spot_img
Monday, May 18, 2026
spot_img

ಕೋಟೇಶ್ವರದಲ್ಲಿ ಮೇ 21ರಂದು ಚಿರಂತನ ಎಜ್ಯುಕೇಶನ್ ಇನ್ಸ್ಟಿಟ್ಯೂಷನ್ ಉದ್ಘಾಟನೆ

ಶಿಕ್ಷಕರ ತರಬೇತಿ, ಪ್ರಿಮ್ ರೋಸ್ ಫೌಂಡೇಶನ್ ಸ್ಕೂಲ್, ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನ ಕೇಂದ್ರ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಉತ್ತಮ ಶಿಕ್ಷಕರು ಸಮಾಜದ ಬಹುದೊಡ್ಡ ಅವಶ್ಯಕತೆ. ಒಳ್ಳೆಯ ಶಿಕ್ಷಕರ ತರಬೇತಿಯ ಅವಶ್ಯಕತೆ ದಿನೇ ದಿನೇ ಹೆಚ್ಚುತ್ತಿದೆ. ಎರಡನೆಯದಾಗಿ, ಆಧುನಿಕ ಬದುಕಿಗೆ ಬೇಕಾಗಿರುವ ಸಮಗ್ರ ಶಿಕ್ಷಣದ ಅಗತ್ಯತೆ ಕೂಡ ಹೆಚ್ಚುತ್ತಿದೆ. ಜೊತೆಗೆ ಎಲ್ಲಾ ಶಿಕ್ಷಣದ ಮೂಲ ಒಂದು ಉತ್ತಮ ಫೌಂಡೇಷನ್ ಸ್ಕೂಲ್. ಮಗುವಿನ ಶೈಕ್ಷಣಿಕ ಬದುಕಿಗೆ, ಜೀವನಕ್ಕೆ ಒಂದು ತಳಪಾಯ ಆಗುವಂತಹ ವೈಜ್ಞಾನಿಕ ತತ್ತ್ವಗಳನ್ನು ಅಳವಡಿಸಿಕೊಂಡು ಪರಿಣಾಮಕಾರಿ ಬುನಾದಿ ಶಿಕ್ಷಣ ನೀಡುವ ಸಂಸ್ಥೆ ಹಾಗೂ ಮಕ್ಕಳ ಹಾಗೂ ಹದಿಹರೆಯರವರ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಅದರ ಪರಿಹಾರೋಪಾಯ. ಈ ಮೂರು ಮಹತ್ವದ ಅಂಶಗಳನ್ನು ಒಂದೇ ಸೂರಿನ ಅಡಿಯಲ್ಲಿ ಪರಿಹಾರ ಪಡೆಯಬೇಕು ಎನ್ನುವ ನೆಲೆಯಲ್ಲಿ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಪ್ರಾರಂಭಿಸುವ ಕನಸು ನಮ್ಮದಾಗಿದ್ದು ಇದೇ ಮೇ 21ರಂದು ಕೋಟೇಶ್ವರದ ಯುವ ಮೆರಿಡಿಯನ್ ಹತ್ತಿರ ಲೋಟಸ್ ಎಡ್ಜ್ ಚಿರಂತನ ಎಜ್ಯುಕೇಶನ್ ಇನ್ಸ್ಟಿಟ್ಯೂಷನ್ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ನಿರ್ದೇಶಕಿ ಡಾ.ಚಿಂತನ ರಾಜೇಶ ಹೇಳಿದರು.

ಅವರು ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸುಲೋಚನ ಸರ್ವೋತ್ತಮ ಎಜ್ಯುಕೇಶನ್ ಟ್ರಸ್ಟ್ ಅಧೀನದಲ್ಲಿ ಚಿರಂತನ ಎಜ್ಯುಕೇಶನ್ ಇನ್ಸ್ಟಿಟ್ಯೂಷನ್ ಕಾರ್ಯನಿರ್ವಹಿಸಲಿದೆ. ಮೇ.21ರ ಬೆಳಿಗ್ಗೆ 10 ಗಂಟೆಗೆ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರು, ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ.ಎಂ. ಸುಕುಮಾರ್ ಶೆಟ್ಟಿಯವರು ಉದ್ಘಾಟನೆ ನೆರವೇರಿಸಲಿದ್ದಾರೆ. ಕುಂದಾಪುರದ ಶ್ರೀಮಾತಾ ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥರಾದ ಡಾ. ಪ್ರಕಾಶ್ ತೋಳಾರ್, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಉದ್ಯಮಿಗಳಾದ ಕಮಲ ಕಿಶೋರ್ ಹೆಗ್ಡೆ ಮೊಳಹಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಚಿರಂತನ ಎಜ್ಯುಕೇಶನ್ ಇನ್ಸ್ಟಿಟ್ಯೂಷನ್ ಕಾರ್ಯವೈಖರಿ ಬಗ್ಗೆ ವಿವರಿಸಿದ ಅವರು, ಫೌಂಡೇಶನ್ ಶಾಲೆ (ಪ್ರೀ ಸ್ಕೂಲ್) ಇದು ಮಗುವಿನ ಬದುಕಿನ ಆರಂಭದ 2000 ದಿನಗಳ ಬೌದ್ಧಿಕ, ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಗೆ ಪೂರಕವಾಗಿ, ವೈಜ್ಞಾನಿಕವಾಗಿ ಸಿದ್ದಗೊಂಡ ಕಲಿಕಾ ಮಾದರಿಯ ಶಿಕ್ಷಣ ವನ್ನು ಇಲ್ಲಿ ನೀಡಲಾಗುವುದು. ಇದಕ್ಕಾಗಿ ಮಗುಸ್ನೇಹಿ ವಿಶಿಷ್ಟ ಕ್ಯಾಂಪಸ್ ಸಜ್ಜಾಗಿದೆ ಎಂದರು.

