spot_img
Wednesday, May 20, 2026
spot_img

ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

ಕುಂದಾಪುರ: ಅಂಪಾರು ಗ್ರಾಮದ ಬಲಾಡಿ ಕಲ್‌ತ್ತೋಡ್ಮಿಮನೆ ಕುಟುಂಬಸ್ಥರು ವರ್ತೆ ಪಂಜುರ್ಲಿ ಹಾಗೂ ಸಪರಿವಾರ ದೈವಸ್ಥಾನಗಳಿಗೆ ಮೂರನೇ ವರ್ಷದ ವರ್ಧಂತ್ಯೋತ್ಸವ ಪ್ರಯುಕ್ತ ಶ್ರೀ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಗೋಳಿಗರಡಿ ಇವರಿಂದ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದ್ದರು.

ಈ ಸಂದರ್ಭ ಯಕ್ಷರಂಗದಲ್ಲಿ ಸುದೀರ್ಘ 50 ವರ್ಷಕ್ಕೂ ಮೇಲ್ಪಟ್ಟು ಕಲಾ ಸೇವೆಗೈದ ಹಿರಿಯ ಯಕ್ಷಗಾನ ಕಲಾವಿದರಾದ ಜಮದಗ್ನಿ ಶೀನ ನಾಯ್ಕ ಹಾಗೂ ಬೇಲ್ತೂರು ರಮೇಶ್ ಅವರನ್ನು ಸನ್ಮಾನಿಸಲಾಯಿತು.

ಬಲಾಡಿಯ ಶ್ರೀ ಸ್ವಾಮಿಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ಪ್ರಭಾಕರ ಶೆಟ್ಟಿ, ಮೇಳದ ಯಜಮಾನರಾದ ವಿಠಲ ಪೂಜಾರಿ, ವರ್ತೆ ಪಂಜುರ್ಲಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಂಕರ ಎಸ್ ಕಾಂಚನ್, ಸದಸ್ಯರಾದ ಕೇಶವ ಕಾಂಚನ್, ಮಂಜುನಾಥ ಗುಡ್ರಿ, ವಿಜಯ್ ಕಾಂಚನ್, ರಾಘವೇಂದ್ರ ನೆಂಪು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸನ್ಮಾನಿತರನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!