spot_img
Saturday, May 2, 2026
spot_img

ವಂಡ್ಸೆ ಮುಖ್ಯರಸ್ತೆಗೆ ಬೇಕು ವೇಗ ನಿಯಂತ್ರಕ| ಹೆಚ್ಚಿದ ಸಂಚಾರ ದಟ್ಟಣೆ, ವಾಹನಗಳ ವಾಯುವೇಗಕ್ಕೆ ಬೇಕು ಕಡಿವಾಣ

ಕುಂದಾಪುರ: ಜನಪ್ರತಿನಿಧಿ ವಾರ್ತೆ] ವಂಡ್ಸೆ-ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿ ವಾಹನ ಜಂಗುಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಾ ಇದೆ. ಈಗಂತೂ ಹುಲಿಕಲ್ ಘಾಟ್ ಸಂಚಾರ ನಿರ್ಭಂಧ ಇರುವುದರಿಂದ ಈ ಮಾರ್ಗದಲ್ಲಿ ವಾಹನ ನಿಬಿಡತೆ ಸಹಜವಾಗಿ ಹೆಚ್ಚಾಗಿದೆ. ವಂಡ್ಸೆಯ ಮುಖ್ಯರಸ್ತೆಯಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಒಂದು ತಿಂಗಳ ಒಳಗೆ ಮೂರು ರಸ್ತೆ ಅಪಘಾತಗಳು ಸಂಭವಿಸಿ ಎರಡು ಜೀವಹಾನಿ ಆಗಿದೆ.

ಕೊಲ್ಲೂರು, ಮಾರಣಕಟ್ಟೆ ಮೊದಲಾದ ಧಾರ್ಮಿಕ ಸ್ಥಳಗಳಿಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಯಾತ್ರಾರ್ಥಿಗಳು ಆಗಮಿಸುತ್ತಾರೆ. ವಂಡ್ಸೆ ಮೂಲಕ ಕೊಲ್ಲೂರಿಗೆ ಹೋಗುವುದೇ ಪ್ರಮುಖವಾದ ರಸ್ತೆ ಮಾರ್ಗವಾದ್ದರಿಂದ ಎಲ್ಲ ವಾಹನಗಳು ಈ ರಾಜ್ಯ ಹೆದ್ದಾರಿಯಲ್ಲಿಯೇ ಓಡಾಡುತ್ತಿವೆ. ರಸ್ತೆ ಈ ಭಾಗದಲ್ಲಿ ತಿರುವು ಹಾಗೂ ಇಕ್ಕಟ್ಟಿನಿಂದ ಕೂಡಿರುವುದರಿಂದ ಅತೀ ವೇಗದ ಚಾಲನೆಯಿಂದ ಅಪಘಾತಗಳು ಸಂಭವಿಸುತ್ತಾ ಇವೆ.

ವಂಡ್ಸೆ ಮುಖ್ಯ ರಸ್ತೆಯಲ್ಲಿ ಪಾದಚಾರಿಗಳು, ಶಾಲಾ ಮಕ್ಕಳು ನಡೆದಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ದಿನಗಳ ಹಿಂದೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಕಾರು ಅಪ್ಪಳಿಸಿ ಮಹಿಳೆ ಮೃತ ಪಟ್ಟಿದ್ದಾರೆ. ವಾಹನಗಳ ವೇಗ ದಿನದಿಂದ ಹೆಚ್ಚಾಗುತ್ತಾ ಇದ್ದು, ತುರ್ತಾಗಿ ರಸ್ತೆಗೆ ವೇಗ ನಿಯಂತ್ರಕ (ಹಂಪ್ಸ್) ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹ ಪಡಿಸಿದ್ದಾರೆ.