ಎರಡನೆಯದಾಗಿ, ಫೌಂಡೇಶನ್ ಹಂತದಲ್ಲಿ ಬೋಧಿಸುವ ಶಿಕ್ಷಕರನ್ನು ರೂಪುಗೊಳಿಸುವ ಪ್ರೀ ಸ್ಕೂಲ್ ಟೀಚರ್ಸ್ ಟ್ರೇನಿಂಗ್ ಕೋರ್ಸ್‍ಗಳನ್ನು ಇಲ್ಲಿ ನೀಡಲಾಗುತ್ತಿದೆ ಪಿಯುಸಿ/ ಡಿಗ್ರಿ ಆದ ಆಸಕ್ತ ಅಭ್ಯರ್ಥಿಗಳಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡಿ ಅತಿ ಹೆಚ್ಚಿನ ಕೌಶಲ್ಯದ ಜೊತೆಗೆ ಶಿಕ್ಷಣ ಕ್ಷೇತ್ರಕ್ಕೆ ಕಳುಹಿಸಬೇಕೆಂಬ ಪ್ರಯತ್ನ ನಮ್ಮದು. ಈ ವರ್ಷದಿಂದ ಎಸ್.ಎಸ್.ಎಲ್.ಸಿ ಆದವರಿಗೂ ಕೂಡ ಈ ಅವಕಾಶ ಲಭ್ಯವಿದೆ. ಇಲ್ಲಿ 100% ಸಾಧ್ಯತೆಗಳಿದ್ದು, ಈಗಾಗಲೇ ಮೂರನೇ ವರ್ಷದ ದಾಖಲಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಇದೆ. ಎರಡು ಬ್ಯಾಚ್‍ಗಳು ತರಬೇತಿ ಪೂರ್ಣಗೊಳಿಸಿ ಉದ್ಯೋಗವನ್ನು ಪಡೆದಿದ್ದಾರೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಹಾಗೂ ಇನ್ನೂ ಉದ್ಯೋಗ ಪಡೆಯ ಬೇಕಾದವರಿಗೆ ಪ್ರತ್ಯೇಕ ತರಬೇತಿ ವ್ಯವಸ್ಥೆ ಇರುತ್ತದೆ. ಅಧಿಕೃತ ಪ್ರಮಾಣಪತ್ರವನ್ನು ಇಲ್ಲಿ ನೀಡಲಾಗುವುದು ಎಂದರು.

ಜೊತೆಗೆ ನಮ್ಮ ಚಿರಂತನ ಸಂಸ್ಥೆ ಶಿಕ್ಷಕರ ಕೌಶಲ್ಯ ಅಭಿವೃದ್ಧಿ ಕೇಂದ್ರ ಕೂಡ ಆಗಿ ಕೆಲಸ ನಿರ್ವಹಿಸಲಿದೆ. ವಿವಿಧ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರರಿಗೆ ಪುನಶ್ವೇತನ ಕಾರ್ಯಕ್ರಮಗಳನ್ನು ಕೂಡ ನಾವು ಆಯೋಜಿಸುತ್ತೇವೆ ಎಂದರು.

ಮೂರನೇದಾಗಿ ಇದು ಮಕ್ಕಳ ಹಾಗೂ ಹದಿಹರೆಯದವರ ಮಾರ್ಗದರ್ಶನ ಕೇಂದ್ರ. ಇಂದಿನ ಅವಶ್ಯಕತೆಗೆ ಅನುಗುಣವಾಗಿ ಮಕ್ಕಳ ಹಾಗೂ ಹದಿಹರೆಯದವರಿಗಾಗಿ (ಮುಖ್ಯವಾಗಿ ಶಾಲಾ ಹಂತದಲ್ಲಿ) ವಿಶೇಷ ಆಪ್ತ ಸಮಾಲೋಚನೆ ಹಾಗೂ ವೃತ್ತಿಪರ ಮಾರ್ಗದರ್ಶನ ಕೇಂದ್ರವಾಗಿ ಈ ಸಂಸ್ಥೆ ಕಾರ್ಯ ನಿರ್ವಹಿಸಲಿದೆ. ಜೊತೆಗೆ ವೃತ್ತಿಪರ ಆಪ್ತ ಸಮಾಲೋಚನೆ ಕೋರ್ಸ್‍ಗಳು ಕೂಡ ಇಲ್ಲಿ ಲಭ್ಯವಿದೆ. ಅವು ಸಧ್ಯ ಹಾಗೂ ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆಯಿರುವ ಕೌನ್ಸೆಲಿಂಗ್ ಮತ್ತು ಮಾರ್ಗದರ್ಶನ ಕ್ಷೇತ್ರಕ್ಕೆ ಪೂರಕವಾದ ವೃತ್ತಿಪರ ಕೋರ್ಸ್‍ಗಳು. ಉಳಿದಂತೆ ಮುಂದಿನ ದಿನಗಳಲ್ಲಿ NIOS (NATIONAL INSTITUTE OF OPEN SCHOOLING) ರೀತಿಯ ಹೊಸ ವಿಭಾಗಗಳು ಸೇರಿಸುವ ಆಶಯವಿದೆ ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಆಕಾಡೆಮಿಕ್ ಲೀಡ್ ವಿಲ್ಮಾ ಡಿಸಿಲ್ವಾ, ಪ್ರಾಂಶುಪಾಲರಾದ ವಿನುತಾ ಬಿ ಶೆಟ್ಟಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!