spot_img
Tuesday, May 19, 2026
spot_img

ರೂ.3 ಕೋಟಿ ನೀಡಿ ಬಾರಕೂರು ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರಅಧ್ಯಯನ ಕೇಂದ್ರಕ್ಕೆ ರಚನೆಗೆ ಕಾರಣರಾದ ಬಾರಕೂರು ದೊಡ್ಮನೆ ಸುಧಾಕರ ಶೆಟ್ಟಿ ನಿಧನ

ಬ್ರಹ್ಮಾವರ: ಬಾರಕೂರು ದೊಡ್ಮನೆ ಸುಧಾಕರ ಶೆಟ್ಟಿ ( 83) ಮುಂಬಾಯಿ ನಿವಾಸಿ, ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಮುಂಬಯಿಯಲ್ಲಿ ನಿಧನರಾದರು.

ಮುಂಬಯಿಯಲ್ಲಿ ವಸುಧ ಕೆಮಿಕಲ್ಸ್ ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿ ಹಲವಾರು ಮಂದಿಗೆ ಉದ್ಯೋಗ ಕಲ್ಪಿಸಿ, ಸ್ವಂತ ಊರು ಬಾರಕೂರಿನಲ್ಲಿ 28 ವರ್ಷದ ಹಿಂದೆ ತಮ್ಮ ತಾಯಿ ಹೆಸರಿನಲ್ಲಿ ಬಾರಕೂರು ಶ್ರೀಮತಿ ರುಕ್ಮೀಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರಅಧ್ಯಯನ ಕೇಂದ್ರವನ್ನು ನಿರ್ಮಿಸಿ ಗ್ರಾಮೀಣ ಭಾಗದ ಸಹಸ್ರಾರು ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಕಾರಿ ಯಾಗಲು 3 ಕೋಟಿಯಷ್ಟು ಹಣವನ್ನು ವ್ಯಯಮಾಡಿ ಶೈಕ್ಷಣಿಕ ವ್ಯವಸ್ಥೆಗೆ ಸಹಕಾರಿಯಾಗಿದ್ದರು. ಮತ್ತು ಅವರು ಕಲಿತ ಹೇರಾಡಿಯ ನ್ಯಾಷನಲ್ ಖಾಸಗಿ ಹಿರೀಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶಾಲಾ ಬ್ಯಾಗ್, ಶೂ, ಛತ್ರಿ ಇನ್ನಿತರ ಕಲಿಕಾ ಮತ್ತು ಕ್ರೀಡಾ ಸಾಮಗ್ರಿಗಳನ್ನು ನೀಡಿ ಇಂದಿಗೂ ಪ್ರಾಥಮಿಕ ಶಾಲೆಯ ಉಳಿವು ಮತ್ತು ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದ್ದರು.
ಬಾರಕೂರಿನಲ್ಲಿ ಕೊಂಕಣ ರೈಲು ನಿಲ್ದಾಣ ಮತ್ತು ಮುಂಬಾಯಿಯ ಮತ್ಸಗಂಧ ರೈಲು ನಿಲುಗಡೆ ಬಾರಕೂರಿನಲ್ಲಿ ಆಗಲು ಕೂಡಾ ತುಂಭಾ ಶ್ರಮ ಮತ್ತು ಪ್ರಭಾವ ಬೀರಿದ್ದರು.

ಸುಧಾಕರ ಶೆಟ್ಟಿಯವರ ನಿಧನದ ಪ್ರಯುಕ್ತ ಸೋಮವಾರ ಬಾರಕೂರು ಪದವಿ ಕಾಲೇಜಿಗೆ ರಜೆ ಸಾರಲಾಗಿತ್ತು. ಮಾಜಿ ಸಂಸದ ಕೆ ಜಯಪ್ರಕಾಶ್ ಹೆಗ್ಡೆ, ಹಾಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಹಾಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಾರಕೂರು ನ್ಯಾಷನಲ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಾರಕೂರು ಶಾಂತಾರಾಮ ಶೆಟ್ಟಿ, ಕಾಲೇಜಿನ ಪ್ರಿನ್ಸಿಪಾಲ್ ಡಾ, ಭಾಸ್ಕರ್ ಶೆಟ್ಟಿ ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!