಳವಣಿಗೆ ಕಂಡಿದೆ ಎಂದು ಹೇಳಿದ ಅವರು, ಕೇಂದ್ರ ಸರಕಾರ ಸಹಕಾರ ವ್ಯವಸ್ಥೆಯ ಬಲವರ್ಧನೆಗೆ ಸಾಕಷ್ಟು ಒತ್ತು ನೀಡಿದೆ. ತ್ರಿಭುವನ್ ವಿಶ್ವವಿದ್ಯಾನಿಯಲದ ಬಳಿಕ ಇನ್ನಷ್ಟು ಬಲಿಷ್ಠವಾಗಲಿದೆ. ಈಗಾಗಲೇ ಪೆಟ್ರೋಲ್ ಬಂಕ್ ಮೊದಲಾದ ವ್ಯವಹಾರ ಸಹಕಾರ ಸಂಘಗಳು ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸಾೈಟಿ ಲಿ. ಉಡುಪಿ ಇದರ ಅಧ್ಯಕ್ಷರಾದ ‘ಸಹಕಾರ ರತ್ನ’ ಜಯಕರ ಶೆಟ್ಟಿ ಇಂದ್ರಾಳಿ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಸ್ಥೆಯಾದ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸಾೈಟಿಯು 107 ವರ್ಷಗಳ ಇತಿಹಾಸವನ್ನು ಹೊಂದಿದೆ. 1982ರ ನಂತರ ಸಂಘವು ಅಭಿವೃದ್ದಿ ಪಥದತ್ತ ಸಾಗುತ್ತಾ ಬಂದಿದೆ. 40 ವರ್ಷಗಳ ಹಿಂದೆ 306 ಸದಸ್ಯರನ್ನು, 4000 ಠೇವಣಿಯನ್ನು ಹೊಂದಿದ ಸಂಸ್ಥೆಯು ಇದೀಗ ದಾಖಲೆಯ ಪ್ರಗತಿಯನ್ನು ಕಂಡಿದೆ, ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ನಮ್ಮ ಸಂಸ್ಥೆಯು ಸದಾ ಮುಂದೆ ಇದೆ. ಸಂಘವು ಪ್ರಸ್ತುತ 23 ಸಾವಿರ ಸದಸ್ಯರನ್ನು ಹೊಂದಿದ್ದು 662 ಕೋಟಿ ಠೇವಣಿ ಹೊಂದಿದೆ. 528 ಕೋಟಿ ಸದಸ್ಯರ ಹೊರಬಾಕಿ ಸಾಲವಿದ್ದು 113 ಕೋಟಿಗೂ ಮಿಕ್ಕಿ ನಿಧಿಗಳನ್ನು ಹೊಂದಿದೆ. 288 ಕೋಟಿಗೂ ಮಿಕ್ಕಿ ಹೂಡಿಕೆ ಮಾಡಲಾಗಿದ್ದು 795 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳದೊಂದಿಗೆ 4ಸಾವಿರ ಕೋಟಿಗೂ ಮಿಕ್ಕಿ ವಾರ್ಷಿಕ ವಹಿವಾಟು ಹೊಂದಿದ್ದು ಕಳೆದ ಆರ್ಥಿಕ ವರ್ಷದಲ್ಲಿ 18 ಕೋಟಿಗೂ ಮಿಕ್ಕಿ ಲಾಭಗಳಿಸಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ‘ಸಹಕಾರ ರತ್ನ’ ಯಶ್‍ಪಾಲ್ ಎ. ಸುವರ್ಣ, ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇದರ ನಿರ್ದೇಶಕರಾದ ಮಹೇಶ್ ಹೆಗ್ಡೆ ಮೊಳಹಳ್ಳಿ, ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಲಾವಣ್ಯ ಕೆ.ಆರ್ ಹಾಗೂ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್ ಜೆ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸಾೈಟಿ ಉಪಾಧ್ಯಕ್ಷರಾದ ಜಾರ್ಜ್ ಸಾಮ್ಯುವೆಲ್, ನಿರ್ದೇಶಕರಾದ ಸಂಜೀವ ಕಾಂಚನ್, ಪರುಷೋತ್ತಮ ಪಿ.ಶೆಟ್ಟಿ, ಎಲ್.ಉಮಾನಾಥ, ಮನೋಹರ ಎಸ್.ಶೆಟ್ಟಿ, ಸಾಧು ಸಾಲ್ಯಾನ್, ಪದ್ಮನಾಭ ಕೆ.ನಾಯಕ್, ಹಾಜಿ ಸಯ್ಯದ್ ಅಬ್ದುಲ್ ರಜಾಕ್, ವಿನಯ್ ಕುಮಾರ್ ಟಿ.ಎ., ಸದಾಶಿವ ನಾೈಕ್, ಶ್ರೀಮತಿ ಜಯ ಶೆಟ್ಟಿ, ಶ್ರೀಮತಿ ಗಾಯತ್ರಿ ಎಸ್.ಭಟ್, ಪ್ರಧಾನ ವ್ಯವಸ್ಥಾಪಕರಾದ ರಾಜೇಶ ವಿ.ಶೇರಿಗಾರ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!