ವಂಡ್ಸೆ ರಿಕ್ಷಾ ನಿಲ್ದಾಣದ ಹತ್ತಿರ ಹಾಗೂ ಶಾಲಾ ರಸ್ತೆಯ ಹತ್ತಿರ ಹಂಪ್ಸ್ ಅಳವಡಿಸಲೇ ಬೇಕು ಎಂದು ಸ್ಥಳೀಯ ನಾಗರಿಕರು ಸಂಬಂಧಪಟ್ಟ ಇಲಾಖೆಗೆ ಆಗ್ರಹ ಮಾಡಿದ್ದಾರೆ. ಈ ಹಿಂದೆ ಗ್ರಾಮ ಸಭೆಗಳಲ್ಲಿಯೂ ಕೂಡಾ ಇದೇ ಆಗ್ರಹ ವ್ಯಕ್ತವಾದರೂ ಕೂಡಾ ಇಲಾಖೆಗಳು ಇನ್ನೂ ರಸ್ತೆಗೆ ವೇಗ ನಿಯಂತ್ರಕ ಅಳವಡಿಸುವ ಮನಸ್ಸು ಮಾಡಿಲ್ಲ. ಇನ್ನಾದರೂ ವಂಡ್ಸೆಯಲ್ಲಿ ಸಂಭವಿಸಿರುವ ಅಪಘಾತ, ಪ್ರಾಣಹಾನಿಯ ಆಧಾರದ ಮೇಲಾದರೂ ವೇಗ ನಿಯಂತ್ರಕ ಅಳವಡಿಸಿ, ವಾಹನಗಳ ನಾಗಾಲೋಟಕ್ಕೆ ಕಡಿವಾಣ ಹಾಕಲೇಬೇಕಾಗಿದೆ.

ವಂಡ್ಸೆ ಹೋಬಳಿ ಕೇಂದ್ರ. ಇಡೀ ಹೋಬಳಿಯ ಜನ ಬರುತ್ತಾರೆ. ಸರಕಾರಿ ಕಛೇರಿ, ರೈತಸಂಪರ್ಕ ಕೇಂದ್ರ, ಆಸ್ಪತ್ರೆ, ಶಾಲೆ, ಗ್ರಾಮ ಪಂಚಾಯತಿ, ನಾಡ ಕಛೇರಿ, ಬ್ಯಾಂಕ್ ಇತ್ಯಾದಿ ಅವಶ್ಯಕತೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗಬೇಕು, ರಸ್ತೆ ದಾಟಬೇಕು. ಆದರೆ ಇಲ್ಲಿ ವಾಹನ ನಿಬಿಡತೆಯಿಂದ ರಸ್ತೆ ದಾಟುವುದೇ ಸವಾಲಾಗುತ್ತದೆ. ಈಗಂತೂ ವಾಹನ ದಟ್ಟಣೆ ವ್ಯಾಪಕವಾಗಿದೆ.

ಕುಂದಾಪುರ, ನೇರಳಕಟ್ಟೆ, ಸಿದ್ಧಾಪುರ, ಅಂಪಾರು ಕಡೆಗೆ ಇದೇ ಮಾರ್ಗ ಅನುಸರಿಸಿ ಹೋಗಬೇಕಾದ್ದರಿಂದ ಈ ರಸ್ತೆ ರಾತ್ರಿ ಹಗಲು ವಾಹನ ನಿಬಿಡತೆಯಿಂದ ಕೂಡಿರುತ್ತದೆ. ಬಹುತೇಕ ವಾಹನಗಳು ಅತೀ ವೇಗವಾಗಿ ಸಂಚರಿಸುತ್ತವೆ. ಗ್ರಾಮೀಣ ಭಾಗ, ಶಾಲೆ, ಆಸ್ಪತ್ರೆ, ಹಿರಿಯ ನಾಗರಿಕರು, ಮಕ್ಕಳು ರಸ್ತೆ ದಾಟುತ್ತಾರೆ ಎನ್ನುವ ಸಾಮಾನ್ಯ ಜ್ಞಾನವೂ ಕೆಲವೊಂದು ವಾಹನ ಚಾಲಕರು ಅತೀ ವೇಗವಾಗಿ ವಾಹನ ಓಡಿಸುತ್ತಾರೆ. ವಾಹನಗಳ ನಾಗಾಲೋಟಕ್ಕೆ ರಸ್ತೆಗೆ ಹಂಪ್ ಅಳವಡಿಸುವ ಮೂಲಕ ನಿಯಂತ್ರಣ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!