spot_img
Thursday, May 21, 2026
spot_img

ಕೋಟೇಶ್ವರದಲ್ಲಿ ಚಿರಂತನ ಎಜ್ಯುಕೇಶನ್ ಇನ್ಸ್ಟಿಟ್ಯೂಷನ್ ಉದ್ಘಾಟನೆ

ಕುಂದಾಪುರ: ಸಮಾಜದ ಕಟ್ಟ ಕಡೆಯ ಮಗುವಿಗೂ ಕೂಡಾ ಗುಣಮಟ್ಟದ ಶಿಕ್ಷಣ ದೊರೆತಾಗ ದೇಶ ನಿಜವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಬುನಾದಿ ಶಿಕ್ಷಣ ಮಗುವಿನ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೂರ್ವ ಪ್ರಾಥಮಿಕ ಶಿಕ್ಷಣ ಬೋಧಿಸುವ ಶಿಕ್ಷಕರಿಗೆ ಪರಿಣಾಮಕಾರಿಯಾದ ತರಬೇತಿ ಅತ್ಯಗತ್ಯ. ಉತ್ತಮ ಶಿಕ್ಷಕರನ್ನು ಸಿದ್ಧಪಡಿಸುವ ಕೆಲಸ ಆಗಬೇಕಾಗಿದೆ. ಆ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ಚಿರಂತರ ಸಂಸ್ಥೆ ಶೈಕ್ಷಣಿಕ ದಿಕ್ಕಿನಲ್ಲಿ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರು, ಮಾಜಿ ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

ಮೇ 21ರಂದು ಕೋಟೇಶ್ವರದ ಯುವ ಮೆರಿಡಿಯನ್ ಹತ್ತಿರ ಲೋಟಸ್ ಎಡ್ಜ್‌ನಲ್ಲಿ ಆರಂಭಗೊಂಡ ಚಿರಂತನ ಎಜ್ಯುಕೇಶನ್ ಇನ್ಸ್ಟಿಟ್ಯೂಷನ್ ಉದ್ಘಾಟಿಸಿ ಮಾತನಾಡಿದರು.

ಡಾ.ಚಿಂತನ ರಾಜೇಶ ಅವರ ಕುಟುಂಬವೇ ಶಿಕ್ಷಣ ಕ್ಷೇತ್ರದಲ್ಲಿ ತೊಡಿಸಿಕೊಂಡಿದೆ. ವಿದ್ಯಾದಾನದ ವಿಷಯದಲ್ಲಿ ಅವರ ಕುಟುಂಬ ಮಹತ್ತರವಾದ ಪಾತ್ರ ವಹಿಸಿದೆ. ಚಿಂತನಾ ರಾಜೇಶ ಅವರು ಮಕ್ಕಳ ಮನೋ ವಿಜ್ಞಾನ ವಿಷಯದಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಪಿ‌ಎಚ್‌ಡಿ ಮಾಡಿದ್ದಾರೆ. ಇದು ಬಹಳ ಅಧ್ಯಯನ ಹಾಗೂ ಕ್ಲಿಷ್ಟಕರವಾದುದು. ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಾವ ರೀತಿ ಬೋಧಿಸಬೇಕು ಎನ್ನುವ ಅಮೂಲ್ಯ ಜ್ಞಾನವನ್ನು ಅವರು ಹಂಚಿಕೊಳ್ಳಲು ಈ ಸಂಸ್ಥೆಯನ್ನು ರೂಪಿಸಿದ್ದಾರೆ ಎಂದರು.

ನೂತನ ಶಿಕ್ಷಕರ ತರಬೇತಿ ಕೇಂದ್ರವನ್ನು ಪ್ರಥಮ ದರ್ಜೆ ಗುತ್ತಿಗೆದಾರರಾದ ಮೊಳಹಳ್ಳಿ ಕಮಲಕಿಶೋರ್ ಹೆಗ್ಡೆ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಾನಸಿಕ ತಜ್ಞ ಡಾ. ಪ್ರಕಾಶ್ ತೊಳಾರ್ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿನ ಕಲಿಕಾ ನ್ಯೂನತೆಗಳನ್ನು ಆರಂಭದಲ್ಲೇ ಗುರುತಿಸಿ, ಪರಿಹಾರ ಕ್ರಮ ಕಂಡುಕೊಳ್ಳಬೇಕು. ಪೋಷಕರು ತಮ್ಮ ಒತ್ತಡಗಳನ್ನು ಮಕ್ಕಳ ಮೇಲೆ ಹೇರದೆ ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸಬೇಕು. ಇವತ್ತಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮಕ್ಕಳು ಹಾದಿ ತಪ್ಪುತ್ತಿದ್ದು, ಮನೆಯಲ್ಲಿ ಕಡ್ಡಾಯವಾಗಿ ‘ಮೊಬೈಲ್‌ರಹಿತ ಸಮಯ’ವನ್ನು ಪಾಲಿಸಬೇಕು. ಇದನ್ನು ತಂದೆ ತಾಯಿಗಳು ಕೂಡಾ ಪಾಲಿಸುವ ಮೂಲಕ ಮಕ್ಕಳಲ್ಲಿ ಪರಿವರ್ತನೆ ಕಾಣಬಹುದು. ಜೊತೆಯಲ್ಲಿ ಮಾದಕ ವ್ಯಸನದ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿಯಾಗಿದ್ದು ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಬೇಕು ಎಂದರು.

ಸಂಸ್ಥೆಯ ನಿರ್ದೇಶಕಿ ಡಾ.ಚಿಂತನ ರಾಜೇಶ ಮಾತನಾಡಿ, ಒಳ್ಳೆಯ ಶಿಕ್ಷಕರ ತರಬೇತಿಯ ಬೇಡಿಕೆ ದಿನೇ ದಿನೇ ಕಾಣುತ್ತಿದ್ದೇವೆ. ಹಾಗೆಯೇ ಆಧುನಿಕ ಬದುಕಿಗೆ ಬೇಕಾಗಿರುವ ಸಮಗ್ರ ಶಿಕ್ಷಣದ ಅಗತ್ಯತೆ ಕೂಡ. ಎಲ್ಲಾ ಶಿಕ್ಷಣದ ಮೂಲ ಒಂದು ಉತ್ತಮ ಫೌಂಡೇಷನ್ ಸ್ಕೂಲ್ ಅವಶ್ಯಕತೆ. ಮಗುವಿನ ಶೈಕ್ಷಣಿಕ ಬದುಕಿಗೆ, ಜೀವನಕ್ಕೆ ಒಂದು ತಳಪಾಯ ಆಗುವಂತಹ ವೈಜ್ಞಾನಿಕ ತತ್ತ್ವಗಳನ್ನು ಅಳವಡಿಸಿಕೊಂಡು ಪರಿಣಾಮಕಾರಿ ಬುನಾದಿ ಶಿಕ್ಷಣ ನೀಡುವ ಸಂಸ್ಥೆ ಅವಶ್ಯತೆ ಇದೆ. ಹಾಗೆಯೇ ಪ್ರಸ್ತುತ ಮಕ್ಕಳ ಹಾಗೂ ಹದಿಹರೆಯರವರ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಅದರ ಪರಿಹಾರೋಪಾಯವನ್ನು ಕಂಡುಕೊಳ್ಳಬೇಕಾಗಿದೆ. ಈ ಮೂರು ಮಹತ್ವದ ಅಂಶಗಳನ್ನು ಒಂದೇ ಸೂರಿನ ಅಡಿಯಲ್ಲಿ ಪರಿಹಾರ ಪಡೆಯಬೇಕು ಎನ್ನುವ ನೆಲೆಯಲ್ಲಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಪ್ರಾರಂಭಿಸಲಾಗಿದೆ.

ಚಿರಾ ಶೆಟ್ಟಿ ಸ್ವಾಗತಿಸಿ, ಪ್ರಾಂಶುಪಾಲೆ ವಿನುತಾ ಬಿ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!