spot_img
Friday, May 1, 2026
spot_img

ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕರ್ಣೆಗೆ 5.29 ಕೋಟಿ ರೂ ಲಾಭ: 1290 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ

 ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘವಾಗಿರುವ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕಣೆಯು 2025-26ನೇ ಸಾಲಿನಲ್ಲಿ 1290 ಕೋಟಿ ರೂ ವಾರ್ಷಿಕ ವ್ಯವಹಾರ ನಡೆಸಿ 5.29 ಕೋಟಿ ರೂ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಬಿ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಸಂಘವು 2025-26ನೇ ಆರ್ಥಿಕ ವರ್ಷಾಂತ್ಯಕ್ಕೆ ಒಟ್ಟು 28026 ಸದಸ್ಯರನ್ನು ಹೊಂದಿದ್ದು, ವರದಿ ವರ್ಷಾಂತ್ಯಕ್ಕೆ 186.84 ಕೋಟಿ ಠೇವಣಿ ಸಂಗ್ರಹಿಸಿರುತ್ತದೆ. ಸಂಘವು ಶೂನ್ಯ ಬಡ್ಡಿದರದ ಬೆಳೆ ಸಾಲ ಮತ್ತು ಪಶುಸಂಗೋಪನಾ ಸಾಲವನ್ನು ಬ್ರಹ್ಮಾವರ ತಾಲೂಕಿನಲ್ಲಿಯೇ ಅತೀ ಹೆಚ್ಚು ವಿತರಣೆ ಮಾಡಿರುವ ಹೆಮ್ಮೆಯ ರೈತ ಸೇವಾ ಸಹಕಾರಿ ಸಂಘವಾಗಿದೆ. ಅಲ್ಲದೆ ಗ್ರಾಹಕರ ಅನುಕೂಲಕ್ಕಾಗಿ ಚಿನ್ನಾಭರಣ ಈಡಿನ ಸಾಲ, ಗೃಹ ನಿರ್ಮಾಣ, ವಾಹನ ಖರೀದಿ, ಸ್ವಸಹಾಯ ಗುಂಪು ಸಾಲ, ಉಚಾಪತಿ ಸಾಲ, ಉತ್ಪತ್ತಿ ಈಡಿನ ಸಾಲ, ಸೇರಿದಂತೆ ವಿವಿಧ ರೀತಿಯ ಸಾಲ ಸೌಲಭ್ಯವನ್ನು ಸದಸ್ಯರಿಗೆ ನೀಡುತ್ತಿದ್ದು, 2025-26ನೇ ಸಾಲಿನ ವರ್ಷಾಂತ್ಯಕ್ಕೆ 169.35 ಕೋಟಿ ರೂ ಒಟ್ಟು ಸಾಲ ಹೊರಬಾಕಿಯನ್ನು ಹೊಂದಿ 97.39 ಶೇ ವಸೂಲಾತಿಯನ್ನು ದಾಖಲಿಸಿದೆ. ಸಂಘವು ಒಟ್ಟು 13.16 ಕೋಟಿ ರೂ ನಿಧಿ ಹಾಗೂ 62.92 ಕೋಟಿ ರೂ ಹೂಡಿಕೆ ಹೊಂದಿದ್ದು, ಒಟ್ಟು 236.18 ಕೋಟಿ ರೂ ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ.

ಸಂಘದ ಏಳು ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರಧಾನ ಕಛೇರಿ ಮತ್ತು ಕೊಕ್ಕರ್ಣೆ ಶಾಖೆಗೆ ಗೊದಾಮು ಒಳಗೊಂಡಂತೆ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣದ ರೂಪುರೇಷೆ ಸಿದ್ದಗೊಂಡಿದ್ದು ಶಿಲಾನ್ಯಾಸಕ್ಕೆ ದಿನಾಂಕ ನಿಗದಿ ಪಡಿಸಲಾಗಿದೆ.

ಸಂಘವು ಬ್ಯಾಂಕಿಂಗ್ ವ್ಯವಹಾರ ಅಲ್ಲದೇ ಅತೀ ಕಡಿಮೆ ಬೆಲೆಯಲ್ಲಿ ರಾಸಾಯನಿಕ ರಸಗೊಬ್ಬರ, ಸಾವಯವ ಗೊಬ್ಬರ, ಕೃಷಿ ಉಪಕರಣ, ಬಿತ್ತನೆ ಬೀಜ, ಗೃಹೋಪಯೋಗಿ ವಸ್ತುಗಳು, ಸಿಮೆಂಟ್, ಮತ್ತು ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮಾರಾಟ ಮಳಿಗೆಯನ್ನು ಹೊಂದಿರುತ್ತದೆ.

ಸಂಘವು ಸರ್ಕಾರದ ಮಹತ್ವಾಕಾಂಕ್ಷೆಯ ಬೆಳೆ ವಿಮೆ ಯೋಜನೆಯನ್ನು ಯಶ್ವಸಿಯಾಗಿ ಕಾರ್ಯವ್ಯಾಪ್ತಿಯ ರೈತರಿಗೆ 2016ರಿಂದ ಅಳವಡಿಸಿದ್ದು, ಬ್ರಹ್ಮಾವರ ತಾಲೂಕಿನಲ್ಲಿಯೇ ಅತೀ ಹೆಚ್ಚು ಬೆಳೆ ವಿಮೆಯನ್ನು ದೊರಕಿಸಿ ಕೊಟ್ಟ ಸಹಕಾರಿ ಸಂಘವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯಶಸ್ವಿನಿ ಯೋಜನೆಯಲ್ಲಿಯೂ ಕೂಡ ಸಂಘದ ಅತೀ ಹೆಚ್ಚು ಸದಸ್ಯರನ್ನು ಅಳವಡಿಸಲಾಗಿದೆ.

ಸಾಮಾಜಿಕ ಜವಾಬ್ದಾರಿ ಹಾಗೂ ಹಲವಾರು ಸಮಾಜಮುಖಿ ಕಾರ್ಯಗಳೊಂದಿಗೆ ಮುಂದುವರೆಯುತ್ತಿರುವ ಸಹಕಾರಿ ಸಂಘವು ಕಾರ್ಯವ್ಯಾಪ್ತಿಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ 12 ಲಕ್ಷಕ್ಕೂ ಅಧಿಕ ಪ್ರೋತ್ಸಾಹ ಧನ ವಿತರಿಸಿದ್ದು, ಸಾರ್ವಜನಿಕ ಉಪಕಾರ ನಿಧಿ, ಸಂಘ ಸಂಸ್ಥೆ ಮತ್ತು ಧಾರ್ಮಿಕ ದೇಣಿಗೆ ನಿಧಿ, ರೈತರ ಕಲ್ಯಾಣ ನಿಧಿಯಿಂದ ಸಹಾಯ ಹಸ್ತವನ್ನು ನೀಡುತ್ತಾ ಬಂದಿರುತ್ತದೆ. ಮರಣೋತ್ತರ ನಿಧಿಯ ಮೂಲಕ ಸಾಲಗಾರ ಸದಸ್ಯರು ಮರಣ ಹೊಂದಿದ ಸಂದರ್ಭದಲ್ಲಿ ಸದಸ್ಯರ ಅವಲಂಬಿತರನ್ನು ಋಣ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!