spot_img
Thursday, May 21, 2026
spot_img

ಪಂಚ ಗ್ಯಾರಂಟಿ ಯೋಜನೆಯಿಂದ ಕುಂದಾಪುರ ತಾಲೂಕಿಗೆ 575 ಕೋಟಿ ರೂಪಾಯಿ-ಹೆಚ್.ಹರಿಪ್ರಸಾದ್ ಶೆಟ್ಟಿ

ಕುಂದಾಪುರ: ಕರ್ನಾಟಕದಲ್ಲಿ ಮೂರು ವರ್ಷಗಳಿಂದ ಯಶಸ್ವಿಯಾಗಿ ಅನುಷ್ಟಾನವಾಗುತ್ತಿರುವ ಪಂಚಗ್ಯಾರಂಟಿ ಯೋಜನೆ ಇವತ್ತು ದೇಶದ ಬೇರೆ ಬೇರೆ ರಾಜ್ಯಗಳು ಅನುಸರಿಸುತ್ತಿವೆ. ಆರ್ಥಿಕ ಪ್ರಭಲರ ವಿರೋಧದ ನಡುವೆಯೂ ಆರ್ಥಿಕ ತಜ್ಞರಾದ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಯೋಜನೆಯನ್ನು ಮಾದರಿಯಾಗಿ ಮುನ್ನೆಡೆಸುತ್ತಿದ್ದಾರೆ. ಗಿನ್ನಿಸ್ ದಾಖಲೆಗೂ ಪಾತ್ರವಾದ ಪಂಚಗ್ಯಾರಂಟಿ ಯೋಜನೆಯಿಂದ ಒಂದು ಲಕ್ಷ ಕೋಟಿ ರೂಪಾಯಿ ರಾಜ್ಯದ ಜನತೆಗೆ ತಲುಪಿದೆ. ಕುಂದಾಪುರ ತಾಲೂಕಿಗೇ ಈ ತನಕ 575 ಕೋಟಿ ರೂಪಾಯಿ ದೊರಕಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಪ್ರಗತಿಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೃಹಲಕ್ಷ್ಮೀ ಯೋಜನೆಯಡಿ ಇಲ್ಲಿಯ ವರೆಗೆ ರೂ. 2,87,24,44,000, ಗೃಹಜ್ಯೋತಿ ಯೋಜನೆಯಡಿ ಎಪ್ರಿಲ್ ತಿಂಗಳಲ್ಲಿ 45717683, ಒಟ್ಟು ಇಲ್ಲಿಯ ತನಕ 1,37,08,95,822, ಅನ್ನಭಾಗ್ಯ ಯೋಜನೆಯಡಿ ಎಪ್ರಿಲ್ ತಿಂಗಳಲ್ಲಿ 5,86,60,280, ಒಟ್ಟು ಇಲ್ಲಿಯ ತನಕ 63,73,39,224, ಯುವನಿಧಿ ಯೋಜನೆಯಡಿ ಇಲ್ಲಿಯ ತನಕ ರೂ.3,23,25,000, ಶಕ್ತಿ ಯೋಜನೆಯಡಿ ಎಪ್ರಿಲ್ ತಿಂಗಳಲ್ಲಿ 795645 ಜನ ಪ್ರಯಾಣ ಮಾಡಿದ್ದು, ರೂ.3,28,52,471 ಇಲ್ಲಿಯ ತನಕ ರೂ.82,96,02,211, ಪಂಚಗ್ಯಾರಂಟಿ ಯೋಜನೆಯಲ್ಲಿ ಎಪ್ರಿಲ್ ಅಂತ್ಯಕ್ಕೆ ರೂ.13,72,30,434, ಒಟ್ಟು ಇಲ್ಲಿಯ ವರೆಗೆ 5,74,26,06,257 ಕುಂದಾಪುರ ತಾಲೂಕಿಗೆ ದೊರಕಿದೆ ಎಂದರು.

ಯುವನಿಧಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಗ್ಯಾರಂಟಿ ಸಮಿತಿ ಸದಸ್ಯರಾದ ಮಂಜು ಕೊಠಾರಿ ಹೇಳಿದರು. ಸದಸ್ಯರಾದ ಗಣೇಶ ಕುಂಭಾಶಿ ಮಾತನಾಡಿ, ಕೊರಗ ಸಮುದಾಯದ ವಿದ್ಯಾವಂತ ಯುವಜನತೆಗೆ ನಿರುದ್ಯೋಗ ಭತ್ಯೆ ಸಿಗುತ್ತಿದ್ದು ಆ ಫಲಾನುಭವಿಗಳಿಗೆ ಈಗ ಯುವ ನಿಧಿ ಸಿಗುತ್ತದೆಯೇ? ಎರಡು ಯೋಜನೆಗಳು ಒಬ್ಬ ಫಲಾನುಭವಿಗೆ ಮೂರು ವರ್ಷ ದೊರೆತರೆ ಮತ್ತೆ ಅವರು ಉದ್ಯೋಗಕ್ಕೆ ಇಳಿಯಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಬಹುದು ಎಂದರು.

ಗೃಹಲಕ್ಷ್ಮೀ ಯೋಜನೆಯಡಿ ಬ್ಯಾಂಕ್ ಖಾತೆಗೆ ಆಧಾರ್ ಮ್ಯಾಪಿಂಗ್ ಬಾಕಿ ಮತ್ತು 03 ಐ.ಟಿ, ಜಿ.ಎಸ್.ಟಿ ಪಾವತಿದಾರರು 1111. ತಿಂಗಳಲ್ಲಿ ಹೊಸ ನೋಂದವಣಿ 12, ಹಣಪಾವತಿಗೆ ಬಾಕಿ 5394 ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರೇಖಾ ತಿಳಿಸಿದರು. ಕರ್ನಾಟಕ ಒನ್ ಸೇವಾಕೇಂದ್ರದಲ್ಲಿ ಮ್ಯಾಪಿಂಗ್ ಇತ್ಯಾದಿಗಳನ್ನು ಮಾಡಿಸಿಕೊಳ್ಳಬಹುದು ಎಂದು ತಿಳಿಸಲಾಯಿತು.

ಉಡುಪಿಯಿಂದ ಕೆಳಸುಂಕಕ್ಕೆ ಕ್ರಮವತ್ತಾಗಿ ಬಸ್ಸನ್ನು ಕಾರ್ಯಚರಿಸುವಂತೆ ಉಡುಪಿ ಘಟಕ ವ್ಯವಸ್ಥಾಪಕರಿಗೆ ತಿಳಿಸಲಾಗಿದೆ. ಗಂಗೊಳ್ಳಿ-ಕುಂದಾಪುರ ಟ್ರಿಪ್ ಚಾಲನಾ ಸಿಬ್ಬಂದಿಗಳಿಗೆ ಬಿಡುವಿಲ್ಲದ ಸಮಯ ಆಗುತ್ತಿರುವುದರಿಂದ ಮತ್ತು ಅಗತ್ಯ ಅಲ್ಲದ ಟ್ರಿಪ್ಪು ಆಗುತ್ತಿರುವುದರಿಂದ ಪ್ರಸ್ತುತ ಕಾರ್ಯಚರಿಸುತ್ತಿಲ್ಲ ಎಂದು ಕೆ.ಎಸ್.ಆರ್.ಟಿ.ಸಿ ಕುಂದಾಪುರ ವಿಭಾಗದ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಗಣೇಶ ಕುಂಭಾಶಿ ಅವರು ಅಗತ್ಯ ಅಲ್ಲದ ಟ್ರಿಪ್ಪು ಎಂದು ಯಾವ ಮಾನದಂಡದಿಂದ ಹೇಳುತ್ತಿರಿ ? ಎಂದು ಪ್ರಶ್ನಿಸಿದರು. ಸದಸ್ಯ ಜಹೀರ್ ಆಹಮ್ಮದ್ ಮಾತನಾಡಿ, ಗಂಗೊಳ್ಳಿಯಿಂದ ಕುಂದಾಪುರ ಬೆಳಿಗ್ಗೆ 6 ಗಂಟೆಗೆ ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ಕುಂದಾಪುರಕ್ಕೆ ತೆರಳುತ್ತಾರೆ. ಬಸ್ಸು ರಾತ್ರಿ ಬಂದು ನಿಂತಿರುವುದರಿಂದ ಬೆಳಿಗ್ಗೆ ಒಂದು ಟ್ರಿಪ್ಪು ಮಾಡಬಹುದು ಎಂದರು.

ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಮಾತನಾಡಿ, ಒಂದಷ್ಟು ಸಮಯ ಬಸ್ ಕಾರ್ಯಚರಿಸಲಿ, ಪ್ರಯಾಣಿಕರ ಪ್ರತಿಕ್ರಿಯೆ ಗೊತ್ತಾಗುತ್ತದೆ ಎಂದರು. ಗಂಗೊಳ್ಳಿ-ಬೈಂದೂರು ಬಸ್ ಸಂಚಾರ ಶೀಘ್ರ ಆಗಲಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಜಹೀರ್ ಆಹಮ್ಮದ್ ಹೇಳಿದರು.

ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ವಿತರಣೆಗೆ ಸರ್ವರ್ ಸಮಸ್ಯೆಯಾಗುತ್ತಿದ್ದು, ಸಂಜೆ ಆರು ಗಂಟೆಯ ತನಕವಾದರೂ ಅಕ್ಕಿ ವಿತರಣೆಗೆ ನ್ಯಾಯಬೆಲೆ ಅಂಗಡಿಗಳಿಗೆ ಸೂಚನೆ ನೀಡಬೇಕು ಎಂದು ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಅಧಿಕಾರಿಗಳಿಗೆ ತಿಳಿಸಿದರು.
ಅನ್ನಭಾಗ್ಯ ಅಕ್ಕಿ ಮಾರಾಟ, ಬ್ರೋಕರ್ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಜಹೀರ್ ಆಹಮ್ಮದ್ ತಿಳಿಸಿದರು.

ಅಭಿಜಿತ್ ಪೂಜಾರಿ ಮಾತನಾಡಿ ಸರಕಾರದ ವಸತಿ ಯೋಜನೆಯಡಿ ಮನೆ ಪಡೆದವರಿಗೆ ವಿದ್ಯುತ್ ಸಂಪರ್ಕ ಸಮಸ್ಯೆಯಾಗುತ್ತಿದೆ. ಇ ಖಾತಾ, ಭೂ ಪರಿವರ್ತನೆಯನ್ನು ಅಪೇಕ್ಷಿಸುತ್ತಿದ್ದು ಡೋರ್ ನಂಬರ್ ಸಿಗದೆ ವಿದ್ಯುತ್ ಸಂಪರ್ಕ ಕಷ್ಟವಾಗುತ್ತಿದೆ. ಆದ್ದರಿಂದ ಮ್ಯಾನುವಲ್ ಎನ್.ಓ.ಸಿ ಕೊಡುವಂತೆ ಆಗ್ರಹಿಸಿದರು. ಸದಸ್ಯ ಚಂದ್ರ ಕಾಂಚನ್ ಮಾತನಾಡಿ, ಹಾಲಾಡಿ ಭಾಗದಲ್ಲಿ ವಿದ್ಯುತ್ ತಂತಿಯ ಮೇಲೆ ಅಪಾಯಕಾರಿ ಮರದ ಗೆಲ್ಲುಗಳಿದ್ದು ಅದನ್ನು ತೆರವುಗೊಳಿಸಬೇಕು ಎಂದರು. ಮೊಳಹಳ್ಳಿ ಭಾಗದಲ್ಲಿಯೂ ವಿದ್ಯುತ್ ತಂತಿಗೆ ತೊಡಕ್ಕಾಗಿರುವ ಮರದ ಗೆಲ್ಲುಗಳನ್ನು ತೆರವು ಮಾಡಬೇಕು ಎಂದು ಸದಸ್ಯೆ ವಾಣಿ ಆರ್.ಶೆಟ್ಟಿ ಹೇಳಿದರು.

ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಮಾತನಾಡಿ, ಅರಣ್ಯ ಇಲಾಖೆ ಸಮನ್ವಯತೆ ಕೊರತೆಯಿಂದ ಮರದ ಗೆಲ್ಲುಗಳನ್ನು ತೆರವು ಕಷ್ಟವಾಗುತ್ತಿದೆ. ಈಗ ಮಳೆಗಾಲ ಹತ್ತಿರವಾಗುತ್ತಿರುವುದರಿಂದ ವಿದ್ಯುತ್ ತಂತಿಯ ಮೇಲ್ಗಡೆ ಇರುವ ಗೆಲ್ಲುಗಳನ್ನು ತೆಗೆಯಬೇಕಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಮೆಸ್ಕಾಂ ಜೊತೆ ಸಮನ್ವಯತೆ ಸಾಧಿಸಬೇಕು ಎಂದರು.

ಸದಸ್ಯ ಮಂಜು ಕೊಠಾರಿ ಮಾತನಾಡಿ, ಮೆಸ್ಕಾಂ ಅಧಿಕಾರಿಗಳು ಗ್ರಾಮ ಪಂಚಾಯತ್, ಸಾರ್ವಜನಿಕರ ಸಹಕಾರ ಪಡೆದುಕೊಂಡು ವಿದ್ಯುತ್ ಲೈನ್ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕರ ವಿಶ್ವಾಸ ಹಾಗೂ ಸಹಕಾರ ಪಡೆದುಕೊಳ್ಳಬೇಕು ಎಂದರು. ಚಂದ್ರ ಕಾಂಚನ್ ಮಾತನಾಡಿ ರಸ್ತೆಗೆ ತಾಗಿಯೇ ವಿದ್ಯುತ್ ಕಂಬ ನಿಲ್ಲಿಸುವುದನ್ನು ನಿಯಂತ್ರಿಸಬೇಕು, ಇದರಿಂದ ಅಪಘಾತ ಸಂಭವಿಸುತ್ತದೆ ಎಂದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ ಕೆ.ಜಿ ಸ್ವಾಗತಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